ನನ್ನ ಗೂಡಿನಲ್ಲಿಹಳ್ಳಿ ಸೊಗಡಿನ ಗೌರಿ-ಗಣೇಶ ! (ಬಾಟಂ)

Contributed byshivusidnal@gmail.com|Vijaya Karnataka
attractive mandap with special traditional gauri ganesh
ಶಿಕ್ಷಕ ದಂಪತಿ ನಿವಾಸದಲ್ಲಿಆಕರ್ಷಕ ಮಂಟಪ | ಗಣೇಶೋತ್ಸವದ ವಿಶೇಷ

ನನ್ನ ಗೂಡಿನಲ್ಲಿಹಳ್ಳಿ ಸೊಗಡಿನ ಗೌರಿ-ಗಣೇಶ !
ಶಿವಲಿಂಗ ಸಿದ್ನಾಳ ಮಹಾಲಿಂಗಪುರ

ಆಚರಣೆಗಳಲ್ಲಿಅರ್ಥ ಇರಬೇಕು, ಅದರಿಂದ ಸಮಾಜಕ್ಕೊಂದು ಸಂದೇಶ ಹೋಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಶಿಕ್ಷಕ ದಂಪತಿ ತಮ್ಮ ಮನೆಯಲ್ಲಿಪ್ರತಿಷ್ಠಾಪಿಸಿದ ಹಳ್ಳಿ ಸೊಗಡಿನ ಗೌರಿ ಗಣೇಶ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ.

ಚಿಮ್ಮಡದ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಶಿಕ್ಷಕ ದಂಪತಿ ಅಡಿವೆಪ್ಪ ಹೂಲಿ ಮತ್ತು ದೀಪಾ ಮಳಲಿ ಅವರು ಪಟ್ಟಣದಲ್ಲಿರುವ ತಮ್ಮ ‘ನನ್ನ ಗೂಡು’ ನಿವಾಸದಲ್ಲಿಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಮನ ಸೆಳೆದಿದ್ದಾರೆ.

ಮನೆಯಲ್ಲಿ10*7 ಅಡಿ ಅಳತೆಯ ಸಾಂಪ್ರದಾಯಿಕ ಗೋಡೆ ಮತ್ತು ಹುಲ್ಲಿನ ಚಪ್ಪರದ ಮಂಟಪ ಸಿದ್ಧಪಡಿಸಿ, ಅದರೊಳಗೆ ಅಡುಗೆ ಮಾಡುತ್ತಿರುವ ಗೌರಿ ಮತ್ತು ಊಟ ಮಾಡುತ್ತಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಆಧುನಿಕ ಭರಾಟೆಗೆ ಸಿಲುಕಿ ಮರೆತು ಹೋಗುತ್ತಿರುವ ಸಾಂಪ್ರದಾಯಿಕ ಸಾಮಗ್ರಿ ಮಂಟಪದಲ್ಲಿಪ್ರದರ್ಶಿಸಿ ನೋಡುಗರನ್ನು ಆಕರ್ಷಿಸುವಂತೆ ಮಾಡಿದ್ದಾರೆ.

ಬಿದಿರಿನ ಬುಟ್ಟಿ, ತಟ್ಟೆ, ಚಾಪೆ, ಮೊರ, ಕೊಮ್ಮಣಗಿ, ಗಡಿಗೆ, ಮಡಕೆ, ನೆಲ್ಲು, ಒಣಕೆ, ಕಡಗೋಲು, ಬೀಸುವ ಕಲ್ಲು, ವಳಕಲ್ಲು, ತಾಮ್ರದ ಬಿಂದಿಗೆ, ಕಂದೀಲು, ಬೆತ್ತದ ಕುರ್ಚಿ, ಬೀಜದ ತೆನೆ, ಕಟ್ಟಿಗೆ ಒಲೆ, ಪಿಂಗಾಣಿ ಭರಣಿ, ಬಾಳೆದೆಲೆ, ಹಿಟ್ಟು, ರೊಟ್ಟಿ, ತರಕಾರಿ, ಜವಾರಿ ಭೋಜನ ಸಾಮಗ್ರಿ ಸೇರಿದಂತೆ ಹಳ್ಳಿ ಸೊಗಡಿನ ದೃಶ್ಯ ಕಣ್ಣಿಗೆ ಕಟ್ಟುವಂತೆ ಮಂಟಪ ಸೃಷ್ಟಿಸಿದ್ದಾರೆ. ಸಾಂಪ್ರದಾಯಿಕ ಸೆಟ್ ನಲ್ಲಿಮೂಡಿ ಬಂದ ಅಪರೂಪದ ಗೌರಿ-ಗಣೇಶ ಮಂಟಪ ವೀಕ್ಷಿಸಲು ನಿತ್ಯ ನೂರಾರು ಜನ ಆಗಮಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.

-----

ದಂಪತಿ ಕಾರ್ಯಕ್ಕೆ ಮಕ್ಕಳ ಸಾಥ್

ಪರಿಸರ ಪ್ರೇಮಿ ಶಿಕ್ಷಕ ದಂಪತಿ ಪ್ರತಿ ವರ್ಷ ಒಂದೊಂದು ಪರಿಕಲ್ಪನೆ ಇಟ್ಟುಕೊಂಡು ವಿಶೇಷ ಗಣಪನ ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ. ಅದಕ್ಕಾಗಿ ವರ್ಷಪೂರ್ತಿ ತಯಾರಿ ನಡೆಸುತ್ತಾರೆ. ತಮ್ಮ ಹುಟ್ಟೂರಾದ ಮುನವಳ್ಳಿಯ ಕಲಾವಿದ ಶ್ರೀಶೈಲ ಸಂಬಾಳಮಠ ಅವರು ಮಣ್ಣಿನಿಂದ ತಯಾರಿಸಿದ ಉಭಯ ಮೂರ್ತಿಗಳನ್ನು 80 ಕಿಮೀ ದೂರದ ಪಟ್ಟಣಕ್ಕೆ ಗೂಡ್ಸ್ ವಾಹನದಲ್ಲಿತಂದಿರುವ ಶಿಕ್ಷಕ ಅಡಿವೆಪ್ಪ ಅವರು ತಮ್ಮ ಮನೆಯಲ್ಲಿಪ್ರತಿಷ್ಠಾಪಿಸಿದ್ದಾರೆ. ಅವರ ಮಕ್ಕಳಾದ ಸಾಧನಾ ಮತ್ತು ಶ್ರೀಕಾರ ಅವರು ಹಬ್ಬದ ಆಚರಣೆಗೆ ಸಾಥ್ ನೀಡಿ ಮಂಟಪಕ್ಕೆ ಮೆರುಗು ಬರುವಂತೆ ಮಾಡಿದ್ದಾರೆ.

17 ಎಂಎಲ್ ಪಿ 3, 3ಎ, 3ಬಿ, 3ಸಿ, 3ಡಿ, 3ಇ, 3ಎಫ್ , 3ಜಿ

ಮಹಾಲಿಂಗಪುರದ ಶಿಕ್ಷಕ ದಂಪತಿ ಮನೆಯಲ್ಲಿಪ್ರತಿಷ್ಠಾಪಿಸಿದ ಹಳ್ಳಿ ಸೊಗಡಿನ ಗೌರಿ-ಗಣೇಶ ಮಂಟಪದ ದೃಶ್ಯಗಳು.