ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)‘‘ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸದಿದ್ದರೆ ವಿಜಯ ನಗರ ಜಿಲ್ಲಾಬಂದ್ ಗೆ ಕರೆ ನೀಡಲಾಗುವುದು,’’ ಎಂದು ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ಬರಗಾಲದ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ನಿರಂತರ ವಿದ್ಯುತ್ ಪೂರೈಸಬೇಕು. ಜೆನ್ನಿಮಿಲ್ ್ಕ ಪ್ರಕರಣವನ್ನು ಸರಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಅಲ್ಲದೆ, ಟಿಬಿ ಡ್ಯಾಂನಿಂದ ದಾಖಲೆ ಪ್ರಕಾರ 180 ಕ್ಯುಸೆಕ್ ಬದಲಿಗೆ ಕೇವಲ 110ರಿಂದ 120 ಕ್ಯುಸೆಕ್ ನೀರು ಮಾತ್ರ ಬಿಡಲಾಗುತ್ತಿದ್ದು, ಉಳಿದ ನೀರು ಎಲ್ಲಿಹೋಗುತ್ತಿದೆ,’’ ಎಂದು ಪ್ರಶ್ನಿಸಿದರು.
ಶಾಸಕರ ಕಚೇರಿಗೆ ಮುತ್ತಿಗೆ:
‘‘ಸಕ್ಕರೆ ಕಾರಖಾನೆ ಆರಂಭಿಸುವ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮೂರು ವರ್ಷಗಳಿಂದ ಹಾರಿಕೆ ಉತ್ತರ ನೀಡಿದರು. ಕಾರಖಾನೆ ಆರಂಭಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿ ಆ.10ರಂದು ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು,’’ ಎಂದರು.
ಸಂಘದ ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ‘‘ವಿಜಯನಗರ ಕಾಲುವೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಬಿಲ್ ಪಾಸ್ ಆಗಿರುವುದು ಹಾಗೂ ಬಹುಗ್ರಾಮ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು, ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಎಂ.ಜಡಿಯಪ್ಪ, ರಾಜಶೇಖರಯ್ಯ, ದೊಡ್ಡ ಗಾಳೆಪ್ಪ, ಕೆ.ಮೂರ್ತಿ, ಆರ್ .ಆರ್ .ತಾಯಪ್ಪ ಇತರರಿದ್ದರು.