ಅರ್ಜಿ ಆಹ್ವಾನ

Contributed bysanthoshaanampalli7@gmail.com|Vijaya Karnataka
application invitation for deodurg sindhanur manvi maski sirwar and mudugal taluks
ಅರ್ಜಿ ಆಹ್ವಾನ

ರಾಯಚೂರು: ಜಿಲ್ಲೆಯ ದೇವದುರ್ಗ, ಸಿಂಧನೂರು, ಮಾನ್ವಿ, ಮಸ್ಕಿ, ಸಿರವಾರ ಹಾಗೂ ಮುದುಗಲ್ ತಾಲೂಕುಗಳಲ್ಲಿಮನೋರೋಗ ತಜ್ಞರು 6, ಸಾಮಾಜಿಕ ಕಾರ್ಯಕರ್ತೆಯರು 6 ಹುದ್ದೆಗಳಿಗೆ ಒಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮನೋರೋಗ ತಜ್ಞರ ಹುದ್ದೆಗಳಿಗೆ ಎಂಬಿಬಿಎಸ್ , ಎಂಡಿ ಹಾಗೂ ಸಾಮಾಜಿಕ ಕಾರ್ಯಕರ್ತೆಯರ ಹುದ್ದೆಗಳಿಗೆ ಎಂಎಸ್ ಡಬ್ಲ್ಯು ಮತ್ತು ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಸ್ನಾತಕೊತ್ತರ ಪದವಿ ಪೂರ್ಣಗೊಳಿಸಿರಬೇಕು. ದೃಢೀಕೃತ ದಾಖಲೆಗಳೊಂದಿಗೆ ಸೆ. 23ರೊಳಗೆ ಜಿಲ್ಲಾಮಾನಸಿಕ ಆರೋಗ್ಯ ಕಾರ್ಯಾಲಯ ವಿಭಾಗ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 8151896578ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.