ಯಲ್ಲಾಪುರ ವಿಶ್ವಕರ್ಮ

Contributed bynagarajmadguni@gmail.com|Vijaya Karnataka
vishwakarma jayanti celebration honored in yellapur
ವಿಶ್ವಕರ್ಮ ಜಯಂತ್ಯುತ್ಸವ

ವಿಕ ಸುದ್ದಿಲೋಕ ಯಲ್ಲಾಪುರ
ಪಟ್ಟಣದ ಕಾಳಮ್ಮನಗರ ದೇವಸ್ಥಾನದ ಸಭಾಭವನದಲ್ಲಿತಾಲೂಕು ಆಡಳಿತ, ತಾಪಂ, ವಿಶ್ವಕರ್ಮ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿವಿಶ್ವಕರ್ಮ ಜಯಂತ್ಯುತ್ಸವ ನಡೆಯಿತು.

ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಉದ್ಘಾಟಿಸಿ ಮಾತನಾಡಿ, ‘‘ಸಣ್ಣ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೊಸ ಪೀಳಿಗೆಯವರು ಶಿಕ್ಷಣ ಉದ್ಯೋಗದ ಬೆನ್ಹತ್ತಿ, ಪರಂಪರೆಯ ಕುಲಕಸುಬಿನಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಕುಲಕಸುಬು ಕಣ್ಮರೆಯಾಗುವ ಅಪಾಯವಿದ್ದು, ಈ ಬಗ್ಗೆ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು’’ಎಂದರು.

ವಿಶ್ವಕರ್ಮ ಪ್ರತಿಷ್ಠಾನದ ಅಧ್ಯಕ್ಷ ವೇದವ್ಯಾಸ, ಗ್ರಾಮದೇವಿ ದೇವಸ್ಥಾನದ ಅರ್ಚಕ ಗಣಪತಿ ಅಚಾರಿ ಉಪಸ್ಥಿತರಿದ್ದರು. ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಉಪನ್ಯಾಸ ನೀಡಿದರು.

ಉಪ ತಹಸೀಲ್ದಾರ್ ಕೆ.ಎಸ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ಸಾಧಕರಾದ ಅಪ್ಪ ಅಚಾರಿ,ಮಹಾದೇವ ಅಚಾರಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಿಕ್ಷಕ ಮಾರುತಿ ಅಚಾರಿ ನಿರೂಪಿಸಿದರು.

17ವೈಎಲಪಿ2

ಯಲ್ಲಾಪುರದ ಕಾಳಮ್ಮನಗರ ದೇವಸ್ಥಾನದ ಸಭಾಭವನದಲ್ಲಿನಡೆದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿವಿಶ್ವಕರ್ಮ ಸಮಾಜದ ಸಾಧಕರಾದ ಅಪ್ಪ ಅಚಾರಿ, ಮಹಾದೇವ ಅಚಾರಿ ಅವರನ್ನು ಸನ್ಮಾನಿಸಲಾಯಿತು.