ಎಮ್ಮಿಗನೂರು : ನಿಜಾಮರ ಆಳ್ವಿಕೆಯಿಂದ ಹೈದರಾಬಾದ್ ಕರ್ನಾಟಕ ನಲುಗಿ ಹೋಗಿತ್ತು. ಸಾವಿರಾರು ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದು ಒಂದು ವರ್ಷ ತಡವಾಗಿ ಅಂದರೆ 1948 ಸೆ.17 ರಂದು ವಿಮೋಚನೆಗೊಂಡಿತು. ಪಟೇಲ್ ರವರ ಸಮಚಿತ್ತದಿಂದ ಸ್ವಾತಂತ್ರ್ಯ ಸಿಕ್ಕಿತು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಅಭಿವೃದ್ಧಿಯಾಗಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಗ್ರಾಪಂ ಪಿಡಿಒ ಹಾಲರವಿ ಶೇಷಗಿರಿ ಹೇಳಿದರು.ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಈ ವೇಳೆ ಕರವಸೂಲಿಗಾರ ಎಚ್ . ಗಾದಿಲಿಂಗಪ್ಪ, ಸಾಯಿಬಣ್ಣ, ವೈ.ರಾಜಶೇಖರ್ , ಎಚ್ . ಈಶ್ವರ, ಕಾಗಿ ಹೊನ್ನಪ್ಪ, ಬಾಲೇಸಾಬು ಇದ್ದರು.
17 ವೈಎಂಜಿ 2
ಎಮ್ಮಿಗನೂರು ಗ್ರಾಮದ ಗ್ರಾಮ ಪಂಚಾಯಿತಿಯ ಆವರಣದಲ್ಲಿಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣವನ್ನು ಪಿಡಿಒ ಹಾಲರವಿ ಶೇಷಗಿರಿ ನೆರವೇರಿಸಿದರು.