ವಿಶ್ವಕರ್ಮ ಜಯಂತಿ ಆಚರಣೆ

Contributed bynandagudinagaraja77@gmail.com|Vijaya Karnataka
vishwakarma jayanti celebrated with grandeur
ವಿಶ್ವಕರ್ಮ ಜಯಂತಿ ಆಚರಣೆ

ವಿಕ ಸುದ್ದಿಲೋಕ ನಂದಗುಡಿ
ಕಲೆ ಮತ್ತು ವಾಸ್ತು ಶಿಲ್ಪ ಕ್ಷೇತ್ರದಲ್ಲಿಕೊಡುಗೆ ನೀಡಿದ ವಿಶ್ವಕರ್ಮರು ಜನಮಾನಸದಲ್ಲಿಅಜರಾಮರವಾಗಿ ಉಳಿದಿದ್ದಾರೆ ಎಂದು ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಮಠದ ಟ್ರಸ್ಟಿನ ಅಧ್ಯಕ್ಷ ಬಾಲಸುಬ್ರಮಣ್ಯಚಾರಿ ಹೇಳಿದರು.

ನಂದಗುಡಿಯಲ್ಲಿರುವ ಶ್ರೀಮದ್ವಿವಿರಾಟ್ ಪೋತಲೂರು ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದಲ್ಲಿಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ. ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿವಿಶ್ವಕರ್ಮರ ಕಲೆಯ ಜೀವಂತಿಕೆಯ ಇಂದಿಗೂ ಉಳಿಸಿರುವುದೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ದೇವಾಲಯದಲ್ಲಿವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಮಾಜಿ ಸದಸ್ಯ ಸುಬ್ರಮಣಿ, ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಮಠದ ಟ್ರಸ್ಟ್ ನ ನಿರ್ದೇಶಕರಾದ ಮಂಜುನಾಥಚಾರಿ, ವೆಂಕಟೇಶಸ್ವಾಮಿ, ಗೋವಿಂದಮ್ಮ, ಜೈಲಲಿತ, ಮೀನಾಕ್ಷಿಮ್ಮ, ಪುರೋಹಿತರಾದ ಬ್ರಹ್ಮಚಾರಿ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

18 ನಂದಗುಡಿ 1. ನಂದಗುಡಿಯಲ್ಲಿರುವ ಶ್ರೀಮದ್ವಿವಿರಾಟ್ ಪೋತಲೂರು ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದಲ್ಲಿವಿಶ್ವಕರ್ಮ ಜಯಂತಿ ಆಚರಿಸಲಾಯಿತು.