- 25 ಹುದ್ದೆಗಳ ಭರ್ತಿಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಬರುವ ನೌಕರರ ರಾಜ್ಯ ವಿಮಾ ನಿಗಮದಲ್ಲಿಐಸಿಟಿ ವಿಭಾಗದ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಯೂನಿಟ್ ಗೆ ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ನೇಮಕಾತಿಯಡಿಯಲ್ಲಿಪ್ರಾಜೆಕ್ಟ್ ಡೈರೆಕ್ಟರ್ , ಐಟಿ ಆಪರೇಷನ್ಸ್ ಲೀಡ್ , ಸಿಸ್ಟಮ್ ಅಡ್ಮಿನಿಸ್ಪ್ರೇಟರ್ , ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಹಾಗೂ ಮುಂತಾದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಸಕ್ತರು ಅಧಿಧಿಸೂಚನೆ ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಿತ ಎಂಜಿನಿಯರಿಂಗ್ ಸ್ಟ್ರೀಮ್ ನಲ್ಲಿ(ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಸೈನ್ಸ್ , ಥಟಿ ಹಾಗೂ ಟೆಲಿಕಾಂ) ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ಎಂಸಿಎ ಅಥವಾ ಎಂಬಿಬಿಎಸ್ ಹಾಗೂ ನಿರ್ದಿಷ್ಟ ಹುದ್ದೆಗಳಿಗೆ ತಕ್ಕಂತೆ ಕನಿಷ್ಠ 6ರಿಂದ 20 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯು ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ 18 ವರ್ಷಗಳಿಗಿಂತ ಕಡಿಮೆ ಇರಬಾರದು ಮತ್ತು ಗರಿಷ್ಠ 62 ವರ್ಷಗಳನ್ನು ಮೀರಿರಬಾರದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ತಿಂಗಳಿಗೆ 80,000ದಿಂದ 3,30,000 ರೂ. ವರೆಗೆ ವೇತನ ದೊರಕಲಿದೆ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಇಮೇಲ್ ವಿಳಾಸ ಘ್ಕಿಛಿsಠಿಠಿ3-್ಟಛ್ಚಿ್ಟ್ಠಜಿಠಿಞಛ್ಞಿಠಿ.hಟಿಃಛಿsಜ್ಚಿ.ಜಟv.ಜ್ಞಿಕ್ಕೆ ತಮ್ಮ ಅರ್ಜಿಗಳನ್ನು ಪಿಡಿಎಫ್ ರೂಪದಲ್ಲಿಕಳುಹಿಸುವಂತೆ ಅಧಿಸೂಚನೆಯಲ್ಲಿತಿಳಿಸಿದೆ.