ಇಂದು, ನಾಳೆ ವಿಶೇಷ ನೋಂದಣಿ (ಸೆಕಂಡ್ ಲೀಡ್ )

Contributed byravideshpande77@gmail.com|Vijaya Karnataka
are you ready for the special voter registration in bagalkote
ಮತದಾರರ ಪಟ್ಟಿಯ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ | ಜಿಲ್ಲಾಧಿಕಾರಿ ಸಂಗಪ್ಪ ಮಾಹಿತಿ

ಇಂದು, ನಾಳೆ ವಿಶೇಷ ನೋಂದಣಿ
ವಿಕ ಸುದ್ದಿಲೋಕ ಬಾಗಲಕೋಟೆ

‘‘ಮತದಾರರ ಪಟ್ಟಿಯ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿಜಿಲ್ಲೆಯಾದ್ಯಂತ ಸೆ.19 ಮತ್ತು 20 ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ,’’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿನಾನಾ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಹಾಗೂ ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ಮಾಹಿತಿ ನೀಡಿದರು.

‘‘ಜಿಲ್ಲೆಯ ಎಲ್ಲಮತಗಟ್ಟೆ ಮಟ್ಟದಲ್ಲಿಯೂ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿತಮ್ಮ ಹೆಸರು ನೋಂದಾಯಿಸಲು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. 18 ವರ್ಷ ಪೂರ್ಣಗೊಳಿಸಿರುವ ಯುವಜನರು ಸೇರಿದಂತೆ ಇದುವರೆಗೆ ಮತದಾರರ ಪಟ್ಟಿಯಲ್ಲಿಹೆಸರು ಸೇರ್ಪಡೆಯಾಗದ ಅರ್ಹ ನಾಗರಿಕರು ನೋಂದಣಿ ಪ್ರಕ್ರಿಯೆಯಲ್ಲಿಭಾಗವಹಿಸುವಂತೆ,’’ ಜಿಲ್ಲಾಧಿಕಾರಿ ಮನವಿ ಮಾಡಿದರು.

‘‘ಮತದಾರರ ಪಟ್ಟಿಯಲ್ಲಿಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳಲ್ಲಿತಿದ್ದುಪಡಿ ಅಗತ್ಯವಿದ್ದಲ್ಲಿನಿಯಮಾನುಸಾರ ಅರ್ಜಿ ಸಲ್ಲಿಸಿ ಅಗತ್ಯ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿಇರುವುದನ್ನು ಪರಿಶೀಲಿಸಿಕೊಂಡು ಅಗತ್ಯವಿದ್ದಲ್ಲಿನೋಂದಣಿ ಅಥವಾ ತಿದ್ದುಪಡಿ ಪ್ರಕ್ರಿಯೆ ಕೈಗೊಳ್ಳುವಂತೆ,ಮನವಿ ಮಾಡಿದರು.

ಸಭೆಯಲ್ಲಿಚುನಾವಣಾ ವಿಭಾಗದ ಶಿರಸ್ತೇದಾರ್ ಮಹೇಶ ಪಾಂಡವ ಸೇರಿದಂತೆ ರಾಜಕೀಯ ಪ್ರತಿನಿಧಿಗಳಾದ ಪ್ರಭು ಹಳ್ಳೂರ, ಕೃಷ್ಣಾ ಪಾಟೀಲ, ಶರದ ಪಾಟೀಲ ಹಾಗೂ ಮಲ್ಲುಮುತ್ತಪ್ಪನವರ ಉಪಸ್ಥಿತರಿದ್ದರು.

--------

ಅರ್ಜಿ ಸಲ್ಲಿಸಲು 23 ಕೊನೆಯ ದಿನ

‘‘ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿಸೆ.23 ರವರೆಗೆ ನೋಂದಣಿ ಹಾಗೂ ತಿದ್ದುಪಡಿಗೆ ಸಂಬಂಧಿತ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಅ.27 ರಂದು ಪ್ರಕಟಿಸಲಾಗುತ್ತದೆ,’’ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.

-----------

ಎಸ್ ಐಆರ್ -ಬಿಜಿಕೆ-18

ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು.