ಪ್ರಜಾಸೇವೆ ಹೆಸರಿನಲ್ಲಿಅಧಿಕಾರಿಗಳನ್ನು ಅವಮಾನಿಸುವ ವ್ಯವಸ್ಥೆ ನಿಲ್ಲಲಿ
ವಿಕ ಸುದ್ದಿಲೋಕ ಕೊಪ್ಪಪ್ರಜಾಸೇವೆ ಕಾರ್ಯಕ್ರಮದ ಹೆಸರಿನಲ್ಲಿಅಧಿಕಾರಿಗಳನ್ನು ಅವಮಾನಿಸುವ ವ್ಯವಸ್ಥೆ ನಿಲ್ಲಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್ .ಶೆಟ್ಟಿ ಒತ್ತಾಯಿಸಿದರು.
ಪಕ್ಷದ ಕಚೇರಿಯಲ್ಲಿಬುಧವಾರ ನೀಡಿದ ಹೇಳಿಕೆಯಲ್ಲಿ
ಕಾರ್ಯಕ್ರಮವನ್ನು ಜನರ ಸಮಸ್ಯೆ ಬಗೆಹರಿಸಿಕೊಳ್ಳುವ ಸಲುವಾಗಿ ಸರಕಾರ ಆಯೋಜಿಸಿದೆ. ಆದರೆ, ಇತ್ತೀಚೆಗೆ ಪುರಭವನದಲ್ಲಿಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿಸಾರ್ವಜನಿಕರ ಎದುರು ಅಧಿಕಾರಿಗಳನ್ನು ನಿಂದಿಸಿದ್ದು ಸರಿಯಲ್ಲ. ಸಾರ್ವಜನಿಕರ ಎದುರು ಚಪ್ಪಾಳೆ ಗಳಿಸುವ ಸಲುವಾಗಿ ಶಾಸಕರಂತಹ ಜವಾಬ್ದಾರಿಯುತ ಜನಪ್ರತಿನಿಧಿಗಳು ಹಗುರವಾದ ಮಾತನ್ನಾಡಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ.
ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು ಸಾರ್ವಜನಿಕವಾಗಿ ಅವಮಾನಿಸುವುದು ತರವಲ್ಲ. ಅಧಿಕಾರಿಗಳು ಭ್ರಷ್ಟರು ಎಂದು ಶಾಸಕರೇ ಹೇಳಿದ ಮೇಲೆ ಅವರನ್ನು ಇಲ್ಲಿಇರಿಸಿದ್ದು ಏಕೆ ಎಂಬ ಪ್ರಶ್ನೆ ಕಾಣುತ್ತದೆ. ಪ್ರಜಾಸೇವೆ ಯಾವುದೆ ರಾಜಕೀಯ ಪಕ್ಷದ ಸೇವೆಯಲ್ಲ. ಜನರ ಸಮಸ್ಯೆ, ಅಧಿಕಾರಿಗಳ ಉತ್ತರದಾಯಿತ್ವ, ಕಾಲಮಿತಿಯ ಪರಿಹಾರ ಇವು ಕಾರ್ಯಕ್ರಮದ ಉದ್ದೇಶವಾಗಲಿ ಎಂದು ಹೇಳಿಕೆಯಲ್ಲಿಸಲಹೆ ನೀಡಿದ್ದಾರೆ.