ಲೀಡ್ .....

Contributed byabhijeet.dhp@gmail.com|Vijaya Karnataka
farmers submitted a request for 7 hours of three phase electricity supply
ಮನವಿ ಸಲ್ಲಿಸಿ ಸರಕಾರಕ್ಕೆ ರೈತರ ಆಗ್ರಹ

ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಿ
ವಿಕ ಸುದ್ದಿಲೋಕ ದೇವರಹಿಪ್ಪರಗಿ

ತಾಲೂಕಿನಾದ್ಯಂತ ತೀವ್ರ ಬರಗಾಲದ ಛಾಯೆ ಆವರಿಸಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಹೀಗಾಗಿ ರೈತರ ಜಮೀನುಗಳಿಗೆ ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಗೆ ಮನವಿ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಉಪಾಧ್ಯಕ್ಷ ಸಂಪತ್ ಜಮಾದಾರ ಹಾಗೂ ಯುವ ರೈತ ಮುಖಂಡ ಕಾಸು ಅಗಸರ, ‘‘ಈ ಬಾರಿ ಭೀಕರ ಬರಗಾಲ ಎದುರಾಗಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಜಮೀನುಗಳಲ್ಲಿಅಂತರ್ಜಲ ಕುಸಿದಿದ್ದು, ಇರುವ ನೀರನ್ನು ಬೆಳೆಗಳಿಗೆ ಹಾಯಿಸಲು ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪ್ರತಿದಿನ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಿದರೆ ಮಾತ್ರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ’’ ಎಂದರು.

‘‘ಅಲ್ಲದೆ ತಾಲೂಕಿನ ಬಹುತೇಕ ಜಮೀನುಗಳಿಗೆ ತೆರಳಲು ಸೂಕ್ತ ದಾರಿ ಇಲ್ಲದೆ ಕೃಷಿ ಯಂತ್ರೋಪಕರಣ ಹಾಗೂ ಬೆಳೆದ ಬೆಳೆಗಳನ್ನು ಮನೆಗೆ ತರಲು ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಹೊಲದ ದಾರಿಗಳನ್ನು ಗುರುತಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು’’ ಎಂದು ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ರೈತರು ಮನವಿ ಸಲ್ಲಿಸಿದರು.

ಪ್ರಮುಖರಾದ ಪ್ರಕಾಶ ಗುಡಿಮನಿ, ಕಾಶೀನಾಥ ಕೋರಿ, ಮುನೀರ್ ಅಹ್ಮದ್ ಮಳಖೇಡ, ವೀರೇಶ ಕುದರಿ, ಸಂತೋಷ ಕುಲಕರ್ಣಿ, ರಾಜಕುಮಾರ ನಾಟಿಕಾರ, ಶ್ರೀಕಾಂತ ಭಜಂತ್ರಿ, ಜಬ್ಬಾರ ಚೌಧರಿ, ಮಲಕಪ್ಪ ಬಾಗೇವಾಡಿ, ನಿಂಗೂ ದಾನಗೊಂಡ, ಕಲ್ಲನಗೌಡ ಪಾಟೀಲ, ಬಸನಗೌಡ ಪಾಟೀಲ, ಅಶೋಕ ನಾಯ್ಕೋಡಿ, ಈರಪ್ಪ ಮಸಿಬಿನಾಳ, ಶಾಂತಪ್ಪ ದೇವೂರ, ರಾಮು ಗಿಡುಕಾರ, ರಾಜು ನಾಟೀಕಾರ, ಮುದುಕಪ್ಪ ಮೆಟಗಾರ, ಬಾಬು ವಗ್ಗರ, ರಮೇಶ ದೇವೂರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

18ಡಿಎಚಪಿ03

ಕೃಷಿ ಜಮೀನುಗಳಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಹಾಗೂ ಹೊಲಗಳಿಗೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ದೇವರಹಿಪ್ಪರಗಿಯಲ್ಲಿರೈತರು ಮನವಿ ಸಲ್ಲಿಸಿದರು.

ಕೋಟ್

ಸೂಕ್ತ ರಸ್ತೆ ಸಂಪರ್ಕವಿಲ್ಲದೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುವಂತಾಗಿದೆ. ಮಳೆಗಾಲದಲ್ಲಿಹೊಲದ ದಾರಿಗಳು ಕೆಸರುಮಯವಾಗಿ ಟ್ರ್ಯಾಕ್ಟರ್ , ಎತ್ತಿನ ಬಂಡಿ ಅಥವಾ ಕೃಷಿ ಯಂತ್ರೋಪಕರಣಗಳನ್ನು ಒಯ್ಯುವುದು ಕಷ್ಟಸಾಧ್ಯವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸರ್ವೆ ನಡೆಸಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

-ದಿನೇಶಗೌಡ ಪಾಟೀಲ, ರೈತ ಮುಖಂಡ, ದೇವರಹಿಪ್ಪರಗಿ.