ವಿಕ ಸುದ್ದಿಲೋಕ ಮುಂಡಗೋಡಗಣ ಎಂದರೆ ಸಮೂಹ, ಪತಿ ಎಂದರೆ ಒಡೆಯ. ಗಣಪತಿ ಎಂದರೆ ಶಕ್ತಿ ಗಣಗಳ ಒಡೆಯ. ಇಂತಹ ಗಣಪತಿಯನ್ನು ಕೇವಲ ಮೂರ್ತಿಯಲ್ಲಿಪ್ರತಿಷ್ಠಾಪಿಸುವುದಲ್ಲದೆ ನಮ್ಮ ಹೃದಯದಲ್ಲೂಪ್ರತಿಷ್ಠಾಪಿಸಿಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ನುಡಿದರು.
ಪಟ್ಟಣದ ಹೊಸ ಓಣಿ ಮಿತ್ರ ಮಂಡಳಿಯ 25ನೇ ವರ್ಷದ ಶ್ರೀಗಜಾನನೋತ್ಸವದ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
‘‘ಗಣಪತಿಯ ತೇಜಸ್ಸು ಕೋಟಿ ಸೂರ್ಯರ ಪ್ರಕಾಶಕ್ಕೆ ಸಮಾನವಾಗಿದೆ. ನಮ್ಮ ಬುದ್ಧಿಶಕ್ತಿ, ವಿವೇಕಶಕ್ತಿ ಕೂಡ ಸೂರ್ಯನಂತೆ ಪ್ರಕಾಶಿಸಿ, ನಮ್ಮೊಳಗಿನ ದುರ್ವಿಚಾರಗಳನ್ನು ವಿಸರ್ಜಿಸಿ ಸನ್ಮಾರ್ಗದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅಕ್ಷರಗಳನ್ನು ಹೊಂದಿಸಿ ಬರೆದಾಗ ಶಬ್ದಕ್ಕೆ ಅರ್ಥ ಬರುವಂತೆ ಮನೆಯಲ್ಲಿಪರಸ್ಪರ ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳಿದಾಗ ಬದುಕಿಗೂ ಅರ್ಥ ಬರುತ್ತದೆ. ನಮ್ಮನ್ನು ನಿರಾಸೆಗೊಳಿಸುವ ಚಿಂತೆಗೀಡು ಮಾಡುವ ಹಾಗೂ ಜೀವನದಲ್ಲಿಮುನ್ನಡೆಸಲು ಅಡ್ಡಿಯಾಗುವ ದುರ್ಗುಣ-ದುರ್ವಿಚಾರಗಳನ್ನು ವಿಸರ್ಜಿಸಬೇಕು. ವಿವೇಕ ಮತ್ತು ವಿಜ್ಞಾನವನ್ನು ನಮ್ಮೊಳಗೆ ಪ್ರತಿಷ್ಠಾಪಿಸಿಕೊಳ್ಳುವುದೆ ನಿಜವಾದ ಗಣೇಶೋತ್ಸವದ ಆಶಯವಾಗಿದೆ.
ಸಂಸಾರದಲ್ಲಿಸುಖ ನೆಮ್ಮದಿ ಸಿಗಬೇಕಾದರೆ ಪರಸ್ಪರ ಹೊಂದಾಣಿಕೆಯಿಂದ ಬದುಕಬೇಕು. ಜೀವನದಲ್ಲಿಏಳು ಬೀಳುಗಳು ಸಹಜವಾಗಿದ್ದು, ಅವುಗಳನ್ನು ಸ್ವೀಕರಿಸಿ ಬದುಕಬೇಕು. ವಿಶೇಷವಾಗಿ ಹೆಣ್ಣು ಸಂಸಾರದಲ್ಲಿಎದುರಾಗುವ ಸಂದರ್ಭಗಳನ್ನು ಅರ್ಥ ಮಾಡಿಕೊಂಡು ಸಮಯ ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡು ಕುಟುಂಬದ ಸುಖ ನೆಮ್ಮದಿಗೆ ಕಾರಣವಾಗುವ ಗುಣವೇ ಕಾಲ್ಗುಣವಾಗಿದೆ’’ ಎಂದು ಹೇಳಿದರು.
ಈ ವೇಳೆ ಹೊಸ ಓಣಿ ಮಿತ್ರ ಮಂಡಳಿ ಅಧ್ಯಕ್ಷ ಕಿರಣ ಕೊಲ್ಲಾಪೂರ, ಹಿರಿಯರಾದ ವಸಂತ ಕೊಣಸಾಲಿ, ನಾಗಣ್ಣ ಎಲಿಗಾರ, ಶ್ರೀಧರ ಡೋರಿ, ಉದಯ ಗಾಂಜೇಕರ ಸೇರಿದಂತೆ ಮಿತ್ರ ಮಂಡಳಿಯ ಪದಾಧಿಕಾರಿಗಳು ಇದ್ದರು.
ವಿಶಾಲ ಗಾಯಕವಾಡ ಸ್ವಾಗತಿಸಿದರು. ಪಾಂಡುರಂಗ ಟಿಕ್ಕೋಜಿ ನಿರೂಪಿಸಿದರು.
18ಎಮ್ ಎನ್ ಡಿ1
ಮುಂಡಗೋಡ ಹೊಸ ಓಣಿಯಲ್ಲಿಆಯೋಜಿಸಿದ್ದ ಆಧ್ಯಾತ್ಮ ಪ್ರವಚನದಲ್ಲಿಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.