ಬನ್ನೂರಲ್ಲಿಸರ್ ಎಂವಿ ಜನ್ಮದಿನಾಚರಣೆ

Contributed byvijendraprabhubr@gmail.com|Vijaya Karnataka
Vijay Karnataka
ಬನ್ನೂರಲ್ಲಿಸರ್ ಎಂವಿ ಜನ್ಮದಿನಾಚರಣೆ

ವಿಕ ಸುದ್ದಿಲೋಕ ಬನ್ನೂರು
ಕನ್ನಡನಾಡು ಸೇರಿದಂತೆ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಸರ್ ಎಂ.ವಿಶ್ವೇಶ್ವರಯ್ಯ. ಅಂತಹ ಮಹಾನ್ ನಾಯಕರು ಕನ್ನಡನಾಡಿನಲ್ಲಿಮತ್ತೊಮ್ಮೆ ಹುಟ್ಟಿ ಬರಲಿ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೈ.ಎಸ್ . ರಾಮಸ್ವಾಮಿ ಆಶಿಸಿದರು.

ಪಟ್ಟಣದ ಸಮೀಪದ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ವತಿಯಿಂದ ಎಸ್ ಆರ್ ಪಿ ರಸ್ತೆಯಲ್ಲಿರುವ ವೃತ್ತದಲ್ಲಿಹಮ್ಮಿಕೊಂಡಿದ್ದ ಡಾ.ಸರ್ ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಅವರ ಪ್ರತಿಮೆಗೆ ಹೂವಿನ ಹಾರ ಹಾಕಿ ಮಾತನಾಡಿ, ‘‘ಇವರ ಜನ್ಮದಿನವನ್ನು ಭಾರತದಲ್ಲಿಎಂಜಿನಿಯರ್ಸ್ ದಿನವಾಗಿ ಆಚರಣೆ ಮಾಡುತ್ತಾರೆ ಎಂದರೆ ಇವರ ಕೂಡುಗೆ ಎಷ್ಟು ಮಹತ್ವದ್ದು ಎನ್ನುವುದನ್ನು ನಾವೆಲ್ಲರೂ ಅರಿಯಬೇಕು. ಮೈಸೂರಿನ 19ನೇ ದಿವಾನರಾಗಿ ಸೇವೆ ಸಲ್ಲಿಸಿ, ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿಅಣೆಕಟ್ಟು ನಿರ್ಮಿಸಿ, ಲಕ್ಷಾಂತರ ಎಕರೆಯನ್ನು ನೀರಾವರಿ ಭೂಮಿಯಾಗಿ ಪರಿವರ್ತನೆ ಮಾಡಿ ಅನ್ನ ನೀಡಿದ ಅನ್ನದಾತ ಇವರು,’’ ಎಂದು ಸ್ಮರಿಸಿದರು.

‘‘ತಮ್ಮ ಜೀವಿತಾವಧಿಯಲ್ಲಿ‘ಉತ್ಪಾದನೆ ಹೆಚ್ಚಿಸಿ ದೇಶವನ್ನು ಉಳಿಸಿ’ ಎಂಬ ಸಂದೇಶ ನೀಡಿದರು. ಅವರ ಸರಳ ಜೀವನ ಮತ್ತು ರಾಷ್ಟ್ರಭಕ್ತಿ ಎಂದಿಗೂ ನಮಗೆ ಸ್ಫೂರ್ತಿ,’’ ಎಂದು ತಿಳಿಸಿದರು.

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್ , ಮೈಸೂರು ಜಿಲ್ಲಾಒಕ್ಕಲಿಗ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿದರು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್ . ರಾಮಸ್ವಾಮಿ, ಹನುಮನಾಳು ಹೊಂಬೇಗೌಡ ಸೇರಿದಂತೆ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ಎಲ್ಲಾಸದಸ್ಯರು ಹಾಜರಿದ್ದರು.

16 ಬನ್ನೂರು 1

ಬನ್ನೂರಿನ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ವತಿಯಿಂದ ಎಸ್ ಆರ್ ಪಿ ರಸ್ತೆಯಲ್ಲಿರುವ ವೃತ್ತದಲ್ಲಿಡಾ.ಸರ್ .ಎಂ.ವಿಶ್ವೇಶ್ವರಯ್ಯನವರ 165ನೇ ಜನ್ಮದಿನವನ್ನು ಆಚರಣೆ ಮಾಡಲಾಯಿತು.