ವಿಕ ಸುದ್ದಿಲೋಕ ಮುಂಡರಗಿತಾಲೂಕಿನ ಡಂಬಳ ಚಂದನವನ ರೈತ ಉತ್ಪಾದಕ ಕಂಪನಿಯ ಆಹಾರ ಸಂಸ್ಕರಣ ಘಟಕಕ್ಕೆ ನವದೆಹಲಿಯ ಮೂವರು ಅಧಿಕಾರಿಗಳ ತಂಡ ಭೇಟಿ ನೀಡಿ ಕಂಪನಿಯ ಕಾರ್ಯಚಟುವಟಿಕೆ ವೀಕ್ಷಿಸಿ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿತು.
ಗುಣಮಟ್ಟ ಮತ್ತು ಪ್ಯಾಕಿಂಗ್ ವ್ಯವಸ್ಥೆ, ಸಂರಕ್ಷಣೆ ಮಾರುಕಟ್ಟೆ ವಿಸ್ತರಣೆ ಕುರಿತು ಮತ್ತಷ್ಟು ಮಾಹಿತಿ ಒದಗಿಸಿದರು. ಉತ್ಪನ್ನಗಳನ್ನು ಮಾರುಕಟ್ಟೆಗೆ ವಿಸ್ತರಿಸಲು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.
ಗದಗ ಜಿಲ್ಲೆಕೃಷಿ ಉಪನಿರ್ದೇಶಕಿ ಜಿ.ಎಸ್ .ಸ್ಪೂರ್ತಿ ಮಾತನಾಡಿ, ಚಂದನವನ ಕಂಪನಿ ಉತ್ತಮ ಕೆಲಸ ಮಾಡುತ್ತಿದೆ. ಇದರ ಜು.23 ರಂದು ನವದೆಹಲಿಯಲ್ಲಿಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪಡೆವ ಅವಕಾಶ ದೊರಕಿದೆ ಎಂದರು.
ಕಂಪನಿ ಅಧ್ಯಕ್ಷ ಬಸವರಾಜ ಬೇವಿನಮರದ ಅವರು ಕಂಪನಿ ಕಳೆದ ನಾಲ್ಕು ವರ್ಷಗಳಿಂದ ನಡೆದು ಬಂದ ದಾರಿ ವಿವರಿಸಿದರು.