ಪ್ರಜಾಸೇವಾ ಸಭೆಗೆ 204 ಅರ್ಜಿ ಸ್ವೀಕಾರ, ಸ್ಥಳದಲ್ಲಿ10ಅರ್ಜಿ ಇತ್ಯರ್ಥವಿಕ ಸುದ್ದಿಲೋಕ ಕೊರಟಗೆರೆ
35ಕ್ಕೂ ಅಧಿಕ ಸರಕಾರಿ ಇಲಾಖೆ ಅಧಿಕಾರಿಗಳು ನಿಮ್ಮೂರಿಗೆ ಬಂದು, ನಿಮ್ಮ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಬಗೆಹರಿಸುವ ಕಾರ ್ಯ ಪ್ರಜಾಸೇವಾ ಅಭಿಯಾನದ ಮೂಲಕ ಆಗುತ್ತಿದೆ ಎಂದು ತಹಸೀಲ್ದಾರ್ ಮಂಜುನಾಥ ಕೆ. ತಿಳಿಸಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆಯ ಖಾಸಗಿ ಸಮುದಾಯ ಭವನದಲ್ಲಿಶನಿವಾರ ಏರ್ಪಡಿಸಲಾಗಿದ್ದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಮಾತನಾಡಿ, ಪ್ರಜಾಸೇವಾ ಅಭಿಯಾನ ರಾಜ್ಯ ಸರಕಾರದ ವಿನೂತನ ಕಾರ್ಯಕ್ರಮವಾಗಿದೆ. ಮನೆಯ ಮುಂದೆ ಬರುವ ಸರಕಾರದ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆ ಗ್ರಾಮೀಣ ಜನರಿಗೆ ವರದಾನವಾಗಿದೆ. ತೋವಿನಕೆರೆ ಭಾಗದಲ್ಲಿವಿದ್ಯುತ್ ಸಮಸ್ಯೆ ಹಾಗೂ ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿವಿಳಂಬ ತಪ್ಪಿಸುವಂತೆ ಹಾಗು ವಸತಿ ಯೋಜನೆ ಅರ್ಹರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಇ ಅಪೂರ್ವ, ಸಿಪಿಐ ಪುರುಷೋತ್ತಮ, ಬೆಸ್ಕಾಂ ಎಇಇ ಪ್ರಸನ್ನಕುಮಾರ್ , ಸಮಾಜ ಕಲ್ಯಾಣ ಇಲಾಖೆಯ ಯಮೂನಾ, ಗ್ರೇಡ್ -2 ತಹಸೀಲ್ದಾರ್ ವೆಂಕಟರಂಗನ್ , ಶಿರಸ್ಥೆದಾರ್ ವೆಂಕಟೇಶ್ , ಉಪತಹಸೀಲ್ದಾರ್ ಪ್ರತಾಪ್ ಕುಮಾರ್ , ಪಿಡಿಒ ಸುನೀಲ್ , ರವಿಕುಮಾರ್ , ರಘುನಂದನ್ , ರಂಗನರಸಯ್ಯ ಇತರರಿದ್ದರು.
ಕೋಟ್
ಪ್ರಜಾಸೇವಾ ಅಭಿಯಾನ ಗ್ರಾಮೀಣ ಜನರಿಗೆ ವರದಾನವಾಗಿದೆ. ಸರಕಾರಿ ಕಚೇರಿಗೆ ರೈತರು ಅಲೆಯುವುದನ್ನು ತಪ್ಪಿಸಲು, ಅಧಿಕಾರಿಗಳೇ ಜನರ ಬಳಿ ಬರುವ ವಿಶೇಷ ಕಾರ್ಯಕ್ರಮವಾಗಿದೆ. ರೈತರಿಗೆ ಸಾಗುವಳಿ ಚೀಟಿ ಮತ್ತು ವಿದ್ಯುತ್ ಸಮಸ್ಯೆ ನಿವಾರಣೆ ಆಗಬೇಕಿದೆ.
-ಪ್ರಸನ್ನಕುಮಾರ್ , ಜಿಪಂ ಮಾಜಿ ಸದಸ್ಯ, ಸಿ.ಎನ್ .ದುರ್ಗ
ಬಾಕ್ಸ್ -1
204 ಅರ್ಜಿ ಸ್ವೀಕಾರ
ಕಂದಾಯ-86, ತಾಪಂ-87, ಸರ್ವೆ ಇಲಾಖೆ-8, ಸಣ್ಣ ನೀರಾವರಿ-7, ಸಮಾಜ ಕಲ್ಯಾಣ-1, ಬೆಸ್ಕಾಂ-1, ಅರಣ್ಯ-3, ಆಹಾರ-6, ಎತ್ತಿನಹೊಳೆ-1, ಕೃಷಿ-3, ಪ್ರವಾಸೋದ್ಯಮ-1 ಸೇರಿದಂತೆ 204ಅರ್ಜಿಗಳನ್ನು ಸಾರ್ವಜನಿಕರು ಸಭೆಯಲ್ಲಿಸಲ್ಲಿಸಿದರು. 10 ಅರ್ಜಿ ಸ್ಥಳದಲ್ಲೇ ಇತ್ಯರ್ಥವಾದವು. ಇನ್ನುಳಿದ ಅರ್ಜಿಗಳನ್ನು 4 ದಿನಗಳೊಗೆ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಅಧಿಕಾರಿಗಳಿಗೆ ಸೂಚಿಸಿದರು.