ತಿ.ನರಸೀಪುರ ತಾಪಂ ಗಮನಾರ್ಹ ಸಾಧನೆ

Contributed bysrameshshashitnp@gmail.com|Vijaya Karnataka
Vijay Karnataka
ತಿ.ನರಸೀಪುರ ತಾಪಂ ಗಮನಾರ್ಹ ಸಾಧನೆ

- ಆಗಸ್ಟ್ ನಲ್ಲಿಶೇ.74.3ರಷ್ಟು ಗುರಿ ಸಾಧನೆ* ನಾಲ್ಕು ತಿಂಗಳಲ್ಲಿಎರಡು ಬಾರಿ ಪ್ರಥಮ ಸ್ಥಾನ
ವಿಕ ಸುದ್ದಿಲೋಕ ತಿ.ನರಸೀಪುರ

ಜಿಲ್ಲಾಪಂಚಾಯಿತಿಯಿಂದ ಅಭಿವೃದ್ಧಿಪಡಿಸಿರುವ ‘ಶ್ರೇಷ್ಠತಾ’ ಆ್ಯಪ್ ನಲ್ಲಿತಿ.ನರಸೀಪುರ ತಾಲೂಕು ಪಂಚಾಯಿತಿ ಆಗಸ್ಟ್ ನಲ್ಲಿಶೇ. 74.3ರಷ್ಟು ಗುರಿ ತಲುಪುವ ಮಾಡುವ ಮೂಲಕ ಜಿಲ್ಲೆಯಲ್ಲಿಗಮನಾರ್ಹ ಸಾಧನೆ ಮಾಡಿದೆ.

ಮೈಸೂರು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಅಭಿವೃದ್ಧಿಪಡಿಸಿರುವ ‘ಶ್ರೇಷ್ಠತಾ ಆ್ಯಪ್ ’’ನಲ್ಲಿಜಿಲ್ಲೆಯ 255 ಗ್ರಾಮ ಪಂಚಾಯಿತಿಗಳ ಸಮಗ್ರ ಪ್ರಗತಿ ಹಾಗೂ ಗುರಿ ಸಾಧನೆಯನ್ನು ಅಂಗೈಯಲ್ಲಿಯೇ ವೀಕ್ಷಿಸಬಹುದು. ಮೇ ತಿಂಗಳಿಂದ ‘ಶ್ರೇಷ್ಠತಾ’ ಆ್ಯಪ್ ಮೂಲಕ ಜಿಲ್ಲೆಯ ವಿವಿಧ ಗ್ರಾಪಂಗಳಿಗೆ ಹಾಗೂ ತಾಪಂಗಳಿಗೆ ನಿಗದಿಪಡಿಸಿರುವ ಪ್ರಗತಿ ಗುರಿಗಳನ್ನು ಸಾಧಿಸಲು ಅನುಕೂಲ ಕಲ್ಪಿಸಲಾಗಿದೆ. ಶ್ರೇಷ್ಠತಾ ಪೋರ್ಟಲ್ ನಲ್ಲಿನಮೂದಿಸಿರುವ ವಿವಿಧ ಅಂಶಗಳ ಆಧಾರದ ಮೇಲೆ ಪ್ರತಿ ತಿಂಗಳು ತಾಪಂಗಳ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಗತಿ ಸಾಧನೆಯಲ್ಲಿತಿ.ನರಸೀಪುರ ತಾಪಂ ಇತರೆ ತಾಪಂಗಳ ಪೈಪೋಟಿ ನಡುವೆಯೂ ಆಗಸ್ಟ್ ನಲ್ಲಿಉತ್ತಮ ಪ್ರಗತಿ ಸಾಧಿಸಿ ಪ್ರಶಸ್ತಿಗೆ ಭಾಜನವಾಗಿದೆ.

ಸತತ ಸಾಧನೆ: ತಿ.ನರಸೀಪುರ ತಾಪಂ ಸಾಧನೆ ತಿಂಗಳವಾರು ಗಮನಾರ್ಹವಾಗಿದ್ದು, ಮೇ ತಿಂಗಳಲ್ಲಿಪ್ರಥಮ ಸ್ಥಾನ, ಜೂನ್ ನಲ್ಲಿದ್ವಿತೀಯ, ಜುಲೈನಲ್ಲಿಮತ್ತೆ ಪ್ರಥಮ ಹಾಗೂ ಆಗಸ್ಟ್ ನಲ್ಲಿಯೂ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ಉತ್ತಮ ಸಾಧನೆ ಮಾಡಿದೆ. ಗುರಿ ಸಾಧನೆ ಮಾಡಿರುವ ತಿ.ನರಸೀಪುರ ತಾಪಂಗೆ ಮೈಸೂರು ಜಿಪಂ ಸಿಇಒ ಯುಕೇಶ್ ಕುಮಾರ್ ಅವರು ಉತ್ತಮ ಸಾಧನೆಯ ಪ್ರಮಾಣ ಪತ್ರ ನೀಡಿ ಅಭಿನಂದಿಸಿದ್ದಾರೆ.

ತಿ.ನರಸೀಪುರ ತಾಲೂಕಿನ ಪ್ರಗತಿ ಗುರಿ ಸಾಧನೆಗೆ 36 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಪ್ರಮುಖ ಕಾರಣ.

-ಡಾ. ಕೆ.ರಂಗಸ್ವಾಮಿ, ತಿ.ನರಸೀಪುರ ತಾ.ಪಂ ಇಒ.

ಚಿತ್ರಶೀರ್ಷಿಕೆಗಳು 1) ತಿ. ನರಸೀಪುರ ತಾಲೂಕು ಪಂಚಾಯಿತಿ ಇಒ ಡಾ. ಕೆ. ರಂಗಸ್ವಾಮಿ. 2) ತಿ. ನರಸೀಪುರ ತಾಲೂಕು ಪಂಚಾಯಿತಿಗೆ ಜಿಲ್ಲಾಪಂಚಾಯಿತಿ ಸಿಇಒ ನೀಡಿರುವ ಪ್ರಶಸ್ತಿ ಪತ್ರ. 3) ಮೈಸೂರು ಜಿಲ್ಲಾಪಂಚಾಯಿತಿ ಸಿಇಒ ಯುಕೇಶ್ ಕುಮಾರ್ .