ಕುಂದಗೋಳ

Contributed byshivakkanavar@gmail.com|Vijaya Karnataka
19th september
ಕುಂದಗೋಳ ಬರ ಪೀಡಿತ ಘೋಷಣೆಗೆ ಇನ್ನೂ ಕ್ರಮ ಇಲ್ಲ

ಸರಕಾರದ ವಿರುದ್ಧ ರೈತರ ಆಕ್ರೋಶ
ವಿಕ ಸುದ್ದಿಲೋಕ ಕುಂದಗೋಳ

ತಾಲೂಕನ್ನು ಬರಪೀಡಿತ ಎಂದು ಘೋಷಿಸದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ರೈತ ಪರ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿ.ಎಸ್ .ಪಾಟೀಲ ಕಾಲೇಜು ಆವರಣದಲ್ಲಿಸಚಿವ ಸಂತೋಷ ಲಾಡ್ ಸಮ್ಮುಖದಲ್ಲಿಶನಿವಾರ ಹಮ್ಮಿಕೊಂಡ ಪ್ರಜಾ ಸೇವಾ ಆಂದೋಲನಕ್ಕೆ ಸಚಿವರು ಆಗಮಿಸುವ ಮುನ್ನವೇ ಪ್ರವಾಸಿ ಮಂದಿರದಲ್ಲಿರೈತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿದರು.

ತಾಲೂಕಿನ ರೈತರು ಬರದಿಂದ ಸಂಕಷ್ಟದಲ್ಲಿದ್ದರೂ ಸರಕಾರ ಬರಗಾಲ ಘೋಷಣೆ ಮಾಡುತ್ತಿಲ್ಲ, ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಾಹನಕ್ಕೆ Nೕರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.

ರೈತ ಮುಖಂಡ ಹೇಮನಗೌಡ ಬಸನಗೌಡ ಮಾತನಾಡಿ, ಬರಪೀಡಿತ ಎಂದು ಘೋಷಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಮಾತನಾಡಿ, ಸರಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ಸಾಕಷ್ಟು ಮನವಿ ನೀಡಿದ್ದರೂ ಬರ ಘೋಷಣೆ ಮಾಡಿಲ್ಲ. ಇನ್ನು ಮೇಲೆ ಮನವಿ ಕೊಡುವುದಿಲ್ಲ. ಉಗ್ರ ಹೋರಾಟ ಮಾಡುತ್ತೇವೆ. ಇದಕ್ಕೂ ಬಗ್ಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಪರಮೇಶಪ್ಪ ನಾಯ್ಕರ ಹಸಿರು ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ಗುರಪಾದಪ್ಪ ಬಂಕದ ಮಾತನಾಡಿ, ಸರಕಾರ ರೈತರ ಸಂಕಷ್ಟ ಅರಿಯದೇ ಕಾಲಹರಣ ಮಾಡುತ್ತಿದೆ ಎಂದು ದೂರಿದರು. ನಂತರ ರೈತ ಮುಖಂಡರು ಪ್ರಜಾ ಸೇವಾ ಆಂದೋಲನ ನಡೆದ ಸ್ಥಳಕ್ಕೆ ತೆರಳಿ ಸಚಿವ ಸಂತೋಷ ಲಾಡ್ ರನ್ನು ಭೇಟಿಯಾಗಿ, ಕುಂದಗೋಳ ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಕಲ್ಲಪ್ಪ ಹರಕುಣಿ, ಪರಮೇಶಪ್ಪ ನಾಯ್ಕರ, ಗುರುಪಾದಪ್ಪ ಬಂಕದ, ಬಸವರಾಜ ಯೋಗಪ್ಪನವರ ಸೇರಿದಂತೆ ಅನೇಕ ರೈತರು, ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಫೋಟೋ 19 ಕೆ ಎನ್ ಡಿ 1

ಕುಂದಗೋಳ ಪಟ್ಟಣ ಪ್ರವಾಸಿ ಮಂದಿರದಲ್ಲಿರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆ ಮುಖಂಡರು ಜಿಲ್ಲಾ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.