Youth Talents Davanagere Football Players Selected For Sports Hostels
ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ
Contributed by: Vinayaka Naik P|Vijaya Karnataka•
ದಾವಣಗೆರೆ: ನಗರದ ಕರುನಾಡು ಫುಟ್ಬಾಲ್ ಕ್ಲಬ್ ನ ಇಬ್ಬರು ಯುವ ಫುಟ್ಬಾಲ್ ಆಟಗಾರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಸತಿ ನಿಲಯಗಳಿಗೆ ಆಯ್ಕೆಯಾಗಿದ್ದಾರೆ.
ಕ್ಲಬ್ ನ ಫಟ್ಬಾಲ್ ಪಟು ಸಾಯಿರಾಮ್ , ಬೆಂಗಳೂರಿನ ಕ್ರೀಡಾ ಹಾಸ್ಟೆಲ್ ಗೆ ಹಾಗೂ ಮೊಹಮ್ಮದ್ ಸಾಹಿಲ್ ಬಳ್ಳಾರಿ ಹಿರಿಯರ ಕ್ರೀಡಾ ಹಾಸ್ಟೆಲ್ ಗೆ ಆಯ್ಕೆಯಾಗಿದ್ದಾರೆ. ಈ ಮಹತ್ವದ ಸಾಧನೆಗಾಗಿ ಕರುನಾಡು ಫುಟ್ಬಾಲ್ ಕ್ಲಬ್ ಯುವ ಪ್ರತಿಭೆಗಳಿಗೆ ಅಭಿನಂದಿಸಿದೆ. ಇವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿದಾವಣಗೆರೆಯನ್ನು ಪ್ರತಿನಿಧಿಸಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಕ್ಲಬ್ ನ ವಿ.ಅಹಮದ್ ಮುಜ್ತಬಾ ಶುಭ ಹಾರೈಸಿದ್ದಾರೆ.ಫೋಟೋ ಇದೆ