ಪೆರಿಯಾರ್ ರಾಮಕೃಷ್ಣ ಅಯ್ಯರ್ ಜಯಂತ್ಯುತ್ಸವವಿಕ ಸುದ್ದಿಲೋಕ ನರಗುಂದ
ಪಟ್ಟಣದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿಸಾಮಾಜಿಕ ಹೋರಾಟಗಾರ ಪೆರಿಯಾರ್ ರಾಮಕೃಷ್ಣ ಅಯ್ಯರ್ ಅವರ 147ನೇ ಜಯಂತ್ಯುತ್ಸವವನ್ನು ತಾಲೂಕು ದಲಿತ ಸಂಘರ್ಷ ಸಮಿತಿಯಿಂದ ಆಚರಿಸಲಾಯಿತು.
ಗುರುನಾಥ ಕೆಂಗಾರಕರ್ ಮಾತನಾಡಿದರು. ಅಬ್ದುಲ್ ಸಾಬ ನರಗುಂದ ಉಪನ್ಯಾಸ ನೀಡಿ, ಸಾಮಾಜಿಕ ಹೋರಾಟಗಾರರಾಗಿದ್ದ ಪೆರಿಯಾರ್ ರಾಮಕೃಷ್ಣ ಅಯ್ಯರ್ ಅವರು, ಅಸ್ಪೃಶ್ಯತೆ, ಮೂಢನಂಬಿಕೆ ವಿರುದ್ಧ ನಿರಂತರ ಧ್ವನಿ ಎತ್ತುವುದರ ಮೂಲಕ ಸಮಾಜದ ಎಲ್ಲದೀನ-ದಲಿತರ ಉದ್ಧಾರಕ್ಕಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು.
ಡಿಎಸ್ ಎಸ್ ತಾಲೂಕು ಸಂಚಾಲಕ ದತ್ತಾತ್ರೇಯ ಜೋಗಣ್ಣವರ ಮಾತನಾಡಿ, ಪೆರಿಯಾರ್ ರಾಮಸ್ವಾಮಿ ಅಯ್ಯರ್ ಅವರು, ದಲಿತ ಮಹಿಳೆಯರು, ಅಸ್ಪೃಶ್ಯತೆ, ಧರ್ಮದ ಹೆಸರಿನಲ್ಲಿಕೆಳ ವರ್ಗದ ಜನಾಂಗದವರ ಮೇಲೆ ನಡೆಯುತ್ತಿದ್ದ ಹಲವಾರು ದೌರ್ಜನ್ಯಗಳನ್ನು ಖಂಡಿಸಿ ಹಲವಾರು ಹೋರಾಟಗಳನ್ನು ಮಾಡುವುದರ ಮೂಲಕ ಇತಿಹಾಸದ ಪುಟದಲ್ಲಿದಾಖಲಾಗಿದ್ದಾರೆ ಎಂದರು.
ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಸಂಜು ಜೋಗಣ್ಣವರ, ಸಂಘಟನೆ ಸಂಚಾಲಕ ಮುತ್ತು ಪೂಜಾರ, ವೃದ್ಧಾಶ್ರಮದ ಅಧ್ಯಕ್ಷ ಶಶಿಕುಮಾರ ಬೋಯಿಟೆ, ಡಾ.ಮುತ್ತು ಸುರಕೋಡ ಮಾತನಾಡಿದರು. ಮಂಜು ಚಲವಾದಿ, ಬಸವರಾಜ ಜೋಗಣ್ಣವರ, ಬಸು ದಂಡಾಪುರ, ಗಂಗಾಧರ ಕೆಂಗಾರಕರ, ಫೈಸಲ್ ನದಾಫ, ನಾಗರಾಜ ಕಡೇಮನಿ, ನವೀನ ಜೋಗಣ್ಣವರ, ವಿಜಯ ದ್ಯಾವಣ್ಣವರ, ಅಭಿಷೇಕ ಹಡಪದ, ಮಂಜು ದೊಡ್ಡಮನಿ, ವೆಂಕಟೇಶ ಕಾನಪೇಟೆ, ಉಪೇಂದ್ರ ಮಾದರ, ಗುರುನಾಥ ಕೆಂಗಾರಕರ ಉಪಸ್ಥಿತರಿದ್ದರು. ಜಯಂತಿ ಅಂಗವಾಗಿ ವೃದ್ಧಾಶ್ರಮದವರಿಗೆ ಹಾಲು, ಹಣ್ಣು, ಬ್ರೆಡ್ , ಬಿಸ್ಕೆಟ್ ವಿತರಣೆ ಮಾಡಲಾಯಿತು.
ಫೋಟೊ: 20 ಎನ್ ಆರ್ ಡಿ-5:
ನರಗುಂದದ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿನಡೆದ ಪೆರಿಯಾರ್ ರಾಮಕೃಷ್ಣ ಅಯ್ಯರ್ ಅವರ 147ನೇ ಜಯಂತ್ಯುತ್ಸವದಲ್ಲಿಗುರುನಾಥ ಕೆಂಗಾರಕರ ಮಾತನಾಡಿದರು.