ದೇಶದ ಹಿತಕ್ಕಾಗಿ ದುಡಿಯುವ ಸಂಕಲ್ಪ ಮಾಡಿ

Contributed byadarshkodi15@gmail.com|Vijaya Karnataka
Vijay Karnataka
ದೇಶದ ಹಿತಕ್ಕಾಗಿ ದುಡಿಯುವ ಸಂಕಲ್ಪ ಮಾಡಿ

((ದೊಡ್ಡಬಳ್ಳಾಪುರದ ಆರ್ .ಎಲ್ .ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಘಟಿಕೋತ್ಸವ, ಪದವಿ ಪ್ರದಾನ ಕಾರ್ಯಕ್ರಮ))
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಪದವೀಧರ ಯುವಜನತೆ ದೇಶ ಹಿತಕ್ಕಾಗಿ ದುಡಿಯುವ ಸಂಕಲ್ಪ ಮಾಡಬೇಕು ಎಂದು ಜೆಪಿ ಮಾರ್ಗನ್ಸ್ ಚೇಸ್ ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಮಹಾಲಿಂಗಂ ಹೇಳಿದರು.

ತಾಲೂಕಿನ ಕೊಡಿಗೇಹಳ್ಳಿ ಬಳಿಯ ಆರ್ .ಎಲ್ .ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿನಡೆದ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ನವೋದ್ಯಮಗಳ ಮೂಲಕ ಹೊಸಪೀಳಿಗೆಯ ಆಲೋಚನೆಗಳು ಸಾಕಾರಗೊಳ್ಳಬೇಕು ಎಂದು ಹೇಳಿದ ಅವರು, ಜೆನ್ -ಝಿ ಪೀಳಿಗೆಯ ಆಲೋಚನೆಗಳು ಔದ್ಯೋಗಿಕ ವಲಯದಲ್ಲಿಹೊಸ ಸಂಚಲನಕ್ಕೆ ಕಾರಣವಾಗಿದೆ. ಪ್ರಗತಿಗೆ ಪೂರಕವಾಗಿವೆ. ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಿರಂತರ ಪರಿಶ್ರಮ ಮತ್ತು ಪ್ರಯೋಗಶೀಲತೆ ಮುಖ್ಯ. ಯಶಸ್ಸು ನಿರಂತರ ಪರಿಶ್ರಮದ ಫಲವಾಗಿರುತ್ತದೆ. ನಮ್ಮ ಯಶಸ್ಸಿನ ನಡುವೆ ದೇಶದ ಹಿತದ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು.

ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಪದವಿ ಕೇವಲ ಶೈಕ್ಷಣಿಕ ಅರ್ಹತೆಗೆ ಸೀಮಿತವಾದರೆ ಪ್ರಯೋಜನವಿಲ್ಲ. ಸಾಮಾಜಿಕ ಕಾಳಜಿ ಮತ್ತು ವ್ಯಕ್ತಿಗತ ಬೆಳವಣಿಗೆಗೆ ಪೂರಕವಾದ ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದರು.

ಗ್ರಾಮೀಣ ಭಾಗದಲ್ಲಿಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಔದ್ಯೋಗಿಕ ವಲಯದಲ್ಲಿವಿಫುಲ ಅವಕಾಶಗಳಿವೆ. ಕೌಶಲಾಧರಿತ ಕಲಿಕೆ ಕಡೆಗೆ ಹೆಚ್ಚಿನ ಒತ್ತು ನೀಡುವುದರಿಂದ ಸಾಕಷ್ಟು ಅವಕಾಶಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿತೆರೆದುಕೊಳ್ಳುತ್ತವೆ ಎಂದರು.

2022-26ನೇ ಸಾಲಿನಲ್ಲಿನಾನಾ ವಿಭಾಗಗಳಲ್ಲಿಎಂಜಿನಿಯರಿಂಗ್ ಪದವಿಗಳನ್ನು ಪೂರೈಸಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞಾವಿಧಿ ಬೋಧಿಸಿ ಬಳಿಕ, ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿಪ್ರಾಂಶುಪಾಲ ಡಾ.ಜಿ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಗೌನಿಂರ್ ಗ್ ಕೌನ್ಸಿಲ್ ಸದಸ್ಯರಾದ ವಿದ್ವತ್ ಕುಮಾರ್ , ಎನ್ .ಉತ್ತಮ್ ಕುಮಾರ್ , ಉಪಪ್ರಾಂಶುಪಾಲ ಡಾ.ಆರ್ .ಎಂ.ಸುನಿಲ್ ಕುಮಾರ್ , ಶೈಕ್ಷಣಿಕ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎನ್ .ಬಿ.ಶಂಕರ್ , ಮತ್ತಿತರರು ಉಪಸ್ಥಿತರಿದ್ದರು.

ಫೋಟೊ:2109ವಿಕೆ2:ದೊಡ್ದಬಳ್ಳಾಪುರದ ಆರ್ .ಎಲ್ .ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿನಡೆದ 22ನೇ ಘಟಿಕೋತ್ಸವದಲ್ಲಿಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.