ಕಲಘಟಗಿ

Contributed byshankarradder@gmail.com|Vijaya Karnataka
jinnur school players awarded veeragalya prize
ಜಿನ್ನೂರ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಕಲಘಟಗಿ: ತಾಲೂಕಿನ ಜಿನ್ನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಇತ್ತೀಚೆಗೆ ನಡೆದ 2026-27ನೇ ಸಾಲಿನ ತಬಕದಹೊನ್ನಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿಜಿನ್ನೂರ ಶಾಲೆಯ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಶಾಲೆಯ ಆವರಣದಲ್ಲಿಆಯೋಜಿಸಿದ್ದ ಕ್ರೀಡಾಕೂಟವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಉದ್ಘಾಟಿಸಿದರು. ಬಾಲಕಿಯರ ಖೋಖೋ, ಕಬಡ್ಡಿ ಹಾಗೂ ರಿಲೇ ಸ್ಪರ್ಧೆಗಳಲ್ಲಿಪ್ರಥಮ ಸ್ಥಾನ ಪಡೆದರೆ, ಬಾಲಕರು ಖೋಖೋ ಹಾಗೂ ಕಬಡ್ಡಿ ಪಂದ್ಯಗಳಲ್ಲಿಪ್ರಥಮ ಸ್ಥಾನ ಪಡೆದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಸಜ್ಜನ, ಸಿಆರ್ ಪಿ ಮಂಜುನಾಥಗೌಡ ಪಾಟೀಲ, ಮುಖ್ಯ ಶಿಕ್ಷಕ ಮಂಜುನಾಥ ಕೊರಟ್ಟಿ, ಸಿ.ಎಸ್ .ಗ್ಯಾನಪ್ಪನವರ, ಬಿ.ಡಿ.ಅಗಡಿ, ಶ್ರೀಕಾಂತ ಮಾಗಳದ, ಮಹೇಶಗೌಡ ಪಾಟೀಲ, ಚಂಬನಗೌಡ ದೊಡ್ಡಗೌಡ್ರ, ಚನ್ನಬಸಪ್ಪ ಅಗಡಿ, ಸಂಜೀವಗೌಡ ಪಾಟೀಲ, ಚನ್ನಬಸಪ್ಪ ವಾಲೀಕಾರ ಹಾಜರಿದ್ದರು.

ಫೋಟೊ:

ತಬಕದಹೊನ್ನಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿಜಿನ್ನೂರ ಶಾಲೆಯ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.