ನವೆಂಬರ್ ನಿಂದ ಕಬ್ಬು ಕಟಾವ್ ಗೆ ಮನವಿವಿಕ ಸುದ್ದಿಲೋಕ ಹಾವೇರಿ
ಜಿಲ್ಲೆಯಲ್ಲಿಕಬ್ಬು ಬೆಳೆದ ರೈತರು ಸೆಪ್ಟೆಂಬರ್ ತಿಂಗಳಲ್ಲಿಕಬ್ಬು ಕಟಾವು ಮಾಡದೆ ನವೆಂಬರ್ ನಿಂದ ಆರಂಭಿಸಬೇಕು ಎಂದು ಜಿಲ್ಲಾಕಬ್ಬು ಬೆಳೆಗಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕರಡ್ಡಿ ಮರಚರಡ್ಡೇರ ಹಾಗೂ ರೈತ ಮುಖಂಡರು ಮನವಿ ಮಾಡಿದ್ದಾರೆ.
ಜಿಎಂ-1 (ಸಂಗೂರ) ಕಾರ್ಖಾನೆಯವರು ಸೆ.21ರಂದು ಪ್ರಸಕ್ತ ಹಂಗಾಮಿನ ಆರಂಭದ ಪ್ರಯುಕ್ತ ದೀಪೋತ್ಸವ ಹಾಗೂ ಬಾಯ್ಲರ್ ಪೂಜೆ ಕಾರ್ಯಕ್ರಮ ಆಯೋಜಿಸಿರುವುದು ರೈತರಿಗೆ ಅನ್ಯಾಯ ಮಾಡುವ ಕ್ರಮವಾಗಿದೆ. ಕಾರ್ಖಾನೆ ಆರಂಭಕ್ಕೂ ಮುನ್ನ ಸರಕಾರದ ಅನುಮತಿ ಪಡೆಯಬೇಕು ಎಂಬ ಆದೇಶವಿದ್ದರೂ, ರೈತರ ಒಪ್ಪಿಗೆಯಿಲ್ಲದೆ ಕಾರ್ಖಾನೆ ಆರಂಭಿಸಲು ಮುಂದಾಗಿರುವುದು ಸರಿಯಲ್ಲಎಂದು ಅವರು ತಿಳಿಸಿದ್ದಾರೆ.
ರೈತರಲ್ಲಿಒಗ್ಗಟ್ಟು ಮೂಡಿಸಿ, ಯಾವುದೇ ಕಾರಣಕ್ಕೂ ಸೆಪ್ಟೆಂಬರ್ ನಲ್ಲಿಕಬ್ಬು ಕಟಾವು ಮಾಡದಂತೆ ಎಲ್ಲರೈತರು ಸಹಕರಿಸಬೇಕು. ರೈತರೊಳಗೆ ಭಿನ್ನಾಭಿಪ್ರಾಯ ಸೃಷ್ಟಿಸಿ ಅದರ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ. ಕಾರ್ಖಾನೆ ಆರಂಭದಿಂದ ಉಂಟಾಗುವ ಸಮಸ್ಯೆಗಳಿಗೆ ಕಾರ್ಖಾನೆ ಆಡಳಿತವೇ ಹೊಣೆ ಎಂದು ಅಶೋಕರಡ್ಡಿ ಮರಚರಡ್ಡೇರ, ಹನುಮಂತಪ್ಪ ಹುಚ್ಚಣ್ಣನವರ ಹಾಗೂ ರೈತರು ತಿಳಿಸಿದ್ದಾರೆ.