*ಅಧ್ಯಕ್ಷ ನಾಗೇಂದ್ರ ಮಾಡ್ರಹಳ್ಳಿ ಮಾಹಿತಿ*ಸರ್ವ ಸದಸ್ಯರ ವಾರ್ಷಿಕ ಮಹಾಸಭೆವಿಕಸುದ್ದಿಲೋಕಗುಂಡ್ಲುಪೇಟೆ
ತಾಲೂಕು ಪಿಎಲ್ ಡಿ ಬ್ಯಾಂಕ್ ವಿವಿಧ ಸಂದರ್ಭದಲ್ಲಿಕೇಂದ್ರ ಬ್ಯಾಂಕ್ ನಿಂದ ಪಡೆದಿರುವ 11 ಕೋಟಿ ರೂ. ಸಾಲದ ಹೊರೆ ಬ್ಯಾಂಕ್ ನ ನಿರ್ವಹಣೆಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ಅಧ್ಯಕ್ಷ ನಾಗೇಂದ್ರಮಾಡ್ರಹಳ್ಳಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸಿ.ಎಂ.ಎಸ್ ಕಲಾ ಮಂದಿರದಲ್ಲಿತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ) ನಿಯಮಿತ ವತಿಯಿಂದ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
‘‘ರಾಜ್ಯ ವ್ಯಾಪಿ ಪಿಎಲ್ ಡಿ ಬ್ಯಾಂಕ್ ಗಳ ಬಾಬ್ತು ದೊಡ್ಡ ಮೊತ್ತದ ಕೇಂದ್ರ ಬ್ಯಾಂಕ್ ನ ಸಾಲಗಳನ್ನು ಸರಕಾರ ಮನ್ನಾ ಮಾಡಿದರೆ ಮಾತ್ರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿಸಾಲ ನೀಡಲು ಸಾಧ್ಯ’’ ಎಂದರು.
‘‘ಪ್ರಸಕ್ತ ಸಾಲಿಗೆ ಕೇಂದ್ರ ಬ್ಯಾಂಕ್ ನಿಂದ ಬರುವ 1.20 ಕೋಟಿ ರೂ. ಸಾಲ ಮಂಜೂರಾತಿಯಲ್ಲಿಎಸ್ಸಿ, ಎಸ್ಟಿಗೆ 28 ಲಕ್ಷ ರೂ. ಮೀಸಲಿಟ್ಟು, ಉಳಿಕೆ ಸಾಲವನ್ನು ಇತರೆ ರೈತರಿಗೆ ನೀಡುತ್ತೇವೆ. ಟ್ರ್ಯಾಕ್ಟರ್ ಸಾಲ ಕೊಡಲು ಸಭೆಯಲ್ಲಿತೀರ್ಮಾನವಾಗಿದೆ. ಮುಂದಿನ ದಿನಗಳಲ್ಲಿವಾಹನ ಸಾಲ, ಹನಿ ನೀರಾವರಿ ಸಾಲ, ರೇಷ್ಮೆ ಬೆಳೆ ಅಭಿವೃದ್ಧಿ ಜತೆಗೆ ಚಿನ್ನಾಭರಣಗಳ ಮೇಲೂ ಸಾಲ ನೀಡುವ ಉದ್ದೇಶ ಹೊಂದಲಾಗಿದೆ’’ ಎಂದು ಭರವಸೆ ನೀಡಿದರು.
‘‘ಸಾಲ ಮರುಪಾವತಿಯಲ್ಲಿನಮ್ಮ ಬ್ಯಾಂಕ್ ಜಿಲ್ಲೆಯಲ್ಲಿ2ನೇ ಸ್ಥಾನದಲ್ಲಿದೆ. ಆದ್ದರಿಂದ ಸಾಲ ಪಡೆದ ರೈತರು ಸಕಾಲದಲ್ಲಿಮರುಪಾವತಿಸಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಕೈಜೋಡಿಸಬೇಕು’’ ಎಂದು ಮನವಿ ಮಾಡಿದರು.
ಬ್ಯಾಂಕ್ ವ್ಯವಸ್ಥಾಪಕ ಮುತ್ತುರಾಜು ಅವರು 2025-26 ನೇ ಸಾಲಿನಲ್ಲಿಬ್ಯಾಂಕ್ ನ ವ್ಯವಹಾರಗಳು ಮತ್ತು ಸೇವೆಯ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್ ಉಪಾಧ್ಯಕ್ಷ ಯಡವನಹಳ್ಳಿಲಿಂಗನಾಯಕ, ನಿರ್ದೇಶಕರಾದ ಎಸ್ .ಎಂ.ಮಲ್ಲಿಕಾರ್ಜುನ್ , ಮಹದೇವಪ್ಪ, ಎಚ್ .ವಿ.ಬಸವರಾಜು, ಹಂಗಳಪುರರೇವಣ್ಣ, ಹಳ್ಳದಮಾದಹಳ್ಳಿಮಹೇಂದ್ರ, ಶಿವಯ್ಯ, ರಾಜು, ಶ್ರೀಕಂಠಸ್ವಾಮಿ, ಪ್ರೇಮಾ, ಚಾರುಮತಿ, ಅಂಜು, ದೇವಮ್ಮ, ಶಂಭುಲಿಂಗಸ್ವಾಮಿ, ಹಿರಿಯ ಸಹಾಯಕ ಜಿ.ಸುರೇಶ್ , ಕ್ಷೇತ್ರಾಧಿ ಕಾರಿ ಡಿ.ರಾಜು, ಸುಮಿತ್ರ, ಮಹೇಶ್ , ಕಿರಣ್ ಕುಮಾರ್ , ಪಿಗ್ಮಿ ಏಜೆಂಟ್ ಗಳಾದ ಬಾಲಸುಬ್ರಹ್ಮಣ್ಯ, ಸಂಜಯ್ , ಬಾಲಾಜಿ, ಸಿದ್ದರಾಜು ಮತ್ತು ಷೇರುದಾರರು, ಸರ್ವ ಸದಸ್ಯರು ಹಾಜರಿದ್ದರು.
ಸಿಎಚ್ ಎನ್ 20ಜಿಪಿಟಿ5
ಗುಂಡ್ಲುಪೇಟೆಯಲ್ಲಿನಡೆದ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ ಡಿ)ನ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ನಾಗೇಂದ್ರಮಾಡ್ರಹಳ್ಳಿ ಉದ್ಘಾಟಿಸಿದರು.