ವಿಕ ಸುದ್ದಿಲೋಕ ಶಿರಸಿಪ್ರಮುಖ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿಒಂದಾದ ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ (ಟಿಆರ್ ಸಿ) 2025-26 ನೇ ಸಾಲಿನಲ್ಲಿ1.44 ಕೋಟಿ ರೂ.ಲಾಭ ಗಳಿಸಿದೆ. ಶೇರು ಸಂಗ್ರಹಣೆ, ನಿಧಿಗಳ ಶೇಖರಣೆ ಒಳಗೊಂಡು ಎಲ್ಲವಿಭಾಗಗಳಲ್ಲಿಪ್ರಗತಿ ಸಾಧಿಸಿದೆ ಎಂದು ಟಿಆರ್ ಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ತಿಳಿಸಿದ್ದಾರೆ.
ಕಳೆದ ಮಾರ್ಚ್ ಅಂತ್ಯಕ್ಕೆ ಇದ್ದಂತೆ ಸಂಘದ ಸಾಂಪತ್ತಿಕ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ. ಟಿಆರ್ ಸಿಯು ಸತತವಾಗಿ ‘ಅ’ ವರ್ಗದ ಆಡಿಟ್ ವರ್ಗೀಕರಣದಲ್ಲಿಮುಂದುವರಿದಿದೆ. ಸಂಘದ ನಿಕ್ಕಿ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.0.00 ಆಗಿದೆ. ಕಳೆದ 3 ವರ್ಷಗಳಿಂದ ಸದಸ್ಯರ ಸಾಲ ವಸೂಲಾತಿಯಲ್ಲಿಶೇ.99.80ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷ 141.68 ಕೋಟಿ ರೂ.ಗೂ ಮೀರಿ ವಿವಿಧ ರೀತಿಯ ಸಾಲಗಳನ್ನು ಸದಸ್ಯರಿಗೆ ನೀಡಿದೆ. ಈ ಪೈಕಿ 73.48 ಕೋಟಿ ರೂ. ಕೃಷಿ ಸಾಲ ನೀಡಿದೆ. ವರ್ಷಾಂತ್ಯಕ್ಕೆ 183.46 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
113 ವರ್ಷಗಳ ಹಿಂದೆ ಕೇವಲ 16 ಸದಸ್ಯರ 80 ರೂ. ಶೇರು ಬಂಡವಾಳದಿಂದ ಪ್ರಾರಂಭಗೊಂಡ ಸಂಘವು 3262 ಶೇರು ಸದಸ್ಯರನ್ನು ಹೊಂದಿದ್ದು 12.31 ಕೋಟಿ ರೂ.ಗೂ ಮೀರಿ ಶೇರು ಸಂಗ್ರಹಿಸಿದೆ. ಟಿಆರ್ ಸಿ ತನ್ನ ಬೆಳವಣಿಗೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು ಕಾಲಕಾಲಕ್ಕೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಧನಸಹಾಯವನ್ನೂ ಮಾಡುತ್ತಲಿದೆ. ಪ್ರಸಕ್ತ ವರ್ಷ ಟಿಆರ್ ಸಿಯಿಂದ ಟಿಎಸ್ ಎಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಖರೀದಿಗೆ 4.50 ಲಕ್ಷ ರೂ. ಧನಸಹಾಯ ನೀಡಲಾಗಿದೆ ಎಂದು ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ.
ಬಾಕ್ಸ್
ನಾಳೆ ವಾರ್ಷಿಕ ಸಭೆ
ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಟಿಆರ್ ಸಿ ಸಭಾಭವನದಲ್ಲಿಸೆ.22ರ ಬೆಳಗ್ಗೆ 10ಕ್ಕೆ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ ಎಂದು ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ.