ವಿಕ ಸುದ್ದಿಲೋಕ ಮಂಗಳೂರುಮಂಗಳೂರಿನಲ್ಲಿನಡೆದ ಸಂಪುಟ ಸಭೆಯಲ್ಲಿತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿಬೆಂಗಳೂರಿನಲ್ಲಿರುವ ತುಳುನಾಡ ಜವನೆರ್ ಸಂಘದಿಂದ ಭಾನುವಾರ ಬೆಂಗಳೂರಿನಲ್ಲಿಸಂಭ್ರಮಾಚರಣೆ ನಡೆಸಲಾಯಿತು.
ಭಾನುವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ರಾಣಿ ಅಬ್ಬಕ್ಕ ಸರ್ಕಲ್ ನಿಂದ ಚಂದ್ರಾ ಲೇಔಟ್ ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ವಾಹನ ಜಾಥಾ ನಡೆಸಲಾಯಿತು. ಜಾಥಾದಲ್ಲಿನೂರಾರು ಕಾರು, ಬೈಕ್ ಗಳಲ್ಲಿತುಳು ಬಾವುಟಗಳನ್ನು ಹಿಡಿದಿರುವುದು ಮತ್ತು ಕಾರುಗಳಿಗೆ ತುಳುಬಾವುಟಗಳನ್ನು ಹೊದಿಕೆ ಹಾಕಿರುವುದು ಎಲ್ಲರ ಗಮನ ಸೆಳೆಯಿತು. ಮಹಾಲಕ್ಷ್ಮೇ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯ, ಬಿಬಿಎಂಪಿ ನಿಕಟ ಪೂರ್ವ ಸದಸ್ಯ ಉಮೇಶ್ ಶೆಟ್ಟಿ, ಕೆಎಸ್ ಡಿಎಲ್ ಐನ ಪ್ರಶಾಂತ್ ಪಾಲ್ಗೊಂಡಿದ್ದರು. ತುಳುನಾಡ ಜವನೆರ್ ಸಂಘದ ಅಧ್ಯಕ್ಷರು ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
ಕ್ಯಾಪ್ಸನ್ : ಬೆಂಗಳೂರಿನಲ್ಲಿರುವ ತುಳುನಾಡ ಜವನೆರ್ ಸಂಘದಿಂದ ಬೆಂಗಳೂರಿನಲ್ಲಿವಾಹನ ಜಾಥಾ ನಡೆಯಿತು.