ತೆರಕಣಾಂಬಿ: ಸಾರಿಗೆ ಬಸ್ ನ ಹಿಂಭಾಗದ ಟೈರ್ ಸಿಡಿದ ಪರಿಣಾಮ ಬಸ್ ನಲ್ಲಿಪ್ರಯಾಣಿಸುತ್ತಿದ್ದ ಮಹಿಳೆಯ ಕಾಲಿಗೆ ಪೆಟ್ಟುಬಿದ್ದ ಘಟನೆ ತೆರಕಣಾಂಬಿ ಸಮೀಪ ನಡೆದಿದೆ.ಗುಂಡ್ಲುಪೇಟೆ ಡಿಪೊಗೆ ಸೇರಿದ ಬಸ್ ಕೊಂಗಳ್ಳಿಬೆಟ್ಟದಿಂದ ಗುಂಡ್ಲುಪೇಟೆ ಪಟ್ಟಣದತ್ತ ಬರುತ್ತಿದ್ದ ವೇಳೆ ತೆರಕಣಾಂಬಿ ಸಮೀಪ ಹಿಂಭಾಗದ ಟೈರ್ ಏಕಾಏಕಿ ಸಿಡಿದಿದೆ. ಈ ವೇಳೆ ಬಸ್ ನಲ್ಲಿಅರಕಲವಾಡಿಯಿಂದ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಅನಿತಾ ಅವರ ಕಾಲಿಗೆ ಪೆಟ್ಟುಬಿದ್ದಿದೆ.
ಘಟನೆಯ ಬಳಿಕ ಗಾಯಗೊಂಡ ಅನಿತಾ ಅವರನ್ನು ತಕ್ಷಣ ತೆರಕಣಾಂಬಿ ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಕಾಲಿಗೆ ಚಿಕಿತ್ಸೆ ನೀಡಲಾಗಿದೆ. ಬಳಿಕ ಜೀಪ್ ಮೂಲಕ ಅವರ ಮನೆಗೆ ಕರೆತಂದು ಬಿಡಲಾಗಿದೆ ಎಂದು ಗುಂಡ್ಲುಪೇಟೆ ಡಿಪೊ ವ್ಯವಸ್ಥಾಪಕ ಕುಮಾರನಾಯಕ್ ತಿಳಿಸಿದ್ದಾರೆ.
---....
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪ ಬಸ್ ಟೈರ್ ಸಿಡಿದು ಗಾಯಗೊಂಡ ಅನಿತಾ ಅವರ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದೆ.