ಗೌತಮ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

Contributed byaajayadvt@gmail.com|Vijaya Karnataka
Vijay Karnataka
ವಿಕ ಸುದ್ದಿಲೋಕ ಕೊಳ್ಳೇಗಾಲ

ಗೌತಮ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ .ಕೆ ಅಧ್ಯಕ್ಷತೆಯಲ್ಲಿನಡೆಯಿತು.
ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘‘ಈ ಆಡಳಿತ ಮಂಡಳಿಯ ಅವಧಿಯಲ್ಲಿಸಂಘ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದೆ. ಸದಸ್ಯರಿಗೆ ಸಂಘದಿಂದ ಸಾಲ ಸೌಲಭ್ಯ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾಲ ಪಡೆದವರು ಸಕಾಲದಲ್ಲಿಮರು ಪಾವತಿ ಮಾಡಬೇಕು ಹಾಗೂ ಸಂಘದಲ್ಲಿರುವ ಎಲ್ಲಾಸದಸ್ಯರು ಸಂಘದ ಅಭಿವೃದ್ಧಿಗಾಗಿ ಜತೆ ಕೈಜೋಡಿಸಬೇಕು,’’ಎಂದರು.

ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ‘‘ಸಂಘದ ಅಧ್ಯಕ್ಷರ ನೇತೃತ್ವದಲ್ಲಿಇದುವರೆಗೂ ಉತ್ತಮವಾಗಿ ನಮ್ಮ ಸಂಘ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಂಘದಲ್ಲಿ714 ಸದಸ್ಯರಿದ್ದು, ಈ ಸಾಲಿನಲ್ಲಿ98,714 ರೂ. ನಿವ್ವಳ ಲಾಭಗಳಿಸಿದೆ,’’ಎಂದು ತಿಳಿಸಿದರು.

ಸಭೆಯಲ್ಲಿಸಂಘದ ಉಪಾಧ್ಯಕ್ಷರು ಕೆ.ಬಸವರಾಜು, ನಿರ್ದೇಶಕರಾದ ರಾಚಪ್ಪಾಜಿ, ಎಂ.ಮಹದೇವ, ಕೆ.ಸಿದ್ದಯ್ಯ, ಡಿ.ಲಿಂಗರಾಜು, ಸೌಭಾಗ್ಯ, ಎಸ್ .ಸುಶೀಲ ಹಾಗೂ ಸದಸ್ಯರು ಇದ್ದರು.

ಫೋಟೋ ಕೆಜಿಎಲ್ 21-2

ಕೊಳ್ಳೇಗಾಲದ ವಿಶ್ವಚೇತನ ಸಂಸ್ಥೆ ಆವರಣದಲ್ಲಿಗೌತಮ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ನಂಜುಂಡಸ್ವಾಮಿ.ಕೆ ಉದ್ಘಾಟಿಸಿದರು.