ಹುಳ್ಳೇನಹಳ್ಳಿ ಡೇರಿಯಲ್ಲಿ ಹೈನುಗಾರಿಕೆ ಬೋನಸ್ ಘೋಷಣೆ

Contributed bypaddu.thippasandara@gmail.com|Vijaya Karnataka
Vijay Karnataka
ಮಾಗಡಿ ಗ್ರಾಮಾಂತರ: ಮಾಗಡಿಯ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸಲಾಯಿತು.

ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಎಚ್ .ಮಡಿಯಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ನಮ್ಮ ಹಾಲು ಡೇರಿಗೆ 5,88,600 ರೂ.ನಿವಳ ಲಾಭ ಬಂದಿದ್ದು ಪ್ರತಿ ವರ್ಷದಂತೆ ಈ ವರ್ಷಕ್ಕೆ ಹಾಲು ಉತ್ಪಾದನೆ ಹೆಚ್ಚಾಗಿದೆ. ಉತ್ತಮ ಗುಣಮಟ್ಟವು ಕೂಡ ಇದೆ ಉತ್ಪಾದಕರು ಸಂಘಕ್ಕೆ ಬೋನಸ್ ನೀಡಬೇಕೆಂದು ಮನವಿ ಮಾಡಿದ್ದು, 2.4 ಲಕ್ಷ ರೂ. ಬೋನಸ್ ಅನ್ನು ಉತ್ಪಾದಕರ ಖಾತೆಗೆ ನೀಡುವುದಾಗಿ ಸಭೆಯಲ್ಲಿಚರ್ಚಿಸಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿಉಪಾಧ್ಯಕ್ಷ ಜಮಾಲ್ ಖಾನ್ , ನಿರ್ದೇಶಕರಾದ ಗಿರಿಯಣ್ಣ, ಶಿವಣ್ಣ, ರವೀಶ್ , ರಾಮಣ್ಣ ಹುಚ್ಚಮ್ಮ, ಸಂಜೀವಮ್ಮ, ಮುನಿರಾಜು,ಶಾಹಿದ್ , ಮುಖಂಡರಾದ ಚಿಕ್ಕೇಗೌಡ, ಅರುಣ್ , ಹೇಮಂತ್ , ಮೋಹನ್ , ಹನುಮಂತೇಗೌಡ, ಕಿರಣ್ , ಮಹೇಶ್ ಮತ್ತು ಪ್ರಭಾರಿ ಕಾರ್ಯದರ್ಶಿ ಪುಷ್ಪಲತಾ ಹಾಗೂ ಹೈನುಗಾರರು ಉಪಸ್ಥಿತರಿದ್ದರು.

21ಎಸ್ ಎಲ್ ಆರ್ 4

ಹುಳ್ಳೇನಹಳ್ಳಿ ಡೇರಿ ಸಭೆ.