ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸಹಿ ಅಭಿಯಾನ

Contributed byvkbedra@gmail.com|Vijaya Karnataka
Vijay Karnataka
ವಿಕ ಸುದ್ದಿಲೋಕ ಮೂಡುಬಿದಿರೆ

ಭಾರತದಲ್ಲಿಗೋ ಹತ್ಯೆ ಸಂಪೂರ್ಣವಾಗಿ ನಿಷೇಧಿಸಬೇಕು, ನಿರ್ಮೂಲನೆ ಮಾಡಬೇಕು. ರಾಷ್ಟ್ರ ಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪೂಜೆ, ರಾಷ್ಟ್ರೀಯ ಪರಂಪರೆಯ ಸ್ಥಾನಮಾನ ನೀಡಬೇಕು. ಗೋಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಇಲ್ಲಿನ ಅಲಂಗಾರಿನಲ್ಲಿನಾಗರಿಕರ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಯಿತು.
ಗೋ ಸೇವೆಗಾಗಿ ಕೇಂದ್ರೀಯ ಸಚಿವಾಲಯ ಸ್ಥಾಪಿಸಬೇಕು. ಮೇವು ಭದ್ರತಾ ನೀತಿ ಅಂತಿಮಗೊಳಿಸಬೇಕು. ಗೋವು ಆಧಾರಿತ ಕೃಷಿ ಖಚಿತಪಡಿಸಿಕೊಳ್ಳಬೇಕು ಮತ್ತು ವೇದ ಲಕ್ಷಣ ಗೋವಂಶದ ಜಾನುವಾರುಗಳಿಂದ ಪಡೆದ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಮಂಡಿಸಲಾಯಿತು.

ಪಡುಮಾರ್ನಾಡು ಜನತಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ತಂಡವು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿಯನ್ನು ಭೇಟಿ ಮಾಡಿ ಅಭಿಯಾನಕ್ಕೆ ಬೆಂಬಲ ಕೋರಿದ್ದರ ಮೇರೆಗೆ ಬೆಂಬಲ ವ್ಯಕ್ತವಾಗಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ಎಂ.ದಯಾನಂದ ಪೈ, ನಿರ್ದೇಶಕಿ ಉಷಾ ಡಿ.ಪೈ, ಉಪಾಧ್ಯಕ್ಷ ರಾಜೇಶ್ ಕಾಮತ್ , ಕಾರ್ಯದರ್ಶಿ ಉಮಾವತಿ ಸಹಿತ ಇತರ ನಿರ್ದೇಶಕರು ಉಪಸ್ಥಿತರಿದ್ದರು. ಗೋ ಸೇವಾ ಸಂಯೋಜಕ ಅಲಂಗಾರು ಅಶೋಕ ಭಂಡಾರಿ ತಂಡದ ನೇತೃತ್ವ ವಹಿಸಿದ್ದರು.

ಚಿತ್ರ: 21ಎಂಡಿಬಿ ಅಭಿಯಾನ