*ಮಳೆ ಪ್ಯಾಕೇಜ್ .. ಲಾಜರ್ ದೊಡ್ಡಿ ಕೊಚ್ಚಿ ಹೋದ ಚೆಕ್ ಡ್ಯಾಂ

Contributed byabhilash.gowda7707@gmail.com|Vijaya Karnataka
Vijay Karnataka
-ಸುರಕ್ಷಿತ ಹೊಸ ಚೆಕ್ ಡ್ಯಾಂ ನಿರ್ಮಿಸಲು ರೈತರ ಆಗ್ರಹ

ವಿಕ ಸುದ್ದಿಲೋಕ ಹನೂರು
ತಾಲೂಕಿನ ಲಾಜರ್ ದೊಡ್ಡಿ ಗ್ರಾಮದಲ್ಲಿಒಡಿಪಿ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಹಲವು ವರ್ಷಗಳ ಬಳಿಕ ಈ ಭಾಗದಲ್ಲಿಭಾರಿ ಪ್ರಮಾಣದ ಮಳೆಯಾಗಿದ್ದು, ಹಳ್ಳದಲ್ಲಿನೀರಿನ ಹರಿವು ಹೆಚ್ಚಾದ ಪರಿಣಾಮ ಚೆಕ್ ಡ್ಯಾಂನ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ. ಭಾರಿ ಮಳೆಯಿಂದ ಹಳ್ಳದಲ್ಲಿಸುಮಾರು 15 ಅಡಿಗೂ ಹೆಚ್ಚು ನೀರು ಹರಿದು ಬಂದಿದ್ದು, ನೀರಿನ ರಭಸಕ್ಕೆ ಚೆಕ್ ಡ್ಯಾಂನ ಕಲ್ಲಿನ ಗೋಡೆ ತೀವ್ರ ಹಾನಿಗೊಳಗಾಗಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಘಟನೆಯಿಂದ ಚೆಕ್ ಡ್ಯಾಂನಲ್ಲಿಸಂಗ್ರಹವಾಗುತ್ತಿದ್ದ ನೀರಿನ ಸೌಲಭ್ಯವೂ ಇಲ್ಲದಂತಾಗಿದೆ.

ರೈತರ ಆತಂಕ: ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಚೆಕ್ ಡ್ಯಾಂ ಸುತ್ತಮುತ್ತಲಿನ ರೈತರಿಗೆ ನೀರಾವರಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿತ್ತು. ಮಳೆಗಾಲದಲ್ಲಿನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿಯಾಗಿದ್ದ ಚೆಕ್ ಡ್ಯಾಂ ಇದೀಗ ಕೊಚ್ಚಿಹೋಗಿರುವುದರಿಂದ ಮುಂದಿನ ದಿನಗಳಲ್ಲಿಕೃಷಿಗೆ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕ ರೈತರಲ್ಲಿಮೂಡಿದೆ.

ಚೆಕ್ ಡ್ಯಾಂ ಕೊಚ್ಚಿ ಹೋಗಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟಿದ್ದಾರೆ. ಘಟನೆಯ ಕುರಿತು ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾಕ್ಸ್ ...

ಸುರಕ್ಷಿತ ಹೊಸ ಚೆಕ್ ಡ್ಯಾಂ ನಿರ್ಮಿಸಿ

ಕೊಚ್ಚಿ ಹೋಗಿರುವ ಚೆಕ್ ಡ್ಯಾಂ ಸ್ಥಳದಲ್ಲಿಸುರಕ್ಷಿತ ಹೊಸ ಚೆಕ್ ಡ್ಯಾಂ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಮತ್ತೆ ನೀರಾವರಿ ಸೌಲಭ್ಯ ದೊರೆಯುವುದರ ಜತೆಗೆ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ವೃದ್ಧಿಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

----

ಅಊಓ21ಊಓಖ05

ಹನೂರು ತಾಲೂಕಿನ ಲಾಜರ್ ದೊಡ್ಡಿಯಲ್ಲಿಒಡಿಪಿ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ.