ಕೃಷಿಯಲ್ಲಿಎಐ ತಂತ್ರಜ್ಞಾನ ಬಳಸಿ

Contributed bymudholvk@gmail.com|Vijaya Karnataka
Vijay Karnataka
ಕೃಷಿಯಲ್ಲಿಎಐ ತಂತ್ರಜ್ಞಾನ ಬಳಸಿ

ವಿಕ ಸುದ್ದಿಲೋಕ ಮುಧೋಳ
‘‘ರೈತರು ಕೃಷಿಯಲ್ಲಿಬಾರಾಮತಿ ಮಾದರಿಯ ವೈಜ್ಞಾನಿಕ ಪದ್ಧತಿಗಳನ್ನು ಅವಳಡಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು,’’ಎಂದು ಎಂಆರ್ ಎನ್ ನಿರಾಣಿ ಸಮೂಹ ಸಂಸ್ಥೆ ಅಧ್ಯಕ್ಷ ಸಂಗಮೇಶ ನಿರಾಣಿ ಹೇಳಿದರು.

ತಾಲೂಕಿನ ಒಂಟಗೋಡಿಯ ಲಕ್ಷಿತ್ರ್ಮದೇವಿ ದೇವಸ್ಥಾನದ ಸಭಾ ಭವನದಲ್ಲಿಎಂಆರ್ ಎನ್ ಫೌಂಡೇಶನ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿಸಾವಯವ ಕೃಷಿ, ಕೃಷಿಯಲ್ಲಿಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಕುರಿತು ನಡೆದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಮುಧೋಳ, ಬುದ್ನಿ ಪಿಎಂ, ಮರೆಗುದ್ದಿ ಈ ಮಧ್ಯ ಕೃಷಿ, ತೋಟಗಾರಿಕೆ ತರಬೇತಿ ಕೇಂದ್ರ ಅಥವಾ ವಿವಿ ಆರಂಭಿಸುವ ಚಿಂತನೆ ನಡೆದಿದೆ. ಕೇವಲ ಸಕ್ಕರೆ ಉತ್ಪಾದನೆಗೆ ಸೀಮಿತವಾಗದೇ ಬಯೋಗ್ಯಾಸ್ ದಿಂದ ಎಥೆನಾಲ್ , ಬಯೋಪ್ಲಾಸ್ಟಿಕ್ ನಂತಹ ಉತ್ಪನ್ನಗಳನ್ನು ತಯಾರಿಸುವ ಮೂಲಕ ಕಾರ್ಖಾನೆಗಳು ಹೆಚ್ಚು ಆದಾಯಗಳಿಸಲು ಸಾಧ್ಯ,’’ಎಂದರು.

ಅಣ್ಣಾಸಾಹೇಬ ಟೊಣ್ಣೆ ಮಾತನಾಡಿದರು. ಸಾವಯುವ ಕೃಷಿ ಕುರಿತು ಕುಳಲಿಯ ಶಿವಾನಂದ ಗಣಿ, ಡಾ.ಮಂಜುನಾಥ ಚೌರಡ್ಡಿ, ಬಿ.ಬಿ.ಬೆಳಕೂಡ, ಡಾ.ಸಂಜಯ ಯಲಶೆಟ್ಟಿ, ಡಾ.ತಿಮಣ್ಣ ಅರಳಿಕಟ್ಟಿ, ಕಬ್ಬು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಗೋವಿಂದಪ್ಪ ಗುಜ್ಜನ್ನವರ, ಕೆ.ಟಿ.ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷ ಬಸವರಾಜ ಗೋಸಾರ, ರಾಜಶೇಖರ ಗೋಸಾರ, ಶಿವಾನಂದ ಕಲ್ಯಾಣಿ, ಅಶೋಕ ಗಂಗಣ್ಣವರ, ಅಜಯ್ ಯಲಶೆಟ್ಟಿ, ಎನ್ .ಪಿ.ಚೌಗಲೆ ಇದ್ದರು.

ಫೋಟೊ 20 ಎಂಡಿಎಲ್ 2

ಮುಧೋಳ ತಾಲೂಕಿನ ಒಂಟಗೋಡಿಯಲ್ಲಿಸಾವಯವ ಕೃಷಿ ಹಾಗೂ ಎಐ ತಂತ್ರಜ್ಞಾನದ ಕಾರ್ಯಾಗಾರಕ್ಕೆ ನಿರಾಣಿ ಸಮೂಹದ ಅಧ್ಯಕ್ಷ ಸಂಗಮೇಶ ನಿರಾಣಿ ಚಾಲನೆ ನೀಡಿದರು.