ಲಾಭದಲ್ಲಿಕೃಷಿ ಪತ್ತಿನ ಸಹಕಾರ ಸಂಘ (ಹೆಡ್ )

Contributed bykumbarvc75@gmail.com|Vijaya Karnataka
Vijay Karnataka
22ಎಲ್ ಕೆಡಿ1

ಲಕ್ಕುಂಡಿ ಕೃಷಿ ಪತ್ತಿನ ಸಹಕಾರಿ ಸಂಘ ನಂ.2ರ ವಾರ್ಷಿಕ ಮಹಾಸಭೆ (ಕಿಕ್ಕರ್ )
11.32 ಕೋಟಿ ರೂ. ವ್ಯವಹಾರ, 3.43 ಲಕ್ಷ ರೂ. ಲಾಭ (ಬಾಕ್ಸ್ )

ಲಾಭದಲ್ಲಿಕೃಷಿ ಪತ್ತಿನ ಸಹಕಾರ ಸಂಘ (ಹೆಡ್ )

ವಿಕ ಸುದ್ದಿಲೋಕ ಲಕ್ಕುಂಡಿ

ರಿಯಾಯಿತಿಯಲ್ಲಿಬಿತ್ತನೆ ಬೀಜ ಮಾರಾಟ, ಸರಕಾರದ ಬೆಂಬಲ ಬೆಲೆ ಕಡಲೆ ಖರೀದಿ, ಪಿಗ್ಮಿ ಸಾಲ, ಕೃಷಿ ಸಾಲ ಬಡ್ಡಿ ಸಂಗ್ರಹ, ಠೇವಣಿ ಹಣದ ಸಂಗ್ರಹ, ನ್ಯಾಯ ಬೆಲೆ ಅಂಗಡಿಯ ವ್ಯವಹಾರವು ಸೇರಿದಂತೆ ವಿವಿಧ ಮೂಲಗಳಿಂದ ಸಂಘವು ಪ್ರಸ್ತುತ ವರ್ಷದಲ್ಲಿ3.43 ಲಕ್ಷ ರೂ. ಲಾಭ ಗಳಿಸಿದ್ದು ಹೆಮ್ಮೆಯಾಗಿದೆ ಎಂದು ಪಿಕೆಪಿಎಸ್ ನಂ 2ರ ಅಧ್ಯಕ್ಷ ಮಹೇಶ ಮುಸ್ಕಿನಭಾವಿ ಹೇಳಿದರು.

ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ 2ರ 108ನೇ 2025-26 ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರು ಸಂಘದ ಅಭಿವೃದ್ಧಿಗಾಗಿ ಸದಾ ಬೆಂಬಲವಾಗಿ ನಿಂತಿದ್ದರಿಂದ ಸಂಘವು ಪ್ರತಿ ವರ್ಷ ಲಾಭದ ಹಾದಿಯಲ್ಲಿಬರುತ್ತಿದೆ. ಸಂಘವು ಠೇವುಗಳ ಆಕರ್ಷಕ ಬಡ್ಡಿಯನ್ನು ನೀಡುತ್ತಿದ್ದು, ಗ್ರಾಹಕರು ಅಧಿಕ ಪ್ರಮಾಣದಲ್ಲಿಠೇವು ಇಡಲು ಮುಂದೆ ಬರಬೇಕು. ಶೇ.90 ಸಾಲ ವಸೂಲಿಯು ಹೆಮ್ಮೆಯಾಗಿದೆ. ಈ ವರ್ಷ ಬಂದ ಲಾಭದಲ್ಲಿಷೇರುದಾರರಿಗೆ ಶೇ.8 ಡಿವಿಡೆಂಡ್ ನೀಡಲಾಗುತ್ತಿದೆ. ರೈತ ಸದಸ್ಯರಿಗೆ ಬಡ್ಡಿ ರಹಿತ ಸಾಲ ನೀಡುವುದರ ಜತೆಗೆ ಕೇವಲ ಶೇ.3 ರಲ್ಲಿಕೃಷಿ ಮಾಧ್ಯಮಿಕ ಸಾಲಗಳನ್ನು ನೀಡಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಳೆದ ವರ್ಷದಿಂದ ನ್ಯಾಯ ಬೆಲೆ ಅಂಗಡಿ ಆರಂಭವಾಗಿದ್ದು, 149 ಪಡಿತರ ಚೀಟಿಗಳನ್ನು ಹೊಂದಿದೆ. ಕಳೆದ ವರ್ಷ 30 ಜನ ನೂತನ ಸದಸ್ಯರೊಂದಿಗೆ 359 ಸದಸ್ಯರನ್ನೊಳಗೊಂಡ ಸಂಘಕ್ಕೆ ನಿಯಮಾವಳಿಗೆ ಬದ್ಧರಾಗುವ ಹೆಚ್ಚಿನ ಕೃಷಿಕ ಸದಸ್ಯರನ್ನು ಷೇರುದಾರರನ್ನಾಗಿ ನೇಮಿಸಿಕೊಳ್ಳಲಾಗುವುದು. ಇನ್ನು ಸಂಘವು 108 ವರ್ಷ ಪೂರೈಸಿದೆ. ಶತಮಾನೋತ್ಸವ ಆಚರಣೆ ಮಾಡಲು ಚರ್ಚೆ ಮಾಡಲಾಗುತ್ತಿದೆ. ತಮ್ಮೆಲ್ಲರ ಸಹಾಯ ಸಹಕಾರ ಅವಶ್ಯವಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಪರಶುರಾಮ ಕರಿಯಲ್ಲಪ್ಪನವರ ಮಾತನಾಡಿ, ರಾಸಾಯನಿಕ ಮತ್ತು ಸಾವಯವ ಗೊಬ್ಬರ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ಲೈಸನ್ಸ್ ಪಡೆದುಕೊಂಡಿದ್ದು, ಶೀಘ್ರ ಗೊಬ್ಬರ ಮಾರಾಟ ಮಾಡಲು ಆರಂಭಿಸಲಾಗುವುದು ಎಂದರು.

ಸಂಘದ ಸದಸ್ಯ ದತ್ತಾತ್ರೇಯ ಜೋಶಿ ಮಾತನಾಡಿದರು. ಮುಖ್ಯ ಕಾರ್ಯ ನಿವಾಹಕ ಜಿ.ಬಿ.ಬೆನಕಲ್ ವಾರ್ಷಿಕ ವರದಿ ವಾಚಿಸಿದರು.

ಪಿಡಿಒ ಅಮೀರನಾಯಕ ನಾಯಕ ಮಾತನಾಡಿದರು. ಸಂಘದ ಹಿರಿಯ ಸದಸ್ಯರು ಹಾಗೂ ಕೃಷಿ ಮತ್ತು ಹೈನುಗಾರಿಕೆಯಲ್ಲಿಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯರಾದ ಈಶ್ವರಪ್ಪ ಕುಂಬಾರ, ಗವಿಶಿದ್ದಪ್ಪ ರೇವಡಿ ಕಾರ್ಯಕ್ರಮ ಉದ್ಘಾಟಿಸಿದರು.

ನಿರ್ದೇಶಕರಾದ ಮಲ್ಲಿಕಾರ್ಜುನ ಹಗರಿ, ಅಶೋಕ ಮುಸ್ಕಿನಭಾವಿ, ಪಂಚಾಕ್ಷರಯ್ಯ ನಾಗಾವಿಮಠ, ನಿಂಗಪ್ಪ ಮಂಗಳೂರು, ವಿರುಪಾಕ್ಷಪ್ಪ ಕಮತರ, ಕಲ್ಲಪ್ಪ ಬಣವಿ, ಸಕ್ರಪ್ಪ ರಾಮತಾಳ, ಮಾಳವ್ವ ಸೋಮನಕಟ್ಟಿ, ಗಂಗಮ್ಮ ಮುಕ್ಕಣ್ಣವರ, ಅನ್ನಪೂರ್ಣ ಹಡಗಲಿ, ಗ್ರಾಪಂ ಕಾರ್ಯದರ್ಶಿ ಗಣೀಶ ಪೂಜಾರ ಹಾಗೂ ಪ್ರಕಾಶ ಅರಹುಣಶಿ, ನೀಲವ್ವ ವಡ್ಡರ, ಚಾಂದಭಿ ಯರಗುಡಿ ಹಾಜರಿದ್ದರು.

ಶರಣಪ್ಪ ಗರ್ಜಪ್ಪನವರ ಪ್ರಾರ್ಥಿಸಿದರು. ಬಸವರಾಜ ಮುಳ್ಳಾಳ ಸ್ವಾಗತಿಸಿದರು. ಮಂಜುನಾಥ ಗದಗಿನ ನಿರೂಪಿಸಿದರು. ಕಿರಣ ಬಡಿಗೇರ ವಂದಿಸಿದರು.

ಫೋಟೊ: 22 ಎಲ್ ಕೆಡಿ 1:

ಲಕ್ಕುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2ರ 108ನೇ ವಾರ್ಷಿಕ ಸಭೆಯಲ್ಲಿಹಿರಿಯ ಮತ್ತು ಸಾಧಕ ರೈತರನ್ನು ಸನ್ಮಾನಿಸಲಾಯಿತು.