150 ಸಾಧಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ

Contributed bymambadynews@gmail.com|Vijaya Karnataka
150
ವಿಕ ಸುದ್ದಿಲೋಕ ಬಂಟ್ವಾಳ

ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ 2026ನೇ ಸಾಲಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗದ 150 ಸಾಧಕ ಕೃಷಿಕರಿಗೆ ‘ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ಬಿ.ಸಿ. ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿಸೋಮವಾರ ನಡೆಯಿತು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ದ.ಕ. ಜಿಲ್ಲಾಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಆರ್ . ಪೂಜಾರಿ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ ಮಾತನಾಡಿ, ಸಾವಯವ ಕೃಷಿ ಹಾಗೂ ಕೃಷಿ ಕ್ಷೇತ್ರದಲ್ಲಿಅದ್ವಿತೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಸೌಭಾಗ್ಯ ನಮಗೆ ದೊರೆತಿರುವುದು ಅತ್ಯಂತ ಸಂತಸದ ವಿಷಯ. ಅನ್ನದಾತರ ಸೇವೆಯು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದ್ದು, ರೈತ ಬಂಧುಗಳ ತ್ಯಾಗ ಹಾಗೂ ಶ್ರಮವನ್ನು ನಾವೆಲ್ಲರೂ ಅನುದಿನವೂ ಸ್ಮರಿಸಬೇಕಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ , ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಿಶೋರ್ ಗೌಡ ಶಿರಾಡಿ, ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲುಹಾಗೂ ಕರ್ನಾಟಕ ಸಾವಯವ ಕೃಷಿ ಯೋಜನೆ ಸಹ ಆಡಳಿತ ನಿರ್ದೇಶಕಿ ಅಶ್ವಿನಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.

2025ನೇ ಸಾಲಿನ ಕೃಷಿ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಸೈನಿಕ ಅಮ್ಮಣ್ಣ ರೈ ಪುತ್ತೂರು, ಮಾಳ ವಿನಿತ್ ಹೆಗ್ಡೆ ಕಾರ್ಕಳ, ಮನ್ಮಥ ನಾಯಕ್ ಹೆಬ್ರಿ, ರಾಮಮೂರ್ತಿ ಕಲ್ಕಾರ್ , ಪೊಸಂದೋಡಿ ದುಗ್ಗಪ್ಪ ಗೌಡ, ಲ್ಯಾನ್ಸಿ ಪಿರೇರಾ ಪೊನ್ನಂಗಿಲ, ಜಯಪ್ರಕಾಶ್ ಬದಿನಾರ್ , ಆನಂದ ಸಿ.ಎಚ್ ., ಈಶ್ವರ ಗೌಡ, ರಾಮಮೂರ್ತಿ ಹೆಬ್ರಿ ಹಾಗೂ ಬಾಲಕೃಷ್ಣ ಅಂಚನ್ ಭಾಗವಹಿಸಿದ್ದರು. ಹಿರಿಯ ಶಾಖಾಧಿಕಾರಿ ಭಾರತಿ ರೈ ಅರಿಯಡ್ಕ, ಉಡುಪಿ ಹಿರಿಯ ಮುಖ್ಯಾಧಿಕಾರಿ ಶಾರದಾ ಶೆಟ್ಟಿ ಕಾರ್ಕಳ ಮತ್ತು ಕಾಸರಗೋಡು ಜಿಲ್ಲಾಹಿರಿಯ ಅಧಿಕಾರಿ ಪೂರ್ಣಿಮಾ ಅಡೂರ್ ಉಪಸ್ಥಿತರಿದ್ದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರ್ವಹಿಸಿದರು.

ಚಿತ್ರ: 22ಬಿಎಚ್ ಕಲ್ಮಂಜ

ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.