ಮುಡಿಪು: ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

Contributed bysathish.pundikai@gmail.com|Vijaya Karnataka
Vijay Karnataka
ನೂತನ ಪ್ರವೇಶ ದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

ವಿಕ ಸುದ್ದಿಲೋಕ ಕೊಣಾಜೆ
ಮುಡಿಪು ಶ್ರೀ ಕಿರಾತೇಶ್ವರ ಸ್ವಾಮಿ ದೈವಸ್ಥಾನದಲ್ಲಿನಡೆಯಲಿರುವ ಬ್ರಹ್ಮಕಲಶೋತ್ಸವ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ನೂತನ ಪ್ರವೇಶ ದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು.

ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರವೇಶ ದ್ವಾರ ನಿರ್ಮಾಣಕ್ಕೆ ದೈವಸ್ಥಾನದ ಆವರಣದಲ್ಲಿಭೂಮಿ ಪೂಜೆ ನೆರವೇರಿಸಲಾಯಿತು. ಬ್ರಹ್ಮಕಲಶೋತ್ಸವದ ಕುರಿತಾದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು. ಮುಡಿಪುವಿನ ಶ್ರೀ ಕಿರಾತೇಶ್ವರ ಸ್ವಾಮಿ ದೈವಸ್ಥಾನದಲ್ಲಿಹೊಸ ಪ್ರವೇಶ ದ್ವಾರಕ್ಕೆ ಕ್ಷೇತ್ರದ ತಂತ್ರಿಗಳಾದ ನಡಿಬೈಲು ಶ್ರೀ ಶಂಕರನಾರಾಯಣ ಭಟ್ ನೇತೃತ್ವದಲ್ಲಿಧಾರ್ಮಿಕ ವಿಧಿಗಳು ನಡೆಯಿತು.

ಮೊಕ್ತೇಸರ ಅರ್ಕಾನ ಭಂಡಾರಮನೆ ಮನು ವೆಂಕಟೇಶ್ ಭಟ್ , ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್ ಮತ್ತು ಪ್ರಶಾಂತ ಕಾಜವ ಮಿತ್ತಕೋಡಿ, ಅದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ , ಕಾರ್ಯಾದ್ಯಕ್ಷ ಚಂದ್ರಶೇಖರ ಗಟ್ಟಿ ಗುಂಡ್ಯ, ಉಪಾದ್ಯಕ್ಷರಾದ ವಿಜೇಶ್ ವಿ.ನಾಯಕ್ ನಾರ್ಯನಡಿಗುತ್ತು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಫೋಟೋ 22ಉಳ್ಳಾಲ ಕಿರಾತೇಶ್ವರ