ಕಡ್ಡಾಯ

Contributed bylingrajvc@gmail.com|Vijaya Karnataka
22nd september
ಮೈಲಾರಲಿಂಗೇಶ್ವರ ಸಂಘದ ಸಭೆ

15 ಲಕ್ಷ ರೂ.ಲಾಭ
ವಿಕ ಸುದ್ದಿಲೋಕ ಬಾದಾಮಿ

‘‘ಎಲ್ಲಸದಸ್ಯರ, ಸಿಬ್ಬಂದಿಗಳ ಶ್ರಮದ ಫಲವಾಗಿ ನಮ್ಮ ಸಂಘ ಲಾಭದತ್ತ ಸಾಗುತ್ತಿದೆ. ಪ್ರಸಕ್ತ ವರ್ಷ 15 ಲಕ್ಷ ರೂ.ಲಾಭವಾಗಿದೆ,’’ಎಂದು ಮೈಲಾರಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಹೇಶ ಹೊಸಗೌಡ್ರ ಹೇಳಿದರು.

ಸಂಘದ ಕಾರ್ಯಾಲಯದಲ್ಲಿನಡೆದ 2025-26ನೇ ಸಾಲಿನ 10ನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘‘ಸಂಘ 2017-18ರಲ್ಲಿ401 ಜನ ಸದಸ್ಯರೊಂದಿಗೆ ಆರಂಭವಾಗಿದ್ದು, ಈಗ 3800 ಸದಸ್ಯರನ್ನು ಹೊಂದಿದೆ. 13 ಕೋಟಿ ರೂ. ಠೇವಣಿಯೊಂದಿಗೆ ಲಾಭದತ್ತ ಮುನ್ನುಗ್ಗುತ್ತಿದೆ,’’ಎಂದರು. ಸಲಹೆಗಾರ ಎನ್ .ಬಿ.ಪಾಟೀಲ ವರದಿ ಓದಿದರು.

ಉಪಾಧ್ಯಕ್ಷ ಟಿ.ಎಸ್ .ಮೊಕಾಶಿ, ನಿರ್ದೇಶಕ ಎಸ್ .ಎಸ್ .ಯಾದವಾಡ, ಟಿ.ಎಚ್ .ಬೇಲೂರಪ್ಪನ್ನವರ, ಕೆ.ಬಿ.ಜಾಲಿಹಾಳ, ಎಂ.ಪಿ.ಕುರಿ, ಸಿದ್ದು ಕೋಲ್ಕಾರ, ಆನಂದ ಕೋಟಿ, ಪಿ.ಕೆ.ಪಾಟೀಲ, ಪರಸಪ್ಪ ತಿಮ್ಮಣ್ಣವರ, ಎನ್ .ಬಿ.ಪಾಟೀಲ ಇದ್ದರು.

ಈ ವೇಳೆ ಉತ್ತಮ ಗ್ರಾಹಕರು ಸನ್ಮಾನಿಸಲಾಯಿತು.

ಚಿತ್ರ ಮಾಹಿತಿ;

20-ಬಾದಾಮಿ-1;

ಬಾದಾಮಿ ಪಟ್ಟಣದ ಮೈಲಾರಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಸಭೆಯನ್ನು ಸಂಸ್ಥಾಪಕ ಅಧ್ಯಕ್ಷ ಮಹೇಶ ಹೊಸಗೌಡ್ರ ಉದ್ಘಾಟಿಸಿದರು.