ಇಂದೇ

Contributed bysatyappanavarpm@gmail.com|Vijaya Karnataka
22nd september
21ಎಸ್ .ಜಿ.ಎನ್ .1

ಜೋಕುಮಾರನಿಗೆ ವಿಶೇಷ ಪೂಜೆ
ವಿಕ ಸುದ್ದಿಲೋಕ ಬಂಕಾಪುರ

ಗಣೇಶ ಚತುರ್ಥಿಯ ಐದು ದಿನಗಳ ಬಳಿಕ ಜೋಕುಮಾರನ ಜನನದೊಂದಿಗೆ ಬಂಕಾಪುರದಲ್ಲಿಮತ್ತೊಂದು ವಿಶಿಷ್ಟ ಜನಪದ ,ಧಾರ್ಮಿಕ ಆಚರಣೆ ಆರಂಭವಾಗುತ್ತದೆ. ಜೋಕುಮಾರನ ದರ್ಶನ ಹಾಗೂ ಆರಾಧನೆಯಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಭಕ್ತರು ಭಕ್ತಿ, ಭಾವದಿಂದ ಪೂಜೆ ಸಲ್ಲಿಸುತ್ತಾರೆ.

ಪಟ್ಟಣದ ಕುಂಬಾರ ಓಣಿಯ ಗಂಗಪ್ಪ ಮಣಕಟ್ಟಿ ಅವರ ಮನೆಯಲ್ಲಿಜೋಕುಮಾರನ ಜನನದ ಸಾಂಪ್ರದಾಯಿಕ ಆಚರಣೆ ನಡೆಯಿತು. ಜೋಕುಮಾರನ ಆಗಮನದಿಂದ ಮನೆಗೆ ಒಳಿತು, ಮಳೆ-ಬೆಳೆ ಸಮೃದ್ಧಿ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಸ್ಥಳೀಯರ ನಂಬಿಕೆ. ಹೀಗಾಗಿ ಜೋಕುಮಾರನನ್ನು ಭಕ್ತಿಯಿಂದ ಬರಮಾಡಿಕೊಳ್ಳುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬರಲಾಗಿದೆ.

ಜೋಕುಮಾರನನ್ನು ಮಂಜಕ್ಕ ಜಾಲಗಾರ ಹಾಗೂ ಲಕ್ಷ್ಮವ್ವ ಕಳ್ಳಿಮನೆ ಅವರು ಹೊತ್ತು ಓಣಿಗಳಲ್ಲಿಸಂಚರಿಸುವರು. ಈ ವೇಳೆ ಭಕ್ತರು ಜೋಕುಮಾರನಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸುತ್ತಾರೆ.

...........ಬಾಕ್ಸ್ ............

ಜೋಕುಮಾರ ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪವಾಡ ಪುರುಷ. ಈ ವರ್ಷ ಮಳೆ,ಬೆಳೆ ಉತ್ತಮವಾಗಿ ಆಗಲಿ ಎಂದು ದೇವರಲ್ಲಿಬೇಡಿಕೊಂಡರು.

-ಸುರೇಶ ಕುರಗೋಡಿ, ಪುರಸಭೆ ಸದಸ್ಯ ಬಂಕಾಪುರ

ಪೋಟೋ ಪೈಲ್ ನೇಮ 21ಎಸ್ .ಜಿ.ಎನ್ .1

ಬಂಕಾಪುರ ಉಂಬಾರ ಓಣಿಯ ಗಂಗಪ್ಪ ಮಣಕಟ್ಟಿ ಅವರ ಮನೆಯಲ್ಲಿಜೋಕುಮಾರನ ಪೂಜೆ ನಡೆಯಿತು.