ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡಿ ರೈತರ ಆದಾಯ ಹೆಚ್ಚಿಸುವ ಕನಸಿಗೆ ಕೆಪೆಕ್ ಹೊಸ ರೆಕ್ಕೆ ನೀಡಿದೆ. ಪಿಎಂಎಫ್ ಎಂಇ ಯೋಜನೆಯಡಿ 10,000ಕ್ಕೂ ಅಧಿಕ ನವೋದ್ಯಮಗಳಿಗೆ ನೆರವು ನೀಡಿ, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿರುವುದು ರಾಜ್ಯದ ಆಹಾರ ಸಂಸ್ಕರಣಾ ಕ್ಷೇತ್ರದ ಅಪೂರ್ವ ಸಾಧನೆ.-----
ವಿಕ ಸುದ್ದಿಲೋಕ ಬೆಂಗಳೂರು
ಸಣ್ಣ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮೌಲ್ಯ ಕಲ್ಪಿಸಿ, ಅವುಗಳನ್ನು ಮೌಲ್ಯವರ್ಧಿತ ವಸ್ತುಗಳನ್ನಾಗಿ ರೂಪಿಸುವಲ್ಲಿಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್ ) ರೈತರಿಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ ಮೂರು ದಶಕಗಳಿಂದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಜಾಗತಿಕ ಆಹಾರ ಉದ್ಯಮದಲ್ಲಿಸಂಸ್ಥೆಯು ಮಹತ್ವದ ಪಾತ್ರ ವಹಿಸುತ್ತಿದೆ.
ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವುದು, ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಕೋಲ್ಡ್ ಸ್ಟೋರೇಜ್ (ಶೀತಲ ಗೃಹ) ಸೌಲಭ್ಯ ಕಲ್ಪಿಸುವುದು, ಶ್ರೇಣೀಕರಣ ಹಾಗೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ಪ್ಯಾಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಲ್ಲಿಕೆಪೆಕ್ ತೊಡಗಿಸಿಕೊಂಡಿದೆ. ಹೀಗಾಗಿ ಇದು ರೈತರು ಹಾಗೂ ಕಿರು ಉದ್ಯಮಿಗಳ ಆಪದ್ಬಾಂಧವ ಸಂಸ್ಥೆ ಎನಿಸಿದೆ.
ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ, ಅವುಗಳನ್ನು ಪ್ರತ್ಯೇಕ ಬ್ರ್ಯಾಂಡ್ ಗಳಾಗಿ ರೂಪಿಸಿ ಮಾರುಕಟ್ಟೆಗೆ ತರುವುದು ಕೆಪೆಕ್ ನ ಪ್ರಮುಖ ಧ್ಯೇಯವಾಗಿದೆ. ಈ ಗುರಿ ಸಾಧನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ಬೆಂಬಲ ನೀಡುತ್ತಿರುವುದು ವಿಶೇಷವಾಗಿದೆ. ಇಂತಹ ಮಹತ್ವದ ಉದ್ದೇಶಕ್ಕಾಗಿಯೇ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್ ಎಂಇ) ಜಾರಿಗೆ ತರಲಾಗಿದೆ. ಈ ಯೋಜನೆಯು ರೈತರು ಹಾಗೂ ರೈತೇತರರಿಗೆ ಆಹಾರ ಸಂಸ್ಕರಣಾ ಉದ್ಯಮಗಳನ್ನು ಆರಂಭಿಸಲು ನೆರವಾಗುತ್ತಿದೆ. ಕೆಪೆಕ್ ಈ ಯೋಜನೆಯ ಅನುಷ್ಠಾನದಲ್ಲಿನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಫ್ತು ಉತ್ತೇಜನ ಚಟುವಟಿಕೆಗಳು ಹಾಗೂ ಮಾರುಕಟ್ಟೆ ವಿಸ್ತರಣೆಗೆ ಸರಕಾರದಿಂದ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ದೊರೆಯುತ್ತಿದೆ.
ಕೆಪೆಕ್ ಕೃಷಿ ಕ್ಷೇತ್ರದಲ್ಲಿಪ್ರಮುಖ ಪಾತ್ರ ವಹಿಸುತ್ತಿರುವ ರಾಜ್ಯ ಸರಕಾರದ ಸಂಸ್ಥೆಯಾಗಿದೆ. 1996ರಲ್ಲಿಸ್ಥಾಪನೆಯಾದ ಈ ಸಂಸ್ಥೆಯ ಮುಖ್ಯ ಉದ್ದೇಶ ರಾಜ್ಯದ ರೈತರು ಬೆಳೆದ ಕೃಷಿ, ತೋಟಗಾರಿಕೆ ಮತ್ತು ಹಾಲಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು, ಸಂಸ್ಕರಣೆಗೆ ಉತ್ತೇಜನ ನೀಡುವುದು ಹಾಗೂ ವಿದೇಶಗಳಿಗೆ ರಫ್ತು ಮಾಡಲು ನೆರವಾಗುವುದಾಗಿದೆ. ಈ ಸಾರ್ಥಕ ಕಾರ್ಯದಲ್ಲಿಕೆಪೆಕ್ ಸದಾ ನಿರತವಾಗಿದ್ದು, ಪಿಎಂಎಫ್ ಎಂಇ ಯೋಜನೆಯಡಿ ತೋರಿದ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
*ಕಾರ್ಯ ಸಾಧನೆಗಾಗಿ ಕೆಪೆಕ್ ಗೆ ಕೇಂದ್ರ ಪ್ರಶಸ್ತಿಯ ಗರಿ
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯಡಿ ಅತ್ಯುತ್ತಮ ಸಾಧನೆಗಾಗಿ ಕರ್ನಾಟಕ ರಾಜ್ಯದ ಕೆಪೆಕ್ ಸಂಸ್ಥೆಯು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿ ಗರಿಗೆ ಪಾತ್ರವಾಗಿದೆ.
-----------
ಸಂಜೀವಿನಿಯಾದ ಪಿಎಂಎಫ್ ಎಂಇ
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆ ರಾಜ್ಯದ ಸಣ್ಣ ರೈತರು, ರೈತೋದ್ಯಮಿಗಳು ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿಆಸಕ್ತಿ ಹೊಂದಿರುವ ನವೋದ್ಯಮಿಗಳಿಗೆ ಹೊಸ ಭರವಸೆಯಾಗಿದೆ. ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆಯಾಚೆಗೂ ಬೇಡಿಕೆ ಸೃಷ್ಟಿಸಿ, ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಆದಾಯ ಹೆಚ್ಚಿಸುವ ಅವಕಾಶವನ್ನು ಈ ಯೋಜನೆ ಒದಗಿಸುತ್ತಿದೆ.
ಕಳೆದ ಐದು ವರ್ಷಗಳಲ್ಲಿಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್ ) ಪಿಎಂಎಫ್ ಎಂಇ ಯೋಜನೆಯ ಅನುಷ್ಠಾನದಲ್ಲಿಪ್ರಮುಖ ಪಾತ್ರ ವಹಿಸಿದೆ. ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ನವೋದ್ಯಮಗಳಿಗೆ ಯೋಜನೆಯ ನೆರವು ದೊರೆತಿದ್ದು, ಒಂದು ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಆರ್ಥಿಕ ನೆರವಿನ ಜತೆಗೆ ತಾಂತ್ರಿಕ ತರಬೇತಿ, ಉದ್ಯಮ ನಿರ್ವಹಣೆಯ ಮಾರ್ಗದರ್ಶನ, ಉತ್ಪನ್ನಗಳ ಗುಣಮಟ್ಟ ಸುಧಾರಣೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಕೆಪೆಕ್ ಕೈಗೊಂಡಿದೆ. ಇದರಿಂದ ಅನೇಕ ರೈತರು ಕೇವಲ ಬೆಳೆಗಾರರಾಗಿರದೆ, ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರುವ ರೈತೋದ್ಯಮಿಗಳಾಗಿ ರೂಪುಗೊಳ್ಳುತ್ತಿದ್ದಾರೆ.
ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಗರಿಷ್ಠ 15 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಈ ನೆರವನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳು, ಪ್ಯಾಕಿಂಗ್ ಕೇಂದ್ರಗಳು, ಶೀತಗೃಹಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಅವಕಾಶವಿದೆ. ಹೀಗಾಗಿ ಕೃಷಿ ಉತ್ಪನ್ನಗಳ ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವುದರ ಜತೆಗೆ, ರೈತರಿಗೆ ಬೆಲೆಯ ಏರಿಳಿತದಿಂದ ರಕ್ಷಣೆ ದೊರೆಯುತ್ತಿದೆ. ಉತ್ಪನ್ನಗಳನ್ನು ಸಂಗ್ರಹಿಸಿ, ಸೂಕ್ತ ಸಮಯದಲ್ಲಿಮಾರುಕಟ್ಟೆಗೆ ತಲುಪಿಸುವ ಸಾಮರ್ಥ್ಯವೂ ಹೆಚ್ಚುತ್ತಿದೆ.
ರೈತೋದ್ಯಮಿಗಳ ಬೆಳವಣಿಗೆಗೆ ಪೂರಕವಾಗಿ ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಸಾಮಾನ್ಯ ಇನ್ ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸುವಲ್ಲಿಕೆಪೆಕ್ ಗುರುತರ ಪಾತ್ರ ವಹಿಸಿದೆ. ರೈತರಿಗೆ ನೆರವಾಗಲೆಂದೇ ಸ್ಥಾಪಿಸಿರುವ ಈ ಕೇಂದ್ರಗಳಲ್ಲಿಹಣ್ಣು, ತರಕಾರಿ, ಸಿರಿಧಾನ್ಯ, ಸಾಂಬಾರು ಪದಾರ್ಥ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅಗತ್ಯ ಸೌಲಭ್ಯಗಳು ಲಭ್ಯವಿವೆ. ಉತ್ಪನ್ನದ ಸಂಸ್ಕರಣೆ, ಪ್ಯಾಕಿಂಗ್ , ಬ್ರ್ಯಾಂಡಿಂಗ್ , ಗುಣಮಟ್ಟ ಕಾಪಾಡುವುದು ಮತ್ತು ಮಾರುಕಟ್ಟೆಗೊಳಿಸುವಿಕೆಯ ಕುರಿತು ಮಾರ್ಗದರ್ಶನವೂ ದೊರೆಯುತ್ತದೆ. ಇದರಿಂದ ಹೊಸ ಉದ್ಯಮ ಆರಂಭಿಸುವವರಲ್ಲಿಇರುವ ತಾಂತ್ರಿಕ ಹಾಗೂ ನಿರ್ವಹಣಾ ಸವಾಲುಗಳು ಕಡಿಮೆಯಾಗುತ್ತವೆ.
ಕೃಷಿ ಉತ್ಪನ್ನಗಳ ಸಂಸ್ಕರಣೆಯಿಂದ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಸೃಷ್ಟಿಯಾಗುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಹಣ್ಣು, ತರಕಾರಿ, ಸಿರಿಧಾನ್ಯ ಮತ್ತು ಸಾಂಬಾರು ಪದಾರ್ಥಗಳಿಗೆ ಹೊಸ ಮಾರುಕಟ್ಟೆ ಸಿಗುತ್ತದೆ. ರೈತರು ತಮ್ಮ ಉತ್ಪನ್ನಗಳ ಬೆಲೆ ನಿರ್ಧಾರದಲ್ಲಿಹೆಚ್ಚಿನ ಪಾತ್ರ ವಹಿಸುವಂತಾಗುವುದರಿಂದ ಮಧ್ಯವರ್ತಿಗಳ ಮೇಲಿನ ಅವಲಂಬನೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ಉತ್ಪನ್ನದ ಗುಣಮಟ್ಟ, ಪ್ಯಾಕಿಂಗ್ ಮತ್ತು ಬ್ರ್ಯಾಂಡ್ ಗುರುತಿನ ಮೇಲೆ ಗಮನಹರಿಸುವುದರಿಂದ ಮಾರುಕಟ್ಟೆಯಲ್ಲಿಸ್ಪರ್ಧಿಸುವ ಸಾಮರ್ಥ್ಯವೂ ವೃದ್ಧಿಸುತ್ತದೆ.
ಪಿಎಂಎಫ್ ಎಂಇ ಯೋಜನೆಯ ಪರಿಣಾಮವಾಗಿ ಕೃಷಿ ಹಾಗೂ ಆಹಾರ ಸಂಸ್ಕರಣೆಯ ನಡುವಿನ ಸಂಪರ್ಕ ಮತ್ತಷ್ಟು ಬಲವಾಗುತ್ತಿದೆ. ರೈತರು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವಲ್ಲಿಈ ಯೋಜನೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಕೆಪೆಕ್ ನ ನಿರಂತರ ಬೆಂಬಲದಿಂದ ಇನ್ನಷ್ಟು ರೈತರು ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಪ್ರವೇಶಿಸಿ, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ನಿರೀಕ್ಷೆ ಮೂಡಿದೆ.
ಯೋಜನೆಯ ಮತ್ತೊಂದು ಮಹತ್ವದ ಅಂಶವೆಂದರೆ, ಸಣ್ಣ ಪ್ರಮಾಣದಲ್ಲಿಉದ್ಯಮ ಆರಂಭಿಸಲು ಬಯಸುವವರಿಗೆ ಹಂತಹಂತವಾಗಿ ಬೆಳೆಯುವ ಅವಕಾಶ ಸಿಗುತ್ತಿರುವುದು. ತರಬೇತಿ, ಹಣಕಾಸು ನೆರವು ಮತ್ತು ಮಾರುಕಟ್ಟೆ ಮಾರ್ಗದರ್ಶನ ಒಂದೇ ವ್ಯವಸ್ಥೆಯಲ್ಲಿದೊರೆಯುವುದರಿಂದ ಉದ್ಯಮಿಗಳ ವಿಶ್ವಾಸ ಹೆಚ್ಚುತ್ತಿದೆ. ಉತ್ಪಾದನೆಯಿಂದ ಮಾರಾಟದವರೆಗೆ ಅಗತ್ಯ ಸಹಕಾರ ದೊರೆಯುತ್ತಿರುವುದು ಈ ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಈ ಪ್ರಯತ್ನ ಭವಿಷ್ಯದಲ್ಲಿಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
-------
*ರಫ್ತಿಗೆ ಉತ್ತೇಜನ
ಅಂದ ಹಾಗೆ ಕೆಪೆಕ್ ಸಂಸ್ಥೆಯು ರಫ್ತು ಮಾಡುವವರಿಗೆ ಉತ್ತೇಜನ ನೀಡುವ ಸರಕಾರಿ ಸಂಸ್ಥೆಯಾಗಿದೆ. ರಫ್ತು ಕುರಿತು ಯಾವೆಲ್ಲಾಕ್ರಮಗಳನ್ನು ಅನುಸರಿಸಬೇಕು? ಸಂಸ್ಕರಣೆ ಮಾಡುವುದು ಹೇಗೆ? ರಫ್ತು ಕುರಿತಾದ ನೀತಿ ನಿಯಮಗಳೇನು ಎಂಬುದನ್ನು ತರಬೇತಿ ಮೂಲಕ ತಿಳಿಸಲಾಗುವುದು. ಕೊಯ್ಲಿನ ನಂತರ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡುವುದು ನಂತರ ರಫ್ತು ಮಾಡುವುದು, ಕೃಷಿ ನಂತರದ ಚಟುವಟಿಕೆಗಳನ್ನು ಕೈಗೊಳ್ಳಲು ಕೆಪೆಕ್ ಆರಂಭಿಸಲಾಗಿದೆ. ಇದು ಕರ್ನಾಟಕ ಸರಕಾರದ ನಿಗಮ ಮಂಡಳಿಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು 8 ಶೀತಲಗೃಹಗಳನ್ನು ಸ್ಥಾಪಿಸಲಾಗಿದೆ. ಜತೆಗೆ, ಉಗ್ರಾಣಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಫ್ತು ಮತ್ತು ಸಂಸ್ಕರಣೆ ಕುರಿತ ಚಟುವಟಿಕೆಗಳ ನೋಡಲ್ ಏಜೆನ್ಸಿಯಾಗಿ ಕೆಪೆಕ್ ಕಾರ್ಯ ನಿರ್ವಹಿಸುತ್ತಿದೆ. ಶೀತಲಗೃಹಗಳು ಮತ್ತು ಉಗ್ರಾಣಗಳನ್ನು ಅವಶ್ಯವಿರುವವರಿಗೆ ಬಾಡಿಗೆ ಆಧಾರದಲ್ಲಿನೀಡಲಾಗುತ್ತದೆ.
-----
ಸಹಾಯಧನದಲ್ಲಿಕರ್ನಾಟಕವೇ ಮುಂಚೂಣಿ
ಸಂಸ್ಕರಿತ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ರೈತರು ಹಾಗೂ ನವೋದ್ಯಮಿಗಳಿಗೆ ರಾಜ್ಯ ಸರಕಾರ ಹೊಸ ಬೆಂಬಲ ನೀಡುತ್ತಿದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯಡಿ ಕರ್ನಾಟಕವು ಫಲಾನುಭವಿಗಳಿಗೆ ನೀಡುತ್ತಿರುವ ಸಹಾಯಧನದ ವಿಚಾರದಲ್ಲಿಮುಂಚೂಣಿಯಲ್ಲಿದೆ. ಇದು ಕೇಂದ್ರ ಸರಕಾರದ ಯೋಜನೆಯಾದರೂ, ರಾಜ್ಯ ಸರಕಾರ ಹೆಚ್ಚುವರಿ ನೆರವು ನೀಡುವ ಮೂಲಕ ರೈತರು ಮತ್ತು ಸಣ್ಣ ಆಹಾರ ಸಂಸ್ಕರಣಾ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದೆ.
1996ರಲ್ಲಿಸ್ಥಾಪನೆಯಾದ ಕೆಪೆಕ್ , ರಾಜ್ಯದ ಕೃಷಿ, ತೋಟಗಾರಿಕೆ, ಪುಷ್ಪ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತಿಗೆ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಕಳೆದ ಐದು ವರ್ಷಗಳಿಂದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ರಾಜ್ಯದಲ್ಲಿಪಿಎಂಎಫ್ ಎಂಇ ಯೋಜನೆಯ ಅನುಷ್ಠಾನಕ್ಕೆ ಕೆಪೆಕ್ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು, ರೈತರ ಆದಾಯ ಹೆಚ್ಚಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದಕ್ಕೆ ಪ್ರೋತ್ಸಾಹ ನೀಡುವುದು ಪಿಎಂಎಫ್ ಎಂಇ ಯೋಜನೆಯ ಪ್ರಮುಖ ಉದ್ದೇಶ. ವಿಶೇಷವಾಗಿ ಹಣ್ಣು, ತರಕಾರಿ, ಸಿರಿಧಾನ್ಯ, ಸಾಂಬಾರು ಪದಾರ್ಥ, ಹಾಲು ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳಾಗಿ ರೂಪಿಸಲು ಈ ಯೋಜನೆ ನೆರವಾಗುತ್ತಿದೆ.
ಹೊಸದಾಗಿ ಆಹಾರ ಸಂಸ್ಕರಣಾ ಘಟಕ ಆರಂಭಿಸಲು ಬಯಸುವ ನವೋದ್ಯಮಿಗಳ ಪಾಲಿಗೆ ಪಿಎಂಎಫ್ ಎಂಇ ಯೋಜನೆ ಸಂಜೀವಿನಿಯಾಗಿದೆ. ಈಗಾಗಲೇ ಆಹಾರ ಸಂಸ್ಕರಣಾ ಉದ್ಯಮದಲ್ಲಿತೊಡಗಿಸಿಕೊಂಡಿರುವ ಘಟಕಗಳನ್ನು ಮೇಲ್ದರ್ಜೆಗೇರಿಸಲು, ಆಧುನೀಕರಿಸಲು ಅಥವಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹ ಈ ಯೋಜನೆಯಡಿ ನೆರವು ಪಡೆಯಬಹುದು. ಯಂತ್ರೋಪಕರಣಗಳ ಖರೀದಿ, ಸಂಸ್ಕರಣಾ ಘಟಕಗಳ ಸ್ಥಾಪನೆ, ಪ್ಯಾಕಿಂಗ್ , ಬ್ರ್ಯಾಂಡಿಂಗ್ ಹಾಗೂ ಉತ್ಪನ್ನಗಳ ಮಾರುಕಟ್ಟೆಗೊಳಿಸುವಿಕೆಗೆ ಯೋಜನೆ ನೆರವಾಗುತ್ತದೆ.
ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್ ಪಿಒ), ರೈತೋದ್ಯಮಿಗಳು ಮತ್ತು ಸ್ವಸಹಾಯ ಸಂಘಗಳಿಗೆ ಈ ಯೋಜನೆ ವಿಶೇಷವಾಗಿ ಪ್ರಯೋಜನಕಾರಿ. ಅರ್ಹ ಫಲಾನುಭವಿಗಳಿಗೆ ಯೋಜನಾ ವೆಚ್ಚದ ಶೇ. 50ರಷ್ಟು ಸಹಾಯಧನವನ್ನು ನೀಡಲಾಗುತ್ತಿದ್ದು, ಗರಿಷ್ಠ 15 ಲಕ್ಷ ರೂ.ವರೆಗೆ ಸಬ್ಸಿಡಿ ಪಡೆಯಲು ಅವಕಾಶವಿದೆ. ಆರ್ಥಿಕ ನೆರವಿನ ಜತೆಗೆ, ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ, ಪ್ಯಾಕಿಂಗ್ , ಲೇಬಲಿಂಗ್ ಮತ್ತು ಮಾರುಕಟ್ಟೆ ಸಂಪರ್ಕದ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತಿದೆ.
ಪಿಎಂಎಫ್ ಎಂಇ ಯೋಜನೆಯಡಿ ದೊರೆಯುವ ನೆರವಿನಲ್ಲಿಕೇಂದ್ರ ಮತ್ತು ರಾಜ್ಯ ಸರಕಾರಗಳು ಪಾಲುದಾರರಾಗಿವೆ. ಕೇಂದ್ರದ ಮಾರ್ಗಸೂಚಿಯಂತೆ ಸಹಾಯಧನದಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ನಿಗದಿಯಾಗಿದ್ದರೂ, ಕರ್ನಾಟಕ ಸರಕಾರ ರೈತರು ಮತ್ತು ನವೋದ್ಯಮಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ನೆರವು ಒದಗಿಸುತ್ತಿದೆ. ರಾಜ್ಯದ ಈ ಕ್ರಮದಿಂದ ಫಲಾನುಭವಿಗಳಿಗೆ ದೊರೆಯುವ ಒಟ್ಟು ಆರ್ಥಿಕ ಸಹಾಯ ಹೆಚ್ಚಾಗುತ್ತಿದ್ದು, ಸಣ್ಣ ಪ್ರಮಾಣದ ಉದ್ಯಮ ಆರಂಭಿಸುವವರ ಮೇಲಿನ ಹಣಕಾಸಿನ ಒತ್ತಡ ಕಡಿಮೆಯಾಗುತ್ತಿದೆ.
ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡುವುದರಿಂದ ಕೊಯ್ಲಿನ ನಂತರದ ನಷ್ಟವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಬೆಳೆಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದರ ಜತೆಗೆ, ಗ್ರಾಮೀಣ ಪ್ರದೇಶಗಳಲ್ಲೇ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ. ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ನೀಡಿ ಮಾರಾಟ ಮಾಡುವುದರಿಂದ ರೈತರು ಮತ್ತು ಸಣ್ಣ ಉದ್ಯಮಿಗಳು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ನೇರವಾಗಿ ಮಾರುಕಟ್ಟೆ ಪ್ರವೇಶಿಸಬಹುದು.
ರಾಜ್ಯ ಸರಕಾರ ನೀಡುತ್ತಿರುವ ಹೆಚ್ಚುವರಿ ಸಹಾಯಧನವು ರೈತಪರ ಕಾಳಜಿಗೆ ಸಾಕ್ಷಿಯಾಗಿದೆ. ಪಿಎಂಎಫ್ ಎಂಇ ಯೋಜನೆಯ ಮೂಲಕ ಕೃಷಿ ಮತ್ತು ಕೈಗಾರಿಕೆ ನಡುವಿನ ಸಂಪರ್ಕ ಬಲಪಡಿಸುವ ಪ್ರಯತ್ನ ನಡೆಯುತ್ತಿದ್ದು, ರೈತರನ್ನು ಆಹಾರ ಸಂಸ್ಕರಣಾ ಉದ್ಯಮಿಗಳನ್ನಾಗಿ ರೂಪಿಸುವಲ್ಲಿಕೆಪೆಕ್ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿಇನ್ನಷ್ಟು ರೈತರು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ನವೋದ್ಯಮಿಗಳು ಈ ಯೋಜನೆಯ ಪ್ರಯೋಜನ ಪಡೆದು, ಸ್ಥಳೀಯ ಕೃಷಿ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ನಿರೀಕ್ಷೆಯಿದೆ.
======
*ಆರೋಗ್ಯಕ್ಕೂ ಒತ್ತು
ಕೆಪೆಕ್ , ಆಹಾರೋದ್ಯಮ ಸ್ಥಾಪನೆಯಲ್ಲಿನವೋದ್ಯಮಕ್ಕೆ ಮಾತ್ರವಲ್ಲದೇ ಜನರ ಸ್ವಾಸ್ಥ್ಯ ರಕ್ಷಣೆಯೆಡೆಗೆ ಹೆಚ್ಚು ಒತ್ತು ನೀಡಿದೆ. ಪಿಎಂಎಫ್ ಎಂಇ ಯೋಜನೆಯ ಮೂಲಕ ಸಿರಿಧಾನ್ಯಗಳ ಸಂಸ್ಕರಣೆ, ಗಾಣದ ಎಣ್ಣೆ, ಸಾವಯವ ಬೆಲ್ಲದಂತಹ ಪರಿಶುದ್ಧ, ಪೌಷ್ಟಿಕಾಂಶಯುಕ್ತ ಆಹಾರ ಸಂಸ್ಕರಿಸುವ ಘಟಕಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿರುವುದು ಇದಕ್ಕೆ ಸಾಕ್ಷಿ. ಸಿರಿಧಾನ್ಯ ಉತ್ಪನ್ನಗಳು, ಗಾಣದಿಂದ ಉತ್ಪಾದಿಸುವ ಅಡುಗೆ ಎಣ್ಣೆ, ಸಾವಯವ ಬೆಲ್ಲಜನರ ಆರೋಗ್ಯ ರಕ್ಷಣೆಯಲ್ಲಿಮಹತ್ತರ ಪಾತ್ರ ವಹಿಸುತ್ತವೆ.
ಪ್ರಸ್ತುತ ಪಿಎಂಎಫ್ ಎಂಇ ಯೋಜನೆಯಡಿ ರಾಜ್ಯದಾದ್ಯಂತ 2000ಕ್ಕಿಂತ ಹೆಚ್ಚು ಸಿರಿಧಾನ್ಯ ಸಂಸ್ಕರಣಾ ಘಟಕಗಳು ಆರಂಭವಾಗಿವೆ. ಸಾವಿರಾರು ಎಣ್ಣೆ ತೆಗೆಯುವ ಗಾಣಗಳು ಸ್ಥಾಪನೆಯಾಗಿವೆ. ರಾಸಾಯನಿಕ ಮುಕ್ತ ಬೆಲ್ಲಉತ್ಪಾದಿಸುವ 300 ಘಟಕಗಳು ಪ್ರಾರಂಭವಾಗಿವೆ. ಭವಿಷ್ಯದಲ್ಲಿಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂಸಾವಯವ ಬೆಲ್ಲದ ಉತ್ಪಾದನೆ ಘಟಕ, ಗಾಣದ ಎಣ್ಣೆಗಳ ಘಟಕಗಳಿರಬೇಕೆಂಬುದು ಕೆಪೆಕ್ ಗುರಿಯಾಗಿದೆ. ಈ ನಿಟ್ಟಿನಲ್ಲಿಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.
--------
*ಸಂಪನ್ಮೂಲ ವ್ಯಕ್ತಿಗಳ ನೇಮಕ
ಕಳೆದ ಐದು ವರ್ಷಗಳಲ್ಲಿಕೆಪೆಕ್ ಮೂಲಕ ಸುಮಾರು 10 ಸಾವಿರಕ್ಕೂ ಹೆಚ್ಚು ನವ ಆಹಾರ ಉದ್ಯಮಿಗಳು ಪಿಎಂಎಫ್ ಎಂಇ ಯೋಜನೆಯಡಿ ಸಾಲ, ಸಬ್ಸಿಡಿ, ಮಾರ್ಗದರ್ಶನ ಪಡೆದುಕೊಂಡು 30 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗವನ್ನು ಸೃಷ್ಟಿಸಿದ್ದಾರೆ. ಈ ಉದ್ಯಮಿಗಳಲ್ಲಿಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಿದೆ ಎಂಬುದು ವಿಶೇಷ. ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿಉದ್ಯಮ ಆರಂಭಿಸುವವರಿಗೆ ನೆರವಾಗುವುದಕ್ಕಾಗಿಯೇ ಕೆಪೆಕ್ ರಾಜ್ಯದ ಎಲ್ಲಾಜಿಲ್ಲೆಗಳಲ್ಲಿಜಿಲ್ಲಾಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿದೆ. ಅವರು ಉದ್ಯಮ ಆರಂಭಿಸುವವರಿಗೆ ಎಲ್ಲಾಹಂತಗಳಲ್ಲಿನೆರವಾಗುತ್ತಾರೆ.
------
*8 ಕೋಲ್ಡ್ ಸ್ಟೋರೇಜ್ ಗಳು
ಕೊಯ್ಲಿನ ನಂತರ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡುವುದು ನಂತರ ರಫ್ತು ಮಾಡುವುದು, ಕೃಷಿ ನಂತರದ ಚಟುವಟಿಕೆಗಳನ್ನು ಕೈಗೊಳ್ಳಲು ಕೆಪೆಕ್ ಆರಂಭಿಸಲಾಗಿದೆ. ಇದು ಕರ್ನಾಟಕ ಸರಕಾರದ ನಿಗಮ/ಮಂಡಳಿಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು 8 ಶೀತಲಗೃಹಗಳನ್ನು ಸ್ಥಾಪಿಸಲಾಗಿದೆ. ಜತೆಗೆ, ಉಗ್ರಾಣಗಳ ವ್ಯವಸ್ಥೆಯನ್ನು ಹೊಂದಲಾಗಿದೆ. ರಫ್ತು ಮತ್ತು ಸಂಸ್ಕರಣೆ ಕುರಿತ ಚಟುವಟಿಕೆಗಳ ನೋಡಲ್ ಏಜೆನ್ಸಿಯಾಗಿ ಕೆಪೆಕ್ ಕಾರ್ಯ ನಿರ್ವಹಿಸುತ್ತಿದೆ.
====
10 ಸಾವಿರ ನವೋದ್ಯಮಿಗಳನ್ನು ಸೃಷ್ಟಿಸಿದ ಕೆಪೆಕ್
ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್ ) ಕಳೆದ ಐದು ವರ್ಷಗಳಲ್ಲಿರಾಜ್ಯದಲ್ಲಿಕ್ರಾಂತಿಕಾರಿ ಸಾಧನೆ ಮಾಡಿದ್ದು, 10 ಸಾವಿರಕ್ಕೂ ಅಧಿಕ ನವೋದ್ಯಮಗಳಿಗೆ ನೆರವಿನ ಹಸ್ತ ಚಾಚಿದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯಡಿ ಸಾಲ, ಸಬ್ಸಿಡಿ ಮತ್ತು ಮಾರ್ಗದರ್ಶನ ಪಡೆದ ಪ್ರತಿಯೊಂದು ಉದ್ಯಮವೂ ಕನಿಷ್ಠ 10 ಮಂದಿಗೆ ಉದ್ಯೋಗ ಕಲ್ಪಿಸಿದೆ. ಇದರ ಪರಿಣಾಮವಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ದೊರೆತಿದೆ. ದೊಡ್ಡ ಉದ್ದಿಮೆಗಳು ನೂರಾರು, ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದರೂ ಸೃಷ್ಟಿಸಲಾಗದಷ್ಟು ಉದ್ಯೋಗಾವಕಾಶಗಳನ್ನು ಕಡಿಮೆ ಬಂಡವಾಳದ ಸಣ್ಣ ಆಹಾರ ಸಂಸ್ಕರಣಾ ಘಟಕಗಳ ಮೂಲಕ ಕಲ್ಪಿಸಿರುವುದು ಕೆಪೆಕ್ ನ ಅಚ್ಚಳಿಯದ ಹಾಗೂ ಅನುಕರಣೀಯ ಸಾಧನೆಯಾಗಿದೆ.
ರಾಜ್ಯದ 14 ಜಿಲ್ಲೆಗಳಲ್ಲಿಒಟ್ಟು 32.16 ಕೋಟಿ ರೂ. ವೆಚ್ಚದಲ್ಲಿಸಾಮಾನ್ಯ ಇನ್ ಕ್ಯುಬೇಷನ್ ಕೇಂದ್ರಗಳನ್ನು (ಸಿಐಸಿ) ಸ್ಥಾಪಿಸಲಾಗಿದೆ. ಮಂಡ್ಯ, ಮೈಸೂರು, ಹಾಸನ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಹಿರಿಯೂರು, ಧಾರವಾಡ ಮತ್ತು ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ದೇಶಾದ್ಯಂತ ಸ್ಥಾಪನೆಯಾಗಿರುವ 76 ಸಾಮಾನ್ಯ ಇನ್ ಕ್ಯುಬೇಷನ್ ಕೇಂದ್ರಗಳ ಪೈಕಿ 14 ಕೇಂದ್ರಗಳು ಕರ್ನಾಟಕದಲ್ಲೇ ಇರುವುದು ರಾಜ್ಯದ ವಿಶೇಷ ಸಾಧನೆ. ಪಿಎಂಎಫ್ ಎಂಇ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ಕೃಷಿಕರು ಮತ್ತು ಸಣ್ಣ ಆಹಾರ ಸಂಸ್ಕರಣಾ ಉದ್ಯಮಿಗಳಿಗೆ ನಿರೀಕ್ಷಿತ ನೆರವು ಒದಗಿಸುತ್ತಿರುವ ಹೆಗ್ಗಳಿಕೆ ಕರ್ನಾಟಕದ್ದಾಗಿದೆ.
ಯಾರೆಲ್ಲಾಆರ್ಥಿಕ ನೆರವು ಪಡೆಯಬಹುದು
* ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ವೈಯಕ್ತಿಕ ಉದ್ದಿಮೆದಾರರು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳು ಮತ್ತು ಸರಕಾರೇತರ ಸಂಸ್ಥೆಗಳು ಆರ್ಥಿಕ ನೆರವು ಪಡೆಯಬಹುದು.
* ಯೋಜನೆಯಡಿ ಸ್ಥಾಪಿಸಬಹುದಾದ ಘಟಕಗಳು: ಯಾವುದೇ ಆಹಾರ ಸಂಸ್ಕರಣಾ / ಮೌಲ್ಯವರ್ಧನಾ ಘಟಕಗಳು, ಪಶು ಮತ್ತು ಕುಕ್ಕುಟ ಆಹಾರ ಘಟಕಗಳು. ಉದಾಹರಣೆಗೆ ಸಿರಿಧಾನ್ಯ ಸಂಸ್ಕರಣೆ, ಬೆಲ್ಲಉತ್ಪಾದನೆ, ಎಣ್ಣೆ ಗಾಣಗಳು, ಬೇಕರಿ ಉತ್ಪನ್ನಗಳು, ಮಸಾಲೆಪುಡಿ ಘಟಕಗಳು, ಶುಂಠಿ ಸಂಸ್ಕರಣೆ, ತೆಂಗಿನ ಉತ್ಪನ್ನಗಳು, ವಿವಿಧ ಹಣ್ಣು ತರಕಾರಿ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು ಮತ್ತು ಸಾಗರೋತ್ಪನ್ನಗಳು ಇತ್ಯಾದಿ.
* ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ರೇಷನ್ ಕಾರ್ಡ್ /ವಿದ್ಯುತ್ ಬಿಲ್ , ಉದ್ದಿಮೆದಾರರ ಫೋಟೋಗಳು, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಕಳೆದ 6 ತಿಂಗಳ ಮಾಹಿತಿ), ಯಂತ್ರೋಪಕರಣಗಳ ವಿವರಗಳು ಮತ್ತು ಕೊಟೇಷನ್ , ಬಾಡಿಗೆ/ಲೀಸ್ ಕರಾರು ಪತ್ರ, ಸ್ಥಾಪಿಸಬೇಕಿರುವ ಉದ್ದಿಮೆಯ ವಿವರಗಳು.
* ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ: 18 ವರ್ಷ ಮೇಲ್ಪಟ್ಟವರು ಮತ್ತು ಯಾವುದೇ ಕನಿಷ್ಠ ವಿದ್ಯಾರ್ಹತೆ.
*ಪ್ರಾಥಮಿಕ ಬಂಡವಾಳ : ಎನ್ ಆರ್ ಎಲ್ ಎಂ/ಎನ್ ಯುಎಲ್ ಎಂ ಅಡಿಯ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಕಾರ್ಯನಿರ್ವಹಣಾ ಬಂಡವಾಳ ಹಾಗೂ ಚಿಕ್ಕ ಉಪಕರಣಗಳನ್ನು ಖರೀದಿಸಲು 40 ಸಾವಿರ ರೂ.ಗಳವರೆಗೆ, ಗರಿಷ್ಠ 4 ಲP್ಷÜ ರೂ. ಪ್ರತಿ ಸ್ವಸಹಾಯ ಸಂಘಕ್ಕೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಕಲ್ಪಿಸಲಾಗುವುದು.
*ಸಾಮಾನ್ಯ ಮೂಲಭೂತ ಸೌಕರ್ಯ ಸ್ಥಾಪನೆ: ರೈತ ಉತ್ಪಾದಕ ಸಂಸ್ಥೆಗಳು/ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು ಮತ್ತು ಅದರ ಒಕ್ಕೂಟಗಳು, ಸರಕಾರಿ ಸಂಸ್ಥೆಗಳಿಗೆ ಅರ್ಹ ಯೋಜನಾ ವೆಚ್ಚದ ಶೇ.35ರಷ್ಟು ಸಾಲ ಸಂಪರ್ಕಿತ ಸಹಾಯಧನ ಅಂದರೆ ಗರಿಷ್ಠ 3 ಕೋಟಿ ರೂ. ಸಹಾಯಧನ ನೀಡಲಾಗುವುದು.
* ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಗೆ ಸಹಾಯ: ರೈತ ಉತ್ಪಾದಕರ ಸಂಸ್ಥೆಗಳು/ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು, ಸರಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆ (ಎಸ್ ಪಿವಿಎಸ್ ) ಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್ , ಜಾಹೀರಾತು, ಸಾಮಾನ್ಯ ಬ್ರ್ಯಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಇತ್ಯಾದಿಗಳಿಗಾಗಿ ಎಂಒಎಫ್ ಪಿಐ ಅನುಮೋದಿಸಿದ ಯೋಜನಾ ವೆಚ್ಚದ ಶೇ.50 ರಷ್ಟು ಸಹಾಯಧನ ನೀಡಲಾಗುವುದು.
------
*ಅರ್ಜಿ ಸಲ್ಲಿಸಲು ಸಂಪರ್ಕಿಸುವ ವಿಳಾಸ
ಅರ್ಜಿ ಸಲ್ಲಿಕೆಗೆ ರಾಜ್ಯದ ಆಸಕ್ತರು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾಸಂಪನ್ಮೂಲ ವ್ಯಕ್ತಿಗಳು, ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕಗಳನ್ನು ಸಂಪರ್ಕಿಸಬಹುದು.
-------
*ಇನ್ ಕ್ಯೂಬೇಷನ್ ಕೇಂದ್ರಗಳು
-ತೆಂಗು ಮತ್ತು ಶುಂಠಿ ಘಟಕಗಳು: ಕೃಷಿ ಕಾಲೇಜು, ಕರೆಕೆರೆ, ಹಾಸನ
-ಬೆಲ್ಲದ ಉತ್ಪಾದನಾ ಘಟಕಗಳು: ಬೆಲ್ಲದ ಪಾರ್ಕ್, ವಿ.ಸಿ. ಫಾರಂ, ಮಂಡ್ಯ
-ತೆಂಗು ಆಧಾರಿತ ಸಂಸ್ಕರಣಾ ಘಟಕಗಳು: ಕೆವಿಕೆ, ಚಂದುರಾಯನಹಳ್ಳಿ, ಮಾಗಡಿ
-ಅರಿಶಿಣ ಸಂಸ್ಕರಣಾ ಘಟಕಗಳು: ಕೆವಿಕೆ, ಹರದನಹಳ್ಳಿ, ಚಾಮರಾಜನಗರ
-ಹಣ್ಣು- ತರಕಾರಿಗಳ ಸಂಸ್ಕರಣಾ ಘಟಕಗಳು: ಕೆವಿಕೆ, ಚಿಂತಾಮಣಿ
-ಬಾಳೆ ಮತ್ತು ಕಾಫಿ ಸಂಸ್ಕರಣಾ ಘಟಕಗಳು: ಸಿಎಫ್ ಟಿಆರ್ ಐ, ಮೈಸೂರು
-ಹಣ್ಣು, ತರಕಾರಿಗಳು, ಶುಂಠಿ ಮತ್ತು ವಿನೆಗರ್ ಘಟಕಗಳು: ಯುಎಎಚ್ ಎಸ್ , ಇರುವಕ್ಕಿ, ಶಿವಮೊಗ್ಗ
-ಶೇಂಗಾ ಸಂಸ್ಕರಣಾ ಘಟಕಗಳು: ತೋಟಗಾರಿಕಾ ಕಾಲೇಜು, ಹಿರಿಯೂರು
-ಸಾಂಬಾರ ಪದಾರ್ಥಗಳ ಸಂಸ್ಕರಣಾ ಘಟಕಗಳು: ತೋಟಗಾರಿಕಾ ಕಾಲೇಜು, ಮೂಡಿಗೆರೆ
-ಮಾವು - ಮಸಾಲೆ ಸಂಸ್ಕರಣಾ ಘಟಕಗಳು: ಸಿಎಚ್ ಇಎಫ್ ಟಿ, ದೇವಿ ಹೊಸೂರು, ಹಾವೇರಿ
-ಹಣ್ಣು, ತರಕಾರಿಗಳು ಮತ್ತು ಸೋಯಾಬೀನ್ ಘಟಕಗಳು: ಕೃಷಿ ವಿಶ್ವವಿದ್ಯಾಲಯ, ಧಾರವಾಡ
-ಮೆಣಸಿನಕಾಯಿ, ಶೇಂಗಾ ಮತ್ತು ಶುಂಠಿ ಘಟಕಗಳು: ಕೃಷಿ ವಿವಿ, ರಾಯಚೂರು
-ಹಣ್ಣು ತರಕಾರಿಗಳು ಮತ್ತು ಬೇಕರಿ ಘಟಕಗಳು: ಕೆವಿಕೆ, ಕೋಲಾರ
-ಹಣ್ಣು, ತರಕಾರಿಗಳು ಮತ್ತು ಸಿರಿಧಾನ್ಯ ಘಟಕಗಳು: ಕೆವಿಕೆ, ಇಂಡಿ, ವಿಜಯಪುರ
-------
ಪಾಯಿಂಟ್ಸ್
* ಉದ್ಯಮ ಸ್ಥಾಪನೆಯ ಜತೆಗೆ ಜನರ ಸ್ವಾಸ್ಥ್ಯ ರಕ್ಷಣೆಗೆ ಕೆಪೆಕ್ ವಿಶೇಷ ಒತ್ತು ನೀಡಿದೆ.
* 2,000ಕ್ಕೂ ಹೆಚ್ಚು ಸಿರಿಧಾನ್ಯ ಸಂಸ್ಕರಣಾ ಘಟಕಗಳು
* 1,000ಕ್ಕೂ ಹೆಚ್ಚು ಅಡುಗೆ ಎಣ್ಣೆ ಗಾಣಗಳು
* 300ಕ್ಕೂ ಅಧಿಕ ರಾಸಾಯನಿಕ ಮುಕ್ತ ಸಾವಯವ ಬೆಲ್ಲದ ಘಟಕಗಳು ಯಶಸ್ವಿಯಾಗಿ ಆರಂಭವಾಗಿವೆ.
* ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂಗಾಣದ ಎಣ್ಣೆ ಹಾಗೂ ಸಾವಯವ ಬೆಲ್ಲದ ಘಟಕಗಳನ್ನು ಸ್ಥಾಪಿಸುವುದು ಕೆಪೆಕ್ ನ ಮುಂಬರುವ ಗುರಿಯಾಗಿದೆ.
ಧಿಧಿಧಿಧಿಧಿಧಿಧಿಧಿಧಿಧಿ----------
ಉತ್ಪನ್ನಗಳ ವರ್ಗ ಫಲಾನುಭವಿಗಳ ಸಂಖ್ಯೆ
ಸಿರಿಧಾನ್ಯ ಆಧಾರಿತ ಉತ್ಪನ್ನ 3200
ಎಣ್ಣೆಕಾಳು ಆಧಾರಿತ ಉತ್ಪನ್ನ 1709
ಬೇಕರಿ ಉತ್ಪನ್ನ 1301
ಮಸಾಲೆ ಉತ್ಪನ್ನ 1015
ಬೆಲ್ಲಆಧಾರಿತ ಉತ್ಪನ್ನ 539
ಅಕ್ಕಿ ಮತ್ತು ಧಾನ್ಯ ಉತ್ಪನ್ನಗಳು 496
ಗೋಧಿ ಆಧಾರಿತ ಉತ್ಪನ್ನಗಳು 444
ಪ್ಲಾಂಟೇಶನ್ /ತೋಟಗಾರಿಕೆ ಉತ್ಪನ್ನಗಳು 260
ಹಣ್ಣು ಆಧಾರಿತ ಉತ್ಪನ್ನಗಳು 219
ಹಾಲು ಆಧಾರಿತ ಉತ್ಪನ್ನಗಳು 214
ಬೇಳೆಕಾಳು ಆಧಾರಿತ ಉತ್ಪನ್ನಗಳು 208
ಪಶು ಆಹಾರ ಉತ್ಪನ್ನಗಳು 191
ಕಾಫಿ / ಟೀ ಉತ್ಪನ್ನಗಳು 186
ತರಕಾರಿ ಆಧಾರಿತ ಉತ್ಪನ್ನಗಳು 175
ಆರ್ ಟಿಸಿ ಮತ್ತು ಆರ್ ಟಿಇ (ಬಳಕೆಗೆ ಸಿದ್ಧ ಉತ್ಪನ್ನಗಳು)114
ಮಾಂಸ ಆಧಾರಿತ ಉತ್ಪನ್ನಗಳು 107
ಇತರ ತೋಟಗಾರಿಕೆ ಉತ್ಪನ್ನಗಳು 66
ಅಣಬೆ ಆಧಾರಿತ ಉತ್ಪನ್ನಗಳು 50
ಮೀನುಗಾರಿಕೆ ಉತ್ಪನ್ನಗಳು 44
ಸಿಹಿ ಮತ್ತು ಮಿಠಾಯಿ ಉತ್ಪನ್ನಗಳು 36
ಇತರ ಎಲ್ಲಾವರ್ಗಗಳು 244
ಒಟ್ಟು 10,818
------
ಬಾಕ್ಸ್
*ಕೆಪೆಕ್ ನ ಯೋಜನೆಗಳು, ಉದ್ಯಮ ಆರಂಭಿಸಲು ಸಬ್ಸಿಡಿ ಪಡೆಯುವುದು ಸೇರಿದಂತೆ ನಾನಾ ಮಾಹಿತಿಗಾಗಿ ಸಂಪರ್ಕಿಸುವ ವಿಳಾಸ: 7618786813/14 ರಿಂದ 18ರವರೆಗೆ, 0802227 1192/93/96/97.
*ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂರಕ್ಷಣೆ ಹಾಗೂ ರಫ್ತು ನಿಗಮ ನಿಯಮಿತ, ನಂ.17, ಜನರಲ್ ಕೆ.ಎಸ್ . ತಿಮ್ಮಯ್ಯ ರಸ್ತೆ (ರಿಚ್ಮಂಡ್ ರಸ್ತೆ) ಬೆಂಗಳೂರು-25.
*ರಾಜ್ಯದ ವಿವಿಧ ಜಿಲ್ಲೆಗಳಲ್ಲಿವೈವಿಧ್ಯಮಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಅವುಗಳಿಗೆ ಸ್ಥಳೀಯ ಮಹತ್ವವಿರುವ ಬೆಳೆಗಳ ಸಂಸ್ಕರಣೆಯೊಂದಿಗೆ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ಕೆಪೆಕ್ ಮಾಡುತ್ತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಗುರಿಯಾಗಿಸಿಕೊಂಡು ಪಿಎಂಎಫ್ ಎಂಇ ಯೋಜನೆಯಡಿ ಅಗತ್ಯ ಸಾಮಾನ್ಯ ಇನ್ಕು್ಯಬೇಷನ್ ಕೇಂದ್ರ (ಸಿಐಸಿ)ಗಳನ್ನು ಸ್ಥಾಪಿಸಲು ದೃಢ ಹೆಜ್ಜೆಯಿಡಲಾಗಿದೆ.
-ವೆಂಕಟರಾಮರೆಡ್ಡಿ ಜೆ. ಪಾಟೀಲ್ , ವ್ಯವಸ್ಥಾಪಕ ನಿರ್ದೇಶಕರು, ಕೆಪೆಕ್
***
ಬಾಕ್ಸ್
ರೈತೋದ್ಯಮಿಗಳ ಬೆಳವಣಿಗೆಗೆ ಪೂರಕ ಪಿಎಂಎಫ್ ಎಂಇ ಯೋಜನೆಯಡಿ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸಾಮಾನ್ಯ ಇನ್ಕು್ಯಬೇಷನ್ ಕೇಂದ್ರಗಳನ್ನು ಸ್ಥಾಪಿಸುವಲ್ಲಿಕೆಪೆಕ್ ಸಂಸ್ಥೆ ಗುರುತರ ಪಾತ್ರ ವಹಿಸಿದೆ. ರೈತರಿಗೆ ನೆರವಾಗಲೆಂದೇ ಮೈದಳೆದಿರುವ ಈ ಕೇಂದ್ರಗಳಲ್ಲಿ ಹಣ್ಣು, ತರಕಾರಿ, ಸಿರಿಧಾನ್ಯಗಳು ಮತ್ತು ಸಾಂಬಾರು ಪದಾರ್ಥಗಳೂ ಸೇರಿದಂತೆ ಎಲ್ಲಾಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಗತಿಪರ ರೈತರು, ರೈತ ಉದ್ದಿಮೆದಾರರು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ 15 ಲಕ್ಷ ರೂಪಾಯಿವರೆಗೂ ಸಬ್ಸಿಡಿ ನೀಡಲಾಗುತ್ತಿದೆ. ಕಳೆದ 2 ವರ್ಷಗಳಲ್ಲೇ ನಾವು ಐದು ಸಾವಿರ ಘಟಕಗಳ ಸ್ಥಾಪನೆಗೆ ನೆರವಾಗಿರುವುದು ದಾಖಲೆಯಾಗಿದೆ. ರಾಜ್ಯದಲ್ಲಿಹೆಚ್ಚಿನ ಪ್ರಮಾಣದಲ್ಲಿಆಹಾರ ಉದ್ದಿಮೆದಾರರನ್ನು ಸೃಷ್ಟಿಸುವಲ್ಲಿ, ಉತ್ತೇಜಿಸುವಲ್ಲಿಮಹತ್ವದ ಪಾತ್ರ ವಹಿಸುತ್ತಿರುವುದು ಅತ್ಯಂತ ಪ್ರಮುಖ ಮತ್ತು ಗಮನಾರ್ಹ ಬೆಳವಣಿಗೆಯಾಗಿದೆ.
-ಬಿ.ಎಚ್ . ಹರೀಶ್ , ಅಧ್ಯಕ್ಷರು, ಕೆಪೆಕ್
---------
ಸಚಿವರ ಕೋಟ್
ಕೃಷಿ ಇಲಾಖೆ ವ್ಯಾಪ್ತಿಯಲ್ಲಿರುವ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್ ) ಅಡಿಯಲ್ಲಿಅನುಷ್ಠಾನಗೊಳ್ಳುತ್ತಿರುವ ‘ಪಿಎಂಎಫ್ ಎಂಇ’ ಯೋಜನೆಯನ್ನು ಬಳಸಿಕೊಂಡು ರೈತರು ಸ್ವತಃ ಉದ್ಯಮಿಗಳಾಗಬೇಕು. ತಾವು ಬೆಳೆದ ಹಾಗೂ ಸುತ್ತಮುತ್ತಲಿನ ರೈತರು ಬೆಳೆದ ಬೆಳೆಗಳನ್ನು ಮೌಲ್ಯವರ್ಧಿಸಿ, ಮೌಲ್ಯಯುತ ಉತ್ಪನ್ನಗಳನ್ನಾಗಿಸಿ, ಸ್ವಂತ ಬ್ರ್ಯಾಂಡ್ ನಿರ್ಮಿಸಿ ಮಾರುಕಟ್ಟೆಯಲ್ಲಿಮಾರಾಟ ಮಾಡುವಂತಾಗಬೇಕು. ಇಂತಹ ಎಲ್ಲಾಶ್ರಮಗಳಿಗೆ ಕೆಪೆಕ್ ಬಲವಾದ ಬೆನ್ನೆಲುಬಾಗಿ ನಿಲ್ಲಲಿದೆ. ರಾಜ್ಯ ಸರಕಾರವು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಪಿಎಂಎಫ್ ಎಂಇ ಯೋಜನೆಯ ಅನುಷ್ಠಾನವು ತೀವ್ರ ವೇಗ ಪಡೆದುಕೊಂಡಿದೆ. ಈ ಯೋಜನೆಯಡಿ ಗ್ರಾಮೀಣ ಮಹಿಳೆಯರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿಉದ್ಯಮಿಗಳಾಗುತ್ತಿದ್ದಾರೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು.
-ಧಿಪಿ.ಎಂ. ನರೇಂದ್ರ ಸ್ವಾಮಿ, ಕೃಷಿ ಸಚಿವರು
ರೈತರು, ನವೋದ್ಯಮಿಗಳು, ಮಹಿಳೆಯರು ಆಹಾರೋದ್ಯಮಿಗಳಾಗಬೇಕು. ಹೆಚ್ಚು ಹೆಚ್ಚು ಉದ್ದಿಮೆದಾರರು ಆಹಾರ ಸಂಸ್ಕರಣಾ ಉದ್ಯಮ ಪ್ರವೇಶಿಸಬೇಕು ಎಂಬ ಆಶಯದೊಂದಿಗೆ ಕೆಪೆಕ್ ಕಾರ್ಯನಿರ್ವಹಿಸುತ್ತಿದೆ.
-ಡಾ. ಎಚ್ .ಕೆ. ಶಿವಕುಮಾರ್ , ಪ್ರಧಾನ ವ್ಯವಸ್ಥಾಪಕರು, ಕೆಪೆಕ್