ಚೇಳೂರು: ತಾಲೂಕಿನ ನಾರೇಮದ್ದೇಪಲ್ಲಿಗ್ರಾಪಂನ ಜಂಗಾಲಪಲ್ಲಿಗ್ರಾಮದಲ್ಲಿಸಪ್ಪಲಮ್ಮ ಜಾತ್ರೆ ಅಂಗವಾಗಿ ಗ್ರಾಮಸ್ಥರು ಸಪ್ಪಲಮ್ಮ ದೇವಿಗೆ ವಿಶೇಷ ಪೂಜೆ, ಅಭೀಷೇಕ ನೆರವೇರಿದವು.
ಗ್ರಾಮಾಂತರ ಪ್ರದೇಶವಾದ ಜಂಗಾಲಪಲ್ಲಿಗ್ರಾಮದಲ್ಲಿದಶಕಗಳಿಂದಲೂ ಸಂಪ್ರದಾಯಬದ್ಧವಾಗಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಹಳ್ಳಿಯ ಸೊಗಡಿನ ಕಾರ್ಯಕ್ರಮಗಳನ್ನು ನೋಡಲು ಜನ ಸೇರಿದ್ದರು. ಗ್ರಾಮದ ನಾನಾ ದೇವಾಲಯಗಳಲ್ಲಿಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆದವು. ಗ್ರಾಮದೇವತೆ ಸಪ್ಪಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿಮೆರವಣಿಗೆ ಮಾಡಲಾಯಿತು. ಮಹಿಳೆಯರು ಮಂಗಳವಾದ್ಯಗಳೊಂದಿಗೆ ದೀಪಗಳನ್ನು ಹೊತ್ತು ದೇವಾಲಯದ ಬಳಿಗೆ ತೆರಳುತ್ತಿದ್ದರು.22 ಸಿಎಲ್ ಆರ್ 5
ಚೇಳೂರು ತಾಲೂಕು ನಾರೇಮದ್ದೇಪಲ್ಲಿಗ್ರಾಪಂನ ಜಂಗಾಲಪಲ್ಲಿಗ್ರಾಮದ ಸಪ್ಪಲಮ್ಮ ಜಾತ್ರೆಯಲ್ಲಿಮಹಿಳೆಯರು ದೀಪದಾರತಿ ಹೊತ್ತು ದೇವಾಲಯಕ್ಕೆ ತೆರಳಿದರು.