Un Urgent Call For Gender Equality A Setback To Womens Rights
ಪುಟ 4 ಲೀಡ್
Contributed by: Jaya shree|Vijaya Karnataka•
ಲಿಂಗ ಸಮಾನತೆಗೆ ದೊಡ್ಡ ಹಿನ್ನಡೆ
ಧಿ- ಅಸಮಾನತೆ ತೊಡೆದುಹಾಕಲು ವಿಶ್ವಸಂಸ್ಥೆ ತುರ್ತು ಕರೆ- ಸಂಸ್ಥೆಗಳಲ್ಲಿಹಣಕಾಸಿನ ಕೊರತೆ
- ಮುಂದುವರಿದ ಪುರುಷರ ಪ್ರಾಬಲ್ಯ
- ಮೂವರಲ್ಲಿಒಬ್ಬ ಮಹಿಳೆಗೆ ದೌರ್ಜನ್ಯ
ವಿಶ್ವದಲ್ಲಿಮಹಿಳಾ ಸಮಾನತೆಯ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗುತ್ತಿದ್ದು, ರಾಜಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿಮಹಿಳೆಯರ ಹಕ್ಕುಗಳಿಗೆ ಹಿಂಜರಿಕೆ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಆತಂಕ ವ್ಯಕ್ತಪಡಿಸಿದೆ.
ಕಳೆದ ಎರಡು ವರ್ಷಗಳಲ್ಲಿಮಹಿಳಾ ಸಮಾನತೆಗಾಗಿ ಕೆಲಸ ಮಾಡುವ ಮೂರರಲ್ಲಿಒಂದು ಸಂಸ್ಥೆಯ ಅಧಿಕಾರ ಕುಸಿದಿದೆ. 2030ರೊಳಗೆ ಲಿಂಗ ಸಮಾನತೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಯಾವುದೇ ಗುರಿಯು ಸರಿಯಾದ ಹಾದಿಯಲ್ಲಿಲ್ಲಎಂದು ಯುಎನ್ ವುಮೆನ್ ಮತ್ತು ಡಿಇಎಸ್ ಎ ಬಿಡುಗಡೆ ಮಾಡಿರುವ ‘ಜೆಂಡರ್ ಸ್ನಾಪ್ ಶಾಟ್ 2026’ ವರದಿ ಎಚ್ಚರಿಸಿದೆ.
‘‘ಹಣಕಾಸಿನ ಕೊರತೆಯು ಈ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. 2021ರ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಸಮಾನತೆಗಾಗಿರುವ ನಿಧಿ ತೀವ್ರವಾಗಿ ಕುಸಿದಿದ್ದು, 2023 ಮತ್ತು 2024ರ ನಡುವೆ ಮಹಿಳಾ ಹಕ್ಕುಗಳ ಸಂಘಟನೆಗಳಿಗೆ ಸಿಗುತ್ತಿದ್ದ ಧನಸಹಾಯ ಶೇಕಡಾ 28ರಷ್ಟು ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಶೇಕಡಾ 42ರಷ್ಟು ಸಂಸ್ಥೆಗಳು ಬಜೆಟ್ ಕಡಿತದಿಂದಾಗಿ ತೊಂದರೆ ಎದುರಿಸುತ್ತಿವೆ. ಇಂದಿಗೂ ಜಗತ್ತಿನ ಬಹುತೇಕ ಪ್ರಮುಖ ಅಧಿಕಾರಗಳು ಪುರುಷರ ಕೈಯಲ್ಲಿಯೇ ಇವೆ. ಪ್ರತಿ ಏಳು ದೇಶಗಳಲ್ಲಿಆರು ದೇಶಗಳನ್ನು ಪುರುಷರೇ ಮುನ್ನಡೆಸುತ್ತಿದ್ದಾರೆ. ರಾಷ್ಟ್ರೀಯ ಸಂಸತ್ತುಗಳಲ್ಲಿಮಹಿಳೆಯರ ಪ್ರತಿನಿಧಿತ್ವ ಶೇಕಡಾ 27.4ರಷ್ಟಿದ್ದು, ಶೇ. 90ರಷ್ಟು ರಕ್ಷಣಾ ಸಚಿವರು ಮತ್ತು ಶೇ. 80ಕ್ಕೂ ಹೆಚ್ಚು ಹಣಕಾಸು ಸಚಿವರು ಪುರುಷರೇ ಆಗಿದ್ದಾರೆ. ಕಾರ್ಪೋರೇಟ್ ವಲಯದಲ್ಲೂಕೇವಲ ಶೇ. 6ರಷ್ಟು ಸಿಇಒ ಹುದ್ದೆಗಳಲ್ಲಿಮಾತ್ರ ಮಹಿಳೆಯರಿದ್ದಾರೆ’’ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
‘‘ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹೆಣ್ಣುಮಕ್ಕಳು ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಮೂವರಲ್ಲಿಒಬ್ಬ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ, ಪುರುಷರಿಗಿಂತ ಎರಡೂವರೆ ಪಟ್ಟು ಹೆಚ್ಚು ಸಮಯವನ್ನು ಮಹಿಳೆಯರು ಮನೆಯ ಕೆಲಸಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಹವಾಮಾನ ಬದಲಾವಣೆ ಮತ್ತು ಎಐ ಕ್ಷೇತ್ರಗಳಲ್ಲೂಲಿಂಗ ಅಸಮಾನತೆ ಮುಂದುವರಿದಿದೆ. ಈ ಸಮಾನತೆಯ ಕೊರತೆಯನ್ನು ನೀಗಿಸಲು ಮತ್ತು ಮಹಿಳಾ ಹಕ್ಕುಗಳನ್ನು ರಕ್ಷಿಸಲು ವಿಶ್ವ ನಾಯಕರು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ’’ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ಕರೆ ನೀಡಿವೆ.