‘ಮಹಾತ್ಮರ ಜೀವನ ನಮಗೆ ಆದರ್ಶವಾಗಲಿ’

Contributed byshrishailmali78@gmail.com|Vijaya Karnataka
Vijay Karnataka
ವಿಕ ಸುದ್ದಿಲೋಕ ಅರಟಾಳ

ಅಧ್ಯಾತ್ಮವನ್ನು ಯಾರು ತಿಳಿದುಕೊಳ್ಳುತ್ತಾರೋ, ಅವರು ಸದ್ಗುರುವಿನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಎಂದು ಇಂಚಗೇರಿ ಶ್ರೀ ಸದ್ಗುರು ಪ್ರಭುಜಿ ಮಹಾರಾಜರು ಹೇಳಿದರು.
ಅವರು, ಸಮೀಪದ ಬಾಡಗಿ ಗ್ರಾಮದ ಸದ್ಗುರು ಶ್ರೀ ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾಮಹೋತ್ಸವಕ್ಕೆ ಕರ್ತೃ ಗದ್ದುಗೆ ಹಾಗೂ ದಾಸಬೋಧ ವೀಣಾ ಪೂಜೆಯೊಂದಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ‘‘ಚನ್ನಸಂಗಮೇಶ್ವರ ಸಾಧು ಮಹಾರಾಜರು ನಮಗೆ ಪರಮಾತ್ಮನ ನಾಮಸ್ಮರಣೆ ಮಾಡುವ ದಾರಿ ಹಾಕಿಕೊಟ್ಟಿದ್ದಾರೆ. ಅಂತಹ ಮಹಾತ್ಮರ ಜೀವನ ನಮಗೆ ಆದರ್ಶವಾಗಬೇಕು,’’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಬಾಡಗಿಯ ಶ್ರೀ ಸಿದ್ಧಲಿಂಗ ಸಾಧು ಮಹಾರಾಜರು ಮಾತನಾಡಿ, ‘‘ಮನುಷ್ಯನ ಮನಸ್ಸಿನಲ್ಲಿದಿವ್ಯ ಶಕ್ತಿ ತುಂಬಿದೆ. ಆ ಶಕ್ತಿಯನ್ನು ಅರಿತು ಸದ್ಗುರುವಿನ ಕೃಪೆಗೆ ಪಾತ್ರರಾದರೆ ಜಿವನ ಮುಕ್ತಿ ಸಿಗುತ್ತದೆ,’’ ಎಂದರು.

ಬಾಡಗಿಯ ವೇದಮೂರ್ತಿ ಸಂಗಯ್ಯ ಹಿರೇಮಠ, ಹಿಪ್ಪರಗಿ ಸಿದ್ಧಾರೂಢ ಶರಣರು, ಹಿಪ್ಪರಗಿಯ ಗುರುಪಾದ ಶರಣರು, ಶಿವಾನಂದ ಶರಣರು, ವಿಜಯ ಮಹಾರಾಜರು, ವಿಠ್ಠಲ ಮುಧೋಳ, ಚನ್ನಪ್ಪ ನೇಮಗೌಡ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಸದಾಶಿವ ಉಮರಾಣಿ, ಮಹಾಂತೇಶ ಉಮರಾಣಿ, ಸಂಗಮೇಶ ನೇಮಗೌಡ, ಚಂದ್ರಕಾಂತ ಮಮದಾಪುರ, ಹನುಮಂತ ಮಾಡಗ್ಯಾಳ, ದುರ್ಗಪ್ಪ ವಡ್ಡರಮತ್ತಿತರರಿದ್ದರು. ಬಿ.ಕೆ.ಮುಧೋಳ ನಿರೂಪಿಸಿದರು. ದೇವೇಂದ್ರ ನೇಮಗೌಡ ವಂದಿಸಿದರು.

- 22ಅರಟಾಳ 2

ಬಾಡಗಿ ಗ್ರಾಮದ ಸದ್ಗುರು ಶ್ರೀ ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾಮಹೋತ್ಸವ ಸಮಾರಂಭದಲ್ಲಿಇಂಚಗೇರಿಯ ಶ್ರೀ ಪ್ರಭುಜಿ ಮಹಾರಾಜರು ಮಾತನಾಡಿದರು.