ಗ್ರಾಮನೋಟ)) ಅಭಿವೃದ್ಧಿ ಪಥದಲ್ಲಿಜೋಕಟ್ಟೆ ಗ್ರಾ.ಪಂ.

Contributed bylokeshsurathkal@gmail.com|Vijaya Karnataka
Vijay Karnataka
ನೀರು ಪೂರೈಕೆಯಲ್ಲಿಶೇ.70-80 ಸಾಧನೆ | ಸ್ವಚ್ಛತೆ ನಿಭಾಯಿಸುವುದೇ ಸವಾಲು

ಲೋಕೇಶ್ ಸುರತ್ಕಲ್
ಘ್ಕಿ್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ

ಮಂಗಳೂರು ಜಿಲ್ಲಾಕೇಂದ್ರಕ್ಕೆ ತೀರಾ ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿ ಜೋಕಟ್ಟೆ ಅಭಿವೃದ್ಧಿ ಪಥದಲ್ಲಿದ್ದು, ಮೂಲಸೌಕರ ್ಯಕ್ಕೆ ಅನುದಾನ ಕೊರತೆ ಇಲ್ಲ. ಆದರೆ ಬೈಕಂಪಾಡಿ ಕೈಗಾರಿಕಾ ಪ್ರದೇಶ, ಎಸ್ ಇಝಡ್ ಗಳಲ್ಲಿಉತ್ತರ ಭಾರತದ ಕಾರ್ಮಿಕರು ಹೆಚ್ಚಾಗಿದ್ದು, ಇಲ್ಲಿಸ್ವಚ್ಛತೆ ಸಮಸ್ಯೆಯನ್ನು ನಿಭಾಯಿಸುವುದೇ ಸವಾಲಾಗಿದೆ.

2011ರ ಗಣತಿ ಪ್ರಕಾರ 7473 ಇಲ್ಲಿನ ಜನಸಂಖ್ಯೆ. ಜೋಕಟ್ಟೆ ಪಂಚಾಯಿತಿಗೆ 62ನೇ ತೋಕೂರು ಒಂದೇ ಗ್ರಾಮ ಒಳಪಟ್ಟಿದ್ದು, ಕಾನ ಬೋರ್ಕಟ್ಟೆ, ಕುಳಾಯಿ, ಬಾಳ, ಕಳುವಾರು, ಕೆಂಜಾರು, ಬೈಕಂಪಾಡಿ ಕೈಗಾರಿಕಾ ಪ್ರದೇಶ ಗಡಿ ಭಾಗಗಳಾಗಿವೆ. ಜೋಕಟ್ಟೆ ಕೆಳಗಿನ ತೋಕೂರು, ಶೇಡಿಗುರಿ, ಮೈಂದಗುರಿ ಜನದಟ್ಟಣೆಯ ಪ್ರದೇಶವಾಗಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿಪ್ರಸ್ತುತ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಒಂದು ಹಂತದ ವರೆಗೆ ಯಶಸ್ವಿಯಾಗಿದೆ. ಕುಡಿಯುವ ನೀರಿಗಾಗಿ ಮಳವೂರು ಡ್ಯಾಂ ಮುಖ್ಯ ಮೂಲವಾಗಿದ್ದು, ನೀರು ಪೂರೈಕೆಯಲ್ಲಿಪಂಚಾಯಿತಿ ಶೇ.70-80 ಸಾಧನೆ ಮಾಡಿದೆ. ತೆರಿಗೆ ಸಂಗ್ರಹದಲ್ಲಿಶೇ.70 ಗುರಿ ಸಾಧನೆ ಮಾಡಲಾಗಿದೆ. ಎಂಆರ್ ಪಿಎಲ್ , ಎಸ್ ಇಝಡ್ ಸಿಎಸ್ ಆರ್ ಮೂಲಕ ರಸ್ತೆ ಅಭಿವೃದ್ಧಿ, ನೀರು ಪೂರೈಸುವಲ್ಲಿಪಂಚಾಯಿತಿ ಜತೆ ಕೈಜೋಡಿಸಿವೆ.

ಸಮಸ್ಯೆಗಳೂ ಹಲವು:

15ನೇ ಹಣಕಾಸು ಯೋಜನೆ ಅನುದಾನ ಬರಬೇಕಾಗಿದ್ದು, ಆದರೂ ಮೂಲಸೌಕರ್ಯಕ್ಕೆ ಅನುದಾನ ಕೊರತೆಯಾಗಿಲ್ಲ. ಮೊಬೈಲ್ ನೆಟ್ ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ. ಕೆಬಿಎಸ್ ಬಳಿ ರೈಲ್ವೇ ಕ್ರಾಸಿಂಗ್ ನಲ್ಲಿದಿನಕ್ಕೆ ಹಲವು ಸಲ ರೈಲ್ವೇ ಗೇಟ್ ಹಾಕಲಾಗುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ಸವಾಲಾಗಿದೆ. ರೈಲ್ವೇ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿದ್ದರೂ, ಪೂರ್ಣವಾಗಬೇಕಿದೆ.

ಕೋಟ್

ಕಸ ಸಂಗ್ರಹಕ್ಕೆ ಇನ್ನೊಂದು ವಾಹನ ಒದಗಿಸಬೇಕಾಗಿದೆ. ಉಳಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿಅಭಿವೃದ್ಧಿ ಕೆಲಸಗಳು ವಿಳಂಬವಿಲ್ಲದೆ ಆಗುತ್ತಿದೆ.

- ಟಿ.ಎನ್ . ಖಾದರ್ , ಜೋಕಟ್ಟೆ ನಿವಾಸಿ

----------

ಎಲ್ಲರ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿಅಭಿವೃದ್ಧಿ ಕಾರ್ಯ ಚೆನ್ನಾಗಿ ನಡೆಯುತ್ತಿವೆ. ಕಸ ಸಂಗ್ರಹ ಸ್ವಚ್ಛತೆ ಕಾರ್ಯದಲ್ಲಿಶೇ.100 ಸಾಧನೆ ಮಾಡಿದಲ್ಲಿ ಪಂಚಾಯಿತಿ ಹೆಸರು ಇನ್ನಷ್ಟು ಮೇಲ್ಪಂಕ್ತಿಗೆ ಬರಬಹುದು.

- ಅಬ್ದುಲ್ಲಾಅಸಫ್ , ಪಂಚಾಯಿತಿ ಪ್ರಭಾರ ಪಿಡಿಒ

-----------

ಜೋಕಟ್ಟೆ ಪಂಚಾಯಿತಿ ವ್ಯಾಪ್ತಿಯಲ್ಲಿಉತ್ತಮ ಅಭಿವೃದ್ಧಿ ಕಾರ್ಯಗಳಾಗಿವೆ. ಕೆಬಿಎಸ್ ಬಳಿ 2 ಕೋಟಿ ರೂ. ವೆಚ್ಚದ ರಸ್ತೆ ಕಾಂಕ್ರೀಟೀಕರಣ ನಡೆಸಲಾಗಿದೆ. ರೈಲ್ವೇ ಅಂಡರ್ ಪಾಸ್ ಕಾಮಗಾರಿ ಶೇ.80ರಷ್ಟು ಪೂರ್ಣವಾಗಿದೆ. ಬಾಕಿ ಕೆಲಸಗಳು ಇನ್ನೆರಡು ತಿಂಗಳಲ್ಲಿಪೂರ್ಣವಾಗಲಿದೆ.

- ಉಮರ್ ಫಾರೂಕ್ , ನಿಕಟಪೂರ್ವ ಅಧ್ಯಕ್ಷರು ಜೋಕಟ್ಟೆ ಗ್ರಾಪಂ

ಬೇಡಿಕೆಗಳು

* ಕಸ ಸಂಗ್ರಹಕ್ಕೆ ಇನ್ನೂ ಒಂದು ವಾಹನ ಹೆಚ್ಚುವರಿಯಾಗಿ ಬೇಕಿದೆ.

* ಮೊಬೈಲ್ ನೆಟ್ ವರ್ಕ್ ಸಮಸ್ಯೆ ಸರಿಯಾಗಬೇಕಿದೆ.

* ಕೆಬಿಎಸ್ ಬಳಿ ಅಂಡರ್ ಪಾಸ್ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ

*

ಪಂಚಾಯಿತಿ ವ್ಯಾಪ್ತಿಯಲ್ಲಿ

ಜನಸಂಖ್ಯೆ 7473

ಹಿರಿಯ ಪ್ರಾಥಮಿಕ ಶಾಲೆ 1

ಪ್ರೌಢಶಾಲೆ 2

ಖಾಸಗಿ ಶಾಲೆ 1

21ಜೊಕಟ್ಟೆ

-

ಇಲ್ಲಿಗೆ ಗ್ರಾಮ ನೋಟ ಸಾಕು

ಧಿಧಿಧಿಧಿಧಿಧಿಧಿಧಿಧಿ-