ರಿಪ್ಪನ್ ಪೇಟೆಯ ವರಸಿದ್ದಿ ವಿನಾಯಕನ ಉತ್ಸವಕ್ಕೆ ಚಾಲನೆ

Contributed by: parashurammkerehalli@gmail.com|Vijaya Karnataka•
rippanpete varasiddhi vinayaka festival blessings
ರಿಪ್ಪನ್ ಪೇಟೆಯ ವರಸಿದ್ದಿ ವಿನಾಯಕನ ಉತ್ಸವಕ್ಕೆ ಚಾಲನೆ

ವಿಕ ಸುದ್ದಿಲೋಕ ರಿಪ್ಪನ್ ಪೇಟೆ
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ತಿಲಕ್ ಮಂಟಪದಲ್ಲಿಪ್ರತಿಷ್ಠಾಪಿಸಲಾಗಿದ್ದ 59ನೇ ವರ್ಷದ ವರಸಿದ್ಧಿ ವಿನಾಯಕನ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಗುರುವಾರ ಮಧ್ಯಾಹ್ನ ಚಾಲನೆ ನೀಡಲಾಯಿತು.

ನೂರಾರು ಯುವಕರು ಕೇಸರಿ ಧ್ವಜಗಳೊಂದಿಗೆ ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳಲ್ಲಿಬೈಕ್ ಗಳೊಂದಿಗೆ ಸಂಚರಿಸಿದರು. ಸಂಜೆ 6 ಗಂಟೆಗೆ ವಿನಾಯಕನ ರಾಜಬೀದಿ ಉತ್ಸವ ಆರಂಭವಾಗುತ್ತಿದ್ದಂತೆ ಮಂಗಳ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕಿದ ಭಕ್ತರು ಭಾವ ಪರವಶರಾಗಿ ಘೋಷಣೆಗಳನ್ನು ಮೊಳಗಿಸುತಿದ್ದರು. ಧ್ವನಿವರ್ಧಕದ ಗೀತೆಯೊಂದಿಗೆ ನೃತ್ಯದಲ್ಲಿಪಾಲ್ಗೊಂಡ ಯುವಕ, ಯುವತಿಯರ ರಂಗು ಜನಾಕರ್ಷಣೆ ಪಡೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿಗಣೇಶನ ಬರುವಿಕೆಗೆ ಕಾದು ನಿಂತ ಗ್ರಾಮಸ್ಥರು ಗಣೇಶನನ್ನು ಕಣ್ತುಂಬಿ ಕೊಂಡು, ಹಣ್ಣು ಕಾಯಿ ಅರ್ಪಿಸಿದರು.

ಶಾಸಕರಾದ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ ಆಗಮಿಸಿ ಉತ್ಸವದಲ್ಲಿಪಾಲ್ಗೊಂಡು ವಿನಾಯಕನಿಗೆ ಮಾಲಾರ್ಪಣೆ ಮಾಡಿದರು.

ಕಲಾ ತಂಡಗಳ ವೈಭವ:

ಸಾಂಸ್ಕೃತಿಕ ಕಲಾ ತಂಡಗಳಾದ ತಮಟೆ ವಾದ್ಯ, ಜಿಮ್ನಾಸ್ಟಿಕ್ , ಕತ್ತಿ ವರಸೆ, ದೊಣ್ಣೆ ವರಸೆ, ಬೆಂಕಿ ಚೆಂಡಿನಾಟ, ಕೀಲುಕುದುರೆ, ನವಿಲು ಕುಣಿತ, ಕೋಲಾಟ, ಗೊಂಬೆ ಕುಣಿತ, ಡೊಳ್ಳು, ತಟ್ಟಿರಾಯ,ಮುಂತಾದ ಭಜನಾ ತಂಡಗಳು ಸಾರ್ವಜನಿಕರನ್ನು ರಂಜಿಸಿ ಉತ್ಸವಕ್ಕೆ ಮೆರಗು ನೀಡಿದ್ದವು. ವಿನಾಯಕ ವೃತ್ತದಲ್ಲಿರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉಪಹಾರ ವಿತರಣೆ :

ಉತ್ಸವದಲ್ಲಿಭಾಗಿಯಾದ ಸಾರ್ವಜನಿಕರಿಗೆ ಬನ್ನಿ ನಗರ, ವಿದ್ಯಾನಗರ, ಹನುಮಂತಪ್ಪ ರಸ್ತೆ, ಶಬರೀಶ ನಗರ,ಕೆಇಬಿ ಸಮೀಪ, ಗವಟೂರುಗಳಲ್ಲಿಸಿಹಿ ಪಾನೀಯ ಮತ್ತು ಉಪಹಾರ ವಿತರಿಸಲಾಯಿತು. ರಾಮನಗರದಲ್ಲಿಮುಸ್ಲಿಂ ಯುವಕರು ಮೆರವಣಿಗೆಯಲ್ಲಿಪಾಲ್ಗೊಂಡವರಿಗೆ ತಂಪು ಪಾನೀಯ, ಸಿಹಿತಿನಿಸು ವಿತರಿಸಿ ಶುಭಹಾರೈಸಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.

ಪೊಲೀಸ್ ಬಿಗಿ ಭದ್ರತೆ :

ಗಣೇಶೋತ್ಸವದ ಭದ್ರತೆಗಾಗಿ ತೀರ್ಥಹಳ್ಳಿ ಎಎಸ್ ಪಿ ಭಾನುಪ್ರಕಾಶ್ ನೇತೃತ್ವದಲ್ಲಿಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ25 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಅಗ್ನಿಶಾಮಕ ದಳ, ಕೆ ಎಸ್ ಆರ್ ಪಿ, ಡಿಎಆರ್ ತುಕಡಿಗಳನ್ನು ಸನ್ನದ್ದವಾಗಿಡಲಾಗಿದೆ. ಸೇನಾ ಅಧ್ಯಕ್ಷ ಸುಧೀಂದ್ರ ಪೂಜಾರಿ, ಕಾರ್ಯದರ್ಶಿ ನವೀನ, ಪದಾಧಿಕಾರಿಗಳಾದ ಚೋಳ ರಾಜ್ , ಆರ್ . ರಾಘವೇಂದ್ರ, ಎಂ.ಬಿ.ಮಂಜುನಾಥ, ಸುರೇಶ್ ಸಿಂಗ್ , ವೀರಭದ್ರಪ್ಪ, ಕೃಷ್ಣ, ಶ್ರೀನಿವಾಸ ಆಚಾರ್ , ತೀರ್ಥೇಶ್ , ಭೀಮರಾಜ್ ಮತ್ತಿತರರು ಹಾಜರಿದ್ದರು.

24 ಆರ್ ಪಿಟಿ 1

ರಿಪ್ಪನ್ ಪೇಟೆಯ ಹಿಂದೂ ರಾಷ್ಟ್ರ ಸೇನಾ ರಾಜಬೀದಿ ಉತ್ಸವದಲ್ಲಿಯುವಕರ ಕುಣಿತ.

24 ಆರ್ ಪಿಟಿ 2

ರಿಪ್ಪನ್ ಪೇಟೆ ಗಣೇಶನ ಮೆರವಣಿಗೆಯಲ್ಲಿಕೀಲು ಕುದುರೆ ತಂಡ.

24 ಆರ್ ಪಿಟಿ 3 ರಿಪ್ಪನ್ ಪೇಟೆ ಗಣೇಶನ ಮೆರವಣಿಗೆಯಲ್ಲಿಪಾಲ್ಗೊಂಡ ತಟ್ಟಿರಾಯ, ಟ್ಯಾಬ್ಲೋ.

4 ರಿಪ್ಪನ್ ಪೇಟೆ ಗಣೇಶನ ಮೆರವಣಿಗೆಯಲ್ಲಿಪಾಲ್ಗೊಂಡ ಮಹಿಳಾ ಭಜನಾ ತಂಡ.

24 ಆರ್ ಪಿಟಿ 5 ರಿಪ್ಪನ್ ಪೇಟೆ ಗಣೇಶನ ಮೆರವಣಿಗೆಯಲ್ಲಿಪಾಲ್ಗೊಂಡ ಪಟ ಕುಣಿತ ತಂಡ.

24 ಆರ್ ಪಿಟಿ 6 ರಿಪ್ಪನ್ ಪೇಟೆ ಹಿಂದೂ ರಾಷ್ಟ್ರಸೇನಾ ಗಣೇಶ ಮೂರ್ತಿ.