ನಿವೇಶನದ ಜಮೀನುಗಳ ಮಾಹಿತಿ ಅಂತಿಮಗೊಳಿಸಿ

Contributed by: madhugirinews@gmail.com|Vijaya Karnataka•
prompt disposal of private land proposals for settlement instructions from the district commissioner
ಸ್ಥಳ ಪರಿಶೀಲನೆ ಕಡ್ಡಾಯ; ಅರ್ಹ ಜಮೀನುಗಳ ಪ್ರಸ್ತಾವನೆ ಶೀಘ್ರ ವಿಲೇವಾರಿಗೆ ಡಿಸಿ ಸೂಚನೆ

ವಿಕ ಸುದ್ದಿಲೋಕ ತುಮಕೂರು
ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿಜಿಲ್ಲೆಯಲ್ಲಿಗುರುತಿಸಿರುವ ಸರಕಾರಿ ಜಮೀನುಗಳ ಕ್ರೋಢೀಕೃತ ಮಾಹಿತಿಯನ್ನು ಶೀಘ್ರ ಅಂತಿಮಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನಡೆದ ಪರಿಶೀಲನಾ ಸಭೆಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿನಿವೇಶನ ಹಂಚಿಕೆಗಾಗಿ ಗುರುತಿಸಿರುವ ಸರಕಾರಿ ಜಮೀನು ಹಾಗೂ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಸಮಗ್ರ ಪರಿಶೀಲನಾ ಸಭೆಯಲ್ಲಿಮಾತನಾಡಿದ ಅವರು, ಜಿಲ್ಲೆಯಲ್ಲಿಒಟ್ಟು 869 ಸರ್ವೆ ನಂಬರ್ ಗಳಲ್ಲಿ1,959 ಎಕರೆ ಜಮೀನನ್ನು ನಿವೇಶನಕ್ಕಾಗಿ ಗುರುತಿಸಲಾಗಿದೆ. ಈ ಪೈಕಿ 582 ಜಾಗಗಳ ಸ್ಥಳ ಪರಿಶೀಲನೆ ಪೂರ್ಣಗೊಂಡಿದ್ದು, ಪರಿಶೀಲನೆ ಬಳಿಕ 281 ಜಾಗಗಳು ನಿವೇಶನ ನಿರ್ಮಾಣಕ್ಕೆ ಸೂಕ್ತವಲ್ಲಎಂದು ವರದಿ ಸಲ್ಲಿಕೆಯಾಗಿದೆ ಎಂದರು.

ಅರ್ಹವಲ್ಲದ ಜಮೀನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಳಂಬ ಮಾಡದೆ ಸ್ಥಳ ತನಿಖೆ ನಡೆಸಿ ಶೀಘ್ರ ವಿಲೇವಾರಿ ಮಾಡಬೇಕು. ನಿವೇಶನ ನಿರ್ಮಾಣಕ್ಕೆ ಅರ್ಹವಾಗಿರುವ ಜಮೀನುಗಳನ್ನು ಅಂತಿಮಗೊಳಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಿವೇಶನಕ್ಕಾಗಿ ಗುರುತಿಸಿರುವ ಪ್ರತಿಯೊಂದು ಜಮೀನಿನ ಸ್ಥಳ ಪರಿಶೀಲನೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಪರಿಶೀಲನೆ ವೇಳೆ ಸ್ಥಳದ ಜಿಪಿಎಸ್ ಸಹಿತ ಛಾಯಾಚಿತ್ರಗಳನ್ನು ಪಡೆದು ಸಂಬಂಧಿಸಿದ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು. ಸ್ಥಳ ಪರಿಶೀಲನೆ ಹಾಗೂ ದಾಖಲೆಗಳ ಪರಿಶೀಲನೆಯಲ್ಲಿಯಾವುದೇ ಗೊಂದಲ ಅಥವಾ ಲೋಪಕ್ಕೆ ಅವಕಾಶ ನೀಡಬಾರದು ಎಂದರು.

ಈಗಾಗಲೇ ಗುರುತಿಸಿರುವ ಜಮೀನುಗಳಲ್ಲಿಸೂಕ್ತತೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಕ್ಷಣ ಪರಿಹರಿಸಬೇಕು. ಆಕಾರ್ ಬಂದ್ ದಾಖಲೆಗಳನ್ನು ಪರಿಶೀಲಿಸಿ, ಅರಣ್ಯ ಇಲಾಖೆಯ ಎನ್ ಒಸಿ ಅಗತ್ಯವಿದ್ದಲ್ಲಿಕೂಡಲೇ ಪಡೆಯಬೇಕು. ಹಳ್ಳ, ತಗ್ಗು ಪ್ರದೇಶ ಸೇರಿದಂತೆ ನಿವೇಶನ ನಿರ್ಮಾಣಕ್ಕೆ ಅಡ್ಡಿಯಾಗುವ ಅಂಶಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಥವಾ ಇತರೆ ಪ್ರಮುಖ ರಸ್ತೆಗಳ ವ್ಯಾಪ್ತಿಗೆ ಜಾಗ ಒಳಪಟ್ಟಿದ್ದರೆ ಸಂಬಂಧಿಸಿದ ಇಲಾಖೆಯಿಂದ ಬಫರ್ ಜೋನ್ ಗೆ ಸಂಬಂಧಿಸಿದ ಮಾಹಿತಿ ಹಾಗೂ ಅಗತ್ಯ ಅನುಮತಿ ಪಡೆಯಬೇಕು. ಎಲ್ಲಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಫೋಟೋ 25ಕೆಜಿಎಚ್ 2: ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಸರಕಾರಿ ಜಮೀನು ಹಾಗೂ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಸಮಗ್ರ ಪರಿಶೀಲನಾ ಸಭೆಯಲ್ಲಿಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿದರು.