ಬಳ್ಳಾರಿ (ಗ್ರಾಮೀಣ)-ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

Contributed by: ajaykappagalmutt@gmail.com|Vijaya Karnataka•
ballari students block bus protest urgent demand for school transport
ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ವಿಕ ಸುದ್ದಿಲೋಕ ಬಳ್ಳಾರಿ (ಗ್ರಾಮೀಣ)
ಇಬ್ರಾಹಿಂಪುರ ಸೇರಿ ನಾನಾ ಗ್ರಾಮಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಇಲ್ಲಎಂದು ಆರೋಪಿಸಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸೇತುವೆ ಬಳಿ ಗುರುವಾರ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದರು.

ವಿದ್ಯಾರ್ಥಿ ವಿ.ಸುಮನ್ ಮಾತನಾಡಿ, ‘‘ನಿತ್ಯವೂ ಬಳ್ಳಾರಿಗೆ ನಮ್ಮೂರಿಂದ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುತಿದ್ದಾರೆ. ಆದರೆ ಎತ್ತಿನಬೂದಿಹಾಳ್ ಗ್ರಾಮಕ್ಕೆ ಬಸ್ ತೆರಳಿ ನಮ್ಮ ಊರಿಗೆ ಬರುತ್ತದೆ. ಆಗ ನಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ನಲ್ಲಿಕೂರಲು ಸ್ಥಳವಿಲ್ಲದೆ ನಿತ್ಯ ಸಮಸ್ಯೆ ಆಗುತ್ತಿದೆ. ಕೆಲ ವಿದ್ಯಾರ್ಥಿಗಳು ನಿತ್ಯ ಬಸ್ ಇಲ್ಲದೆ ಮನೆಗೆ ತೆರಳುತ್ತಿದ್ದಾರೆ. ಬಸ್ ಸ್ಟೆಫ್ಸ್ ಬಳಿ ನಿಂತು ಹೋಗಿರುವ ನಿದರ್ಶನಗಳಿವೆ. ಅಲ್ಲದೆ ಶಾಲಾ- ಕಾಲೇಜುಗಳಿಗೆ ತಡವಾಗಿ ಹೋಗುತ್ತಿದ್ದರಿಂದ ಅಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ,’’ ಎಂದರು.

ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಸ್ಥೆ ಅಧಿಕಾರಿಗಳು ವಿಜಯಪುರ ಕ್ಯಾಂಪ್ , ಇಬ್ರಾಹಿಂಪುರ ಹಾಗೂ ಬೊಬ್ಬಕುಂಟೆ ಗ್ರಾಮಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಲು ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು,’’ ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

24 ಬಿಎಲ್ ವೈ ಅಜಯ್ 0

ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸೇತುವೆ ಬಳಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದರು.