ಕೊಪ್ಪಳ- ‘ಪರಿಸರ ಸಾರ್ವಜನಿಕ ಆಲಿಕೆ ಸಭೆ ರದ್ದುಪಡಿಸಿ’

Contributed by: shreekanta.akki@timesofindia.com|Vijaya Karnataka•
koppal jds raises seven demands to cancel environmental meeting
‘ಪರಿಸರ ಸಾರ್ವಜನಿಕ ಆಲಿಕೆ ಸಭೆ ರದ್ದುಪಡಿಸಿ’

ವಿಕ ಸುದ್ದಿಲೋಕ ಕೊಪ್ಪಳ
‘‘ತಾಲೂಕಿನ ಕನಕಾಪುರದಲ್ಲಿಖಾಸಗಿ ಕಂಪನಿಯ ವಿಸ್ತರಣೆಗಾಗಿ ಸೆ.29ರಂದು ಕರೆಯಲಾಗಿರುವ ‘ಪರಿಸರ ಸಾರ್ವಜನಿಕ ಆಲಿಕೆ ಸಭೆ’ ರದ್ದುಪಡಿಸಬೇಕು ಹಾಗೂ ವಿಸ್ತರಣೆಗಾಗಿ ಕಂಪನಿ ಸಲ್ಲಿಸಿರುವ ಕರಡು ಪ್ರತಿಯನ್ನು ತಿರಸ್ಕರಿಸಬೇಕು,’’ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದರು.

ನಗರದಲ್ಲಿಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು. ‘‘ಮುಂದಿನ ದಿನಗಳಲ್ಲಿಜೀವಿಗಳು ಮತ್ತು ಕೃಷಿಯನ್ನು ನಿರ್ನಾಮ ಮಾಡಿ ನರಕ ಸೃಷ್ಟಿಸುವ ಈ ಘಟಕದ ವಿಸ್ತರಣೆ ಬೇಡ. ನಿಯಮಾವಳಿ ಉಲ್ಲಂಘಿಘಿಸಿ ಹಳ್ಳವನ್ನೇ ಮಾಯ ಮಾಡಿ, ಆ ಕಂಪನಿ ಕಾರ್ಯಾಚರಣೆ ನಡೆಸುತ್ತಿದೆ.ಇದೀಗ ಹೆಚ್ಚುವರಿ 66.2 ಹೆಕ್ಟೇರ್ ಭೂಮಿಯಲ್ಲಿಘಟಕ ವಿಸ್ತರಿಸಿ, ಮಿಶ್ರ ಲೋಹದ ಉಕ್ಕು ಉರುಳುಗಳ ಉತ್ಪಾದನಾ ಸಾಮರ್ಥ್ಯವನ್ನು 0.7 ಮಿಲಿಯನ್ ಟನ್ ನಿಂದ 0.9 ಮಿಲಿಯನ್ ಟನ್ ಗೆ ಏರಿಸಲು ಪರಿಸರ ಪ್ರಭಾವ ಮೌಲ್ಯಮಾಪನ ಹಾಗೂ ಪರಿಸರ ನಿರ್ವಹಣಾ ಯೋಜನೆಯ ಕರಡನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಈ ಕರಡು ಪ್ರತಿಯಲ್ಲಿಭಾರಿ ಪ್ರಮಾದಗಳಿವೆ. ಇಲಾಖೆಗಳ ಸ್ಥಾಪಿತ ನಿಯಮಾವಳಿ ಉಲ್ಲಂಘಿಘಿಸಲಾಗಿದೆ. ವಾಸ್ತವಾಂಶ ಮರೆಮಾಚಲಾಗಿದೆ. ಪರವಾನಗಿ ಪಡೆಯಲು ರಾಜ್ಯ ಮಟ್ಟದ ಪರಿಸರ ಅಧ್ಯಯನ ಪ್ರಾಧಿಕಾರದಿಂದ ಪರಿಸರ ವಿಮೋಚನಾ ಪತ್ರ ಪಡೆಯುವುದು ಅಗತ್ಯ. ಜನರನ್ನು ವಂಚಿಸಿ, ಅನೈತಿಕ ಮಾರ್ಗದ ಮೂಲಕ ವಿಮೋಚನಾ ಪತ್ರ ಪಡೆಯಲು ಹುನ್ನಾರ ನಡೆಯುತ್ತಿದೆ. ಈ ಹುನ್ನಾರದಲ್ಲಿರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಪಾಲುದಾರರಾಗಿದ್ದಾರೆ,’’ ಎಂದು ಆರೋಪಿಸಿದರು.

‘‘ಸಾರ್ವಜನಿಕ ಆಲಿಕೆ ಸಭೆ ಬಾಧಿತ ಗ್ರಾಮದಲ್ಲಿನಡೆಯಬೇಕು ಎಂಬುದು ನಿಯಮ. ಕನಕಾಪುರದಲ್ಲಿಸೆ.29ರಂದು ಸಭೆ ನಡೆಯಲಿದೆ ಎಂದು ಕಂಪನಿ ಸಾರ್ವಜನಿಕರಿಗೆ ತಿಳಿಸಿದೆ. ಆದರೆ, ಪರಿಸರ ಇಲಾಖೆಯ ಅಧಿಕಾರಿಗಳು ಈ ಸಭೆ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿನಡೆಯಲಿದೆ ಎಂದು ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ,’’ ಎಂದರು.

ಜೆಡಿಎಸ್ ಪಕ್ಷದ ಜಿಲ್ಲಾಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾಎಸ್ಟಿ ಘಟಕದ ಅಧ್ಯಕ್ಷ ರಮೇಶ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾಪ್ರಧಾನ ಕಾರ್ಯದರ್ಶಿ ಶರಣಪ್ಪ ಜೆ.ಡಿ. ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ ಇದ್ದರು.

---

25ಕೆಪಿಎಲ್ ಫೋಟೊ01

ಸಿ.ವಿ.ಚಂದ್ರಶೇಖರ