ಆಂಟಿಬಯೋಟಿಕ್ಸ್ ದುರ್ಬಳಕೆ ದೊಡ್ಡ ಪಿಡುಗು

Contributed by: Vinayaka Naik P|Vijaya Karnataka•
antibiotic misuse a major threat to health
ಕಿಕ್ಕರ್ : ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ | ಫಾರ್ಮಸಿಸ್ಟ್ ಗಳು ಆರೋಗ್ಯ ಕ್ಷೇತ್ರದ ಸರಪಳಿಯ ಕೊಂಡಿ

----
ಆಂಟಿಬಯೋಟಿಕ್ಸ್ ದುರ್ಬಳಕೆ ದೊಡ್ಡ ಪಿಡುಗು

ವಿಕ ಸುದ್ದಿಲೋಕ ದಾವಣಗೆರೆ

ಆಂಟಿಬಯೋಟಿಕ್ಸ್ , ಎನ್ ಡಿಪಿಎಸ್ ಡ್ರಗ್ಸ್ ನ ದುರ್ಬಳಕೆ ಹಾಗೂ ಸೆಲ್ ್ಫ ಮೆಡಿಕೇಷನ್ ಆರೋಗ್ಯ ಕ್ಷೇತ್ರದ ದೊಡ್ಡ ಪಿಡುಗಾಗಿದೆ ಎಂದು ಸಹಾಯಕ ಔಷಧ ನಿಯಂತ್ರಕಿ ಎಂ.ಎಸ್ . ಗೀತಾ ಕಳವಳ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಹಾಗೂ ಜಿಲ್ಲಾಔಷಧ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿಶುಕ್ರವಾರ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಅತೀಯಾದ ಆಂಟಿಬಯೋಟಿಕ್ಸ್ ಬಳಕೆಯಿಂದ ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಕೂಡ ಸಮಸ್ಯೆಯಾಗಿದೆ. ಹಾಗಾಗಿ ಆಂಟಿಬಯೋಟಿಕ್ಸ್ , ಎನ್ ಡಿಪಿಎಸ್ ಡ್ರಗ್ಸ್ ನ ದುರ್ಬಳಕೆ ಹಾಗೂ ಸೆಲ್ ್ಫ ಮೆಡಿಕೇಷನ್ ಬಗ್ಗೆ ಜನಜಾಗೃತಿ ಮೂಡಿಸುವುದು ಫಾರ್ಮಾಸಿಸ್ಟ್ ಗಳ ಆದ್ಯ ಕರ್ತವ್ಯವಾಗಬೇಕು. ಆದರೆ, ಇದನ್ನ ಯಾವ ಫಾರ್ಮಾಸಿಸ್ಟ್ ಗಳು ಮಾಡುತ್ತಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದರು.

ಫಾರ್ಮಿಸಿಸ್ಟ್ ಗಳು ಸರಪಳಿ:

‘‘ಆರೋಗ್ಯ ಸೇವೆಯಲ್ಲಿಫಾರ್ಮಾಸಿಸ್ಟ್ ಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಫಾರ್ಮಸಿಸ್ಟ್ ಗಳು ಆರೋಗ್ಯ ಕ್ಷೇತ್ರದ ಸರಪಳಿಯ ಪ್ರಮುಖ ಕೊಂಡಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಆರೋಗ್ಯದ ವಿಚಾರದಲ್ಲಿಜನರಿಗೆ ಮೊದಲು ಸಿಗುವುದೇ ಫಾರ್ಮಸಿಸ್ಟ್ . ಸರಿಯಾದ ಮಾಹಿತಿಯೊಂದಿಗೆ ರೋಗಿಗೆ ಸೂಕ್ತ ಔಷಧ ನೀಡುವುದು ನಿಮ್ಮ ಆದ್ಯ ಕರ್ತವ್ಯ. ಔಷಧವನ್ನ ಯಾವ ರೀತಿಯಾಗಿ ಸಂಗ್ರಹಿಸಬೇಕು ಹಾಗೂ ಯಾವುದೇ ರೋಗಿಗಳಿಗೆ ಅಡ್ವರ್ಸ್ ಡ್ರಗ್ ರಿಯಾಕ್ಷನ್ ಆದಾಗ, ಯಾವುದೇ ಡ್ರಗ್ ಆದ್ರೂ ಅದರ ಅಡ್ವರ್ಸ್ ಇವೆಂಟ್ ಏನಾಗುತ್ತೆ ಅಥವಾ ರೋಗಿಗಳಿಗೆ ಬಂದಂತಹ ಅಡ್ವರ್ಸ್ ಡ್ರಗ್ ರಿಯಾಕ್ಷನ್ ಬಗ್ಗೆ ರೋಗಿಗಳಿಗೆ ಸೂಕ್ತ ಸಲಹೆ ನೀಡಬೇಕು’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪೋಪಟ್ ಲಾಲ್ ಜೈನ್ ಮಾತನಾಡಿ, ‘‘ನಾವು ನಡೆಸುತ್ತಿರುವುದು ಕೇವಲ ವ್ಯಾಪಾರವಲ್ಲ. ಅದು ಜವಾಬ್ದಾರಿಯುತ ವ್ಯವಹಾರ. ಯಾರೋ ಒಬ್ಬ ಔಷಧ ವ್ಯಾಪಾರಿ ತಪ್ಪು ಮಾಡುವುದರಿಂದ ಉಳಿದ ಶೇ.99 ರಷ್ಟು ಜನರಿಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಪ್ರಾಮಾಣಿಕವಾಗಿ ಔಷಧ ವ್ಯಾಪಾರ ನಡೆಸಬೇಕು’’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿಉಪ ಔಷಧ ನಿಯಂತ್ರಕ ಡಾ.ಎಂ. ಖಾಲಿದ್ ಅಹಮದ್ ಖಾನ್ , ಬಾಪೂಜಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಲ್ . ಪ್ರಭುಶಂಕರ್ , ಎಸ್ .ಆರ್ . ಪ್ರಸನ್ನಕುಮಾರ್ ಇತರರಿದ್ದರು.

----

ಬಾಕ್ಸ್ ...

ಡ್ರಗ್ ರಿಯಾಕ್ಷನ್ ದೂರು ನೀಡಿ

‘‘ಯಾವುದೇ ರೋಗಿ ಮೆಡಿಸಿನ್ ತಗೊಂಡಾಗ ಡ್ರಗ್ ರಿಯಾಕ್ಷನ್ ಆದಾಗ ಡಿಪಾಟ್ಮೆಂರ್ ಟ್ ಕೊಟ್ಟಿರುವ ಕ್ಯೂಆರ್ ಕೋಡ್ ಮೂಲಕ ಸಾರ್ವಜನಿಕರು ಅದರಲ್ಲಿನೋಂದಣಿ ಮಾಡಿಸಿಕೊಂಡು ದೂರು ನೀಡಬಹುದು. ಯಾವುದಾದರೂ ಅನಧಿಕೃತ ಔಷಧ ಕಂಡು ಬಂದಲ್ಲಿಅದನ್ನು ತಡೆಯುವಲ್ಲಿಕಾರ್ಯನಿರ್ವಹಿಸಬೇಕು’’ ಎಂದು ಎಂ.ಎಸ್ . ಗೀತಾ ಸಲಹೆ ನೀಡಿದರು.

----

* ಫೋಟೋ ಬರಲಿದೆ

ದಾವಣಗೆರೆಯಲ್ಲಿಶುಕ್ರವಾರ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.