ಸೆ.27 ರಂದು ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸಮ್ಮೇಳನ

Contributed by: gangadhar.korekkana@gmail.com|Vijaya Karnataka•
information about the kannada medium teachers association meeting on september 27
ವಿಕ ಸುದ್ದಿಲೋಕ ಕಾಸರಗೋಡು

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ - ಹೊಸದುರ್ಗ ಉಪಜಿಲ್ಲಾಸಮ್ಮೇಳನವು ಸೆ.27ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡಿನ ‘ಕನ್ನಡ ಅಧ್ಯಾಪಕ ಭವನ’ದಲ್ಲಿ ನಡೆಯಲಿದೆ.
ಕಾಸರಗೋಡು ಉಪಜಿಲ್ಲಾ ಶಿಕ್ಷಣ ಾಧಿಕಾರಿ ಶಶಿಧರ ಎಂ. ಸಮ್ಮೇಳನವನ್ನು ಉದ್ಘಾಟಿಸುವರು. ಬೇಕಲ- ಹೊಸದುರ್ಗ ಉಪಜಿಲ್ಲಾಅಧ್ಯಕ್ಷ ವಿಠಲ ಅಡ್ವಳ ಅಧ್ಯಕ್ಷತೆ ವಹಿಸುವರು. ನಿವೃತ್ತ ಉಪಜಿಲ್ಲಾವಿದ್ಯಾಧಿಕಾರಿ ಕೆ. ಪುಂಡರೀಕಾಕ್ಷ ಆಚಾರ್ಯ, ಕಾಸರಗೋಡು ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಕೆ. ಸತ್ಯನಾರಾಯಣ ರಾವ್ , ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ ಮುಖ್ಯ ಅತಿಥಿಗಳಾಗಿರುವರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ ಎ.,ಉಪಾಧ್ಯಕ್ಷೆ ಯಶೋದಾ ಕೆ.ಎ., ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಕೆ.ವಿ. ಕಾಸರಗೋಡು ಉಪಜಿಲ್ಲಾಉಪಾಧ್ಯಕ್ಷೆ ವಿಜಯ ಕುಮಾರಿ ಶುಭಾಶಂಸನೆಗೈಯುವರು.

ಕಾಸರಗೋಡು ಜಿಲ್ಲಾಕಾರ್ಯದರ್ಶಿ ಪೂರ್ಣಿಮಾ ಎಂ., ಕೇಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು ಕೆ., ಬೇಕಲ -ಹೊಸದುರ್ಗ ಉಪಜಿಲ್ಲಾಕಾರ್ಯದರ್ಶಿ ಧನ್ಯಶ್ರೀ, ಕಾಸರಗೋಡು ಉಪಜಿಲ್ಲಾಕೋಶಾಧಿಕಾರಿ ಸುರೇಖಾ ಕೆ. ಉಪಸ್ಥಿತರಿರುವರು. ಬಳಿಕ ಕಾಸರಗೋಡು ಉಪ ಜಿಲ್ಲಾಅಧ್ಯಕ್ಷ ಕುಶ ಪಿ.ಎಲ್ . ಅಧ್ಯಕ್ಷತೆಯಲ್ಲಿಪ್ರತಿನಿಧಿ ಸಮ್ಮೇಳನ ನಡೆಯಲಿದೆ. ವರದಿ ಮಂಡನೆ, ಲೆಕ್ಕಪತ್ರ ಮಂಡನೆ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.