ಸ್ಥಳೀಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಸ್ಥೆ ಪ್ರಸಕ್ತ ಸಾಲಿನಲ್ಲಿಒಟ್ಟು 32.22 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಣ್ಣಯ್ಯ ಹಿರೇಮಠ ತಿಳಿಸಿದ್ದಾರೆ.ಸೊಸೈಟಿ ಸಭಾಂಗಣದಲ್ಲಿಜರುಗಿದ ಸಭೆಯಲ್ಲಿಅವರು ಮಾತನಾಡಿ, ‘‘ಸಂಘ ಪ್ರಸ್ತುತ 1,316 ಸದಸ್ಯರನ್ನು ಹೊಂದಿದ್ದು, 1.84 ಕೋಟಿ ರೂ. ಶೇರು ಬಂಡವಾಳ, 4.17 ಕೋಟಿ ರೂ. ಠೇವಣಿ ಹಾಗೂ 15.50 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸಂಸ್ಥೆಯ ಉತ್ತಮ ಪ್ರಗತಿಯ ಹಿನ್ನೆಲೆಯಲ್ಲಿಸಂಘದ ಸದಸ್ಯರಿಗೆ ಶೇ. 4 ರಷ್ಟು ಲಾಭಾಂಶ ಘೋಷಿಸಲಾಗಿದೆ,’’ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಾಹಕ ಶಂಕರ ನಾಯಿಕ ವಾರ್ಷಿಕ ವರದಿ ಓದಿದರು. ವೇದಮೂರ್ತಿ ಬಸಯ್ಯ ಹಿರೇಮಠ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷೆ ಇಂದಮ್ಮ ಪುರದ, ಆಡಳಿತ ಮಂಡಳಿ ಸದಸ್ಯರಾದ ಬಸಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಕಲ್ಲಪ್ಪ ಬನ್ನಿಕೊಪ್ಪ, ಹೊನ್ನಪ್ಪ ನರಗಟ್ಟಿ, ಸೋಮನಗೌಡ ಪಾಟೀಲ, ಸುರೇಖಾ ಹಲಕಿ, ಆನಂದ ಮಂಟೂರ, ಸುಭಾಷ ಕಾಂಬಳೆ ಹಾಗೂ ಸಂಘದ ಇತರ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.