ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು 2026-27ನೇ ಸಾಲಿನಲ್ಲಿನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಪಾಲ್ಗೊಂಡು ವಿವಿಧ ವಿಭಾಗದಲ್ಲಿಗೆಲುವು ಸಾಧಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದರು.ಪದವಿ ಪೂರ್ವ ವಿಭಾಗ ಅಥ್ಲೆಟಿಕ್ಸ್ ವಿಭಾಗದಲ್ಲಿಅಕ್ಷರ ಎನ್ ಗೌಡ-ಚಕ್ರ ಎಸೆತ, ಹ್ಯಾಮರ್ ಥ್ರೂ ಪ್ರಥಮ, ಗುಂಡು ಎಸೆತದಲ್ಲಿದ್ವಿತೀಯ ಸ್ಥಾನ, ಮಾನಸ ಕೆ-ಜಾವಲಿನ್ ಎಸೆತ ಪ್ರಥಮ, ವಂದನ ಎನ್ .ಜಿ-ಜಾವಲಿನ್ ದ್ವಿತೀಯ, ಅನು-ಎತ್ತರ ಜಿಗಿತ ಪ್ರಥಮ, ಕವನ-ತ್ರಿವಿದ ಜಿಗಿತ ಪ್ರಥಮ, ಪಲ್ಲವಿ ಎಚ್ - ನಡಿಗೆ ಪ್ರಥಮ, ಹ್ಯಾಮರ್ ದ್ವಿತೀಯ, ಮಮತ ಕುಮಾರಿ-ನಡಿಗೆ ದ್ವಿತೀಯ. ಕಬಡ್ಡಿ ತಂಡ, ಪ್ರಥಮ ಸ್ಥಾನ, ವಾಲಿಬಾಲ್ ತಂಡ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಟನ್ ತಂಡ ಪ್ರಥಮ ಸ್ಥಾನ ಗಳಿಸಿದ್ದು, ತಂಡ ಎಲ್ಲರನ್ನು ಅಭಿನಂದಿಸಿದರು. ಪ್ರೌಢಶಾಲೆ ವಿಭಾಗ ಅಥ್ಲೆಟಿಕ್ - ಜೀವಿತ ಸಿ.ಎನ್ - ಗುಂಡು ಎಸೆತ ಪ್ರಥಮ, ದಿವ್ಯಶ್ರೀ-ಚಕ್ರ ಎಸೆತ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲ್ ಬ್ಯಾಡ್ಮಿಂಟನ್ ತಂಡ ಪ್ರಥಮ ಸ್ಥಾನ ಹಾಗೂ ಚೆಸ್ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಎಲ್ಲರನ್ನು ಅಭಿನಂದಿಸಿದರು.
ಸಿ.ಎಸ್ .ಪುಟ್ಟರಾಜು ಮಾತನಾಡಿ, ‘‘ಬಾಲಕಿಯದ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಭಾಗವಹಿಸಿ ಹಲವು ವಿಭಾಗದಲ್ಲಿಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹೆಣ್ಣುಮಕ್ಕಳು ಸ್ಟ್ರಾಂಗ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಹೆಣ್ಣುಮಕ್ಕಳು ಕ್ರೀಡಾಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವಂತೆ ಪ್ರೇರಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಆಯ್ಕೆಯಾದ ಎಲ್ಲಾವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲೂಉತ್ತಮವಾಗಿ ಆಟವಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು,’’ ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಟಿ.ರಾಮಕೃಷ್ಣೇಗೌಡ, ನಿರ್ದೇಶಕ ಪ್ರಸನ್ನಕುಮಾರ್ , ಆಡಳಿತಾಧಿಕಾರಿ ಬಿ.ಮಂಜುಳಾ, ಪ್ರಾಂಶುಪಾಲ ಎಸ್ .ಎ.ಮಮತಾ, ಸಹ ಶಿಕ್ಷಕಿ ಎ.ಲತಾ, ದೈಹಿಕ ಶಿಕ್ಷಕಿ ಬಿ.ಎಸ್ .ಅನಿತಾ, ಯು.ಸಿ. ವಿಂದ್ಯಾ ಸೇರಿದಂತೆ ಉಪನ್ಯಾಸಕರು, ಸಹ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ಇದ್ದರು.
ಎಂಡಿವೈ25ಪಿಎನ್ ಡಿ1ಸಿ
ಪಾಂಡವಪುರ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಹಾಗೂ ಆಡಳಿತ ಮಂಡಳಿಯರು ಅಭಿನಂದಿಸಿದರು.