ಪರಶುರಾಂಪುರ : ಜಿಲ್ಲಾಮಟ್ಟದಲ್ಲಿಅ.13ರಂದು ರಾಜವೀರ ಮದಕರಿ ನಾಯಕ ಜಯಂತ್ಯುತ್ಸವ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದು ಜಿಲ್ಲಾನಾಯಕ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.ಇಲ್ಲಿನ ರೈತ ಭವನದಲ್ಲಿಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿಮಾತನಾಡಿ, ಮದಕರಿ ನಾಯಕ ಒಂದು ಸಮಾಜಕ್ಕೆ ಸೀಮಿತವಾದ ರಾಜನಲ್ಲ. ಅವರ ಆಳ್ವಿಕೆ ಅವಧಿಯಲ್ಲಿಎಲ್ಲಸಮಾಜದ ಹಿತ ಕಾಯುವ ಕೆಲಸ ಮಾಡಿದ್ದಾರೆ. ಜತೆಗೆ ಚಿತ್ರದುರ್ಗ ಕಟ್ಟಿ ಬೆಳೆಸಿದ್ದಾರೆ. ಈ ನೆಲದ ಪ್ರತಿಯೊಬ್ಬರೂ ಸಂಭ್ರಮದಿಂದ ಉತ್ಸವದಲ್ಲಿಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿದರು. ಮುಖಂಡರಾದ ಕೃಷ್ಣಮೂರ್ತಿ, ವೆಂಕಟೇಶ, ಮಂಜುನಾಥ್ , ಗ್ರಾಪಂ ಮಾಜಿ ಅಧ್ಯಕ್ಷ ರುದ್ರೇಶ್ , ಅನಿಲ್ , ನಾಗಭೂಷಣ್ , ತ್ಯಾಗರಾಜ, ರವಿ, ಕಿಸಾನ್ ನಾಗರಾಜ, ರಂಗಸ್ವಾಮಿ, ನರೇಂದ್ರ, ರಮೇಶ, ವೀರೇಶ್ , ಏಜೆಂಟ್ ನಾಗರಾಜ, ತಿಪ್ಪೇಸ್ವಾಮಿ, ಸುಧಾಕರ್ , ಮಾಜಿ ಸೈನಿಕ ಸಿದ್ದೇಶ್ ಇದ್ದರು.
25ಪಿಆರ್ ಎಂಪಿ1
ಪರಶುರಾಂಪುರ ಗ್ರಾಮದ ರೈತ ಭವನದಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.