ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Contributed by: sbannure@gmail.com|Vijaya Karnataka•
victorious struggle to include kagawad taluk in drought affected areas
ಬರಪೀಡಿತ ತಾಲೂಕು ಘೋಷಣೆ ಹೋರಾಟಕ್ಕೆ ಜಯ ದೊರೆತ ಹಿನ್ನೆಲೆ

ವಿಕ ಸುದ್ದಿಲೋಕ ಕಾಗವಾಡ
ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದ ಹಿನ್ನೆಲೆಯಲ್ಲಿಬಿಜೆಪಿ ಕಾರ್ಯಕರ್ತರು ಇಲ್ಲಿನ ಚನ್ನಮ್ಮ ವೃತ್ತದಲ್ಲಿಸಂಭ್ರಮಾಚರಿಸಿದರು.

ಬೆಳಗಾವಿ ಜಿಲ್ಲೆಯ ನಾನಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಸರಕಾರ ಕಾಗವಾಡ ತಾಲೂಕನ್ನು ಪಟ್ಟಿಯಿಂದ ಕೈಬಿಟ್ಟಿತ್ತು. ಈ ಹಿನ್ನೆಲೆಯಲ್ಲಿಮಾಜಿ ಸಚಿವ ಶ್ರೀಮಂತ ಪಾಟೀಲ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಅವರ ನೇತೃತ್ವದಲ್ಲಿಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಬೇಡಿಕೆಗಳಿಗೆ ಸ್ಪಂದಿಸಿದ ಸರಕಾರ ಕಾಗವಾಡವನ್ನು ಬರ ತಾಲೂಕು ಎಂದು ಘೋಷಿಸಿದ್ದರಿಂದ ಗುರುವಾರ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ದಾದಾ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಅರುಣ ಗಣೇಶವಾಡಿ, ರಾಕೇಶ ಪಾಟೀಲ, ನ್ಯಾಯವಾದಿ ಎಸ್ .ಟಿ. ಸಮಾಜದ ಅಧ್ಯಕ್ಷ ಪ್ರವೀಣ ಕೆಂಪವಾಡೆ, ಸಚಿನ್ ಕವಟಿಗೆ, ಪ್ರಕಾಶ ಚೌಗುಲೆ, ಅಣ್ಣಾಸಾಹೇಬ ಡೂಗನವರ, ಸಂದೀಪ ಸಾಳುಂಕೆ, ಆಪ್ತ ಸಹಾಯಕ ವಿನಾಯಕ ಶಿಂಧೆ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

- 24 ಕಾಗವಾಡ 1

ಕಾಗವಾಡದ ರಾಣಿ ಚನ್ನಮ್ಮ ವೃತ್ತದಲ್ಲಿಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.